ದೊಡ್ಡಬಳ್ಳಾಪುರ: ನಗರದ ಹಾಲಿನ ಡೈರಿ ಬಳಿಯಲ್ಲಿರುವ ಸರ್ಕಾರಿ ಕುಂಟೆಯನ್ನು ಭೂಗಳ್ಳರಿಂದ ಉಳಿಸುವ ಸಲುವಾಗಿ ಇದೇ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣ ಎಚ್ಚರಿಕೆ ನೀಡಿದೆ.
ಸದರಿ ಭೂಮಿಯ ವಿಸ್ತೀರ್ಣ 2 ಎಕರೆ 04 ಗುಂಟೆ ಬದಲಿಗೆ 0.00 ಎಂದು ನಮೂದಾಗಿರುವುದನ್ನು ನಮ್ಮ ಸಂಘಟನೆ ಖಂಡಿಸಿತ್ತು. ಸದರಿ ಜಾಗವನ್ನು ಕುಂಟೆಯಾಗಿಯೇ ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ಯಾವುದಾದರೂ ಇತರ ಖಾತೆಗಳು ಇದ್ದಲ್ಲಿ ಅವುಗಳನ್ನು ರದ್ದು ಮಾಡಬೇಕೆಂದು ದಿನಾಂಕ: 25-03-2025 ರಂದು ನಮ್ಮ ಸಂಘಟನೆಯಿಂದ ಮಾನ್ಯ ಶಾಸಕರಿಗೆ, ಮಾನ್ಯ ಜಿಲ್ಲಾಧಿಕಾರಿಗಳಿಗೆ, ಮಾನ್ಯ ತಹಶೀಲ್ದಾರ್ ರವರಿಗೆ, ಮಾನ್ಯ ಉಪವಿಭಾಗಾಧಿಕಾರಿಗಳಿಗೆ, ಮಾನ್ಯ ಪೌರಾಯುಕ್ತರಿಗೆ, ಹಾಗೂ ಮಾನ್ಯ ಭೂದಾಖಲೆಗಳ ಸಹಾಯಕ ನಿರ್ದೇಶಕರುಗಳಿಗೆ ಮನವಿಯನ್ನು ಸಲ್ಲಿಸಿದ್ದೆವು.
ನಮ್ಮ ಸಂಘಟನೆಯ ಮನವಿಯ ಮೇರೆಗೆ ಇದೀಗ ಸರ್ಕಾರದಿಂದ ಸರ್ವೇ ನಡೆಸಿದ್ದು, ನಕಾಶೆಯಲ್ಲಿ ಭೂಗಳ್ಳರ ಹಸ್ತಕ್ಷೇಪದಿಂದ ಸದರಿ ಜಾಗದ ಒಂದಷ್ಟು ಭಾಗ ಒತ್ತುವರಿಯಾಗಿರುವುದು ಕಂಡುಬಂದಿದೆ. ಆದರೆ, ತಾಲೂಕು ಆಡಳಿತ ಒತ್ತುವರಿಯನ್ನು ತೆರವುಗೊಳಿಸಿ ಕುಂಟೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಸಮಯ ವ್ಯರ್ಥ ಮಾಡುತ್ತಿರುವುದನ್ನು ಖಂಡಿಸಿ ಆ.15ರ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೆ ಗೌರವ ಸಲ್ಲಿಸಿದ ನಂತರ ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡುವುದಾಗಿ ತಿಳಿಸಿದರು.14ಕೆಡಿಬಿಪಿ2- ಭೂಗಳ್ಳರಿಂದ ಒತ್ತುವರಿಯಾಗಿದೆ ಎನ್ನಲಾದ ಕುಂಟೆ ಪ್ರದೇಶ.