ಆದಿ ಶಂಕರಾಚಾರ್ಯರ ಅವಹೇಳನ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jul 31, 2026, 01:15 AM IST
ಆದಿ ಶಂಕರಚಾರ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವವರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಧುಗಿರಿಯಲ್ಲಿ ವಿಪ್ರ ಸಮುದಾಯದವರು ಎಸಿಗೆ ಮನವಿ ಪತ್ರ ಸಲ್ಲಿಸಿದರು.  | Kannada Prabha

ಸಾರಾಂಶ

ಆದಿ ಶಂಕರಚಾರ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಧುಗಿರಿ ತಾಲೂಕು ಬ್ರಾಹ್ಮಣ ಸಮುದಾಯದವರು ನಗರದಲ್ಲಿ ಮೌನ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಆದಿ ಶಂಕರಚಾರ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಧುಗಿರಿ ತಾಲೂಕು ಬ್ರಾಹ್ಮಣ ಸಮುದಾಯದವರು ನಗರದಲ್ಲಿ ಮೌನ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಶ್ರೀಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್ ಮಾತನಾಡಿ, ನಮ್ಮ ದೇಶದಲ್ಲಿ ಸನಾತನ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯರ ಪೈಕಿ ಶಂಕರಚಾರ್ಯರು ಮೊದಲಿಗರು. ಕೇವಲ 32 ವರ್ಷಗಳ ಕಾಲ ಜೀವಿಸಿದ್ದ ಶಂಕರಚಾರ್ಯರು ಈ ಅಲ್ಪವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಅದ್ವೈತ ತತ್ವವನ್ನು ಪ್ರತಿಪಾದಿಸುತ್ತಾ ಜಗತ್ತಿಗೆ ತಿಳಿಸಿ, ಹಲವಾರು ಮತಗಳಿಂದ ದಾಳಿಗೆ ಒಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಗೊಳಿಸಿದರು. ಶೈವ ,ವೈಷ್ಣವ,ಶಾಕ್ತ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ ಷಣ್ಮತ ಪ್ರತಿಷ್ಠಾಕರಾದರು. ಇತ್ತಿಚೆಗೆ ಶಂಕರಚಾರ್ಯರ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗರು ಅವರ ಬಗ್ಗೆ ಇಲ್ಲಸಲ್ಲದ ಅವಹೇಳನ ಹೇಳಿಕೆ ನೀಡುತ್ತಿದ್ದು, ಸ್ಮಾರ್ಥ , ಮಾದ್ವ ವಿಪ್ರರನ್ನು ಬೇರ್ಪಡಿಸುವ ಹುನ್ನಾರದಲ್ಲಿ ತೊಡಗಿದ್ದಾರೆ. ಇಕತ್ತಿಚೆಗೆ ಆದಿಶಂಕರಚಾರ್ಯರ ಮಾತೃಶ್ರೀ ಅವರ ಚಾರಿತ್ರ್ಯದ ಬಗ್ಗೆ ಶಂಕರಚಾರ್ಯರು ರಚಿಸಿರುವ ಸೌಂದರ್ಯ ಲಹರಿ ಶ್ಲೋಕದ ಬಗ್ಗೆ ಅತಿ ಕೀಳು ಮಟ್ಟದ ಭಾಷೆ ಉಪಯೋಗಿಸಿ ಮಾತನಾಡಿರುವ ವ್ಯಕ್ತಿಯಲ್ಲಿರುವ ಕೊಳಕು ಮನಸ್ಥಿತಿಯಿಂದ ಅಪಾರ ಶಂಕರಚಾರ್ಯರ ಹಾಗೂ ಶೃಂಗೇರಿ ಗುರಗಳ ಅನುಯಾಯಿಗಳಿಗೆ ನೋವುಂಟಾಗಿದೆ. ಆದ್ದರಿಂದ ಮಾತನಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ವೇದ ಬ್ರಹ್ಮ ಶ್ರೀ ನಾಗರಾಜಶಾಸ್ತ್ರಿ, ಶ್ರೀಶಂಕರ ಸೇವಾ ಸಮಿತಿ ಗೌರವಾಧ್ಯಕ್ಷ ಸೂರ್ಯನಾರಾಯಣ್ ರಾವ್, ಶಕುಂತಲಾ, ಕೆ.ನಾರಾಯಣ್, ಸಂಜೀವಮೂರ್ತಿ, ಎಂ.ಎನ್.ನಾಗಭೂಷಣ್, ಎಂ.ಎಸ್.ಬದ್ರಿನಾಥ್, ರಾಘವೇಂದ್ರ, ಭೀಮೇಶ್, ಕೆ.ನಾಗರಾಜು, ಶ್ರೀನಿವಾಸಶಾಸ್ತ್ರಿ, ರಂಗನಾಥ್, ಎಚ್.ವಿ.ಮಂಜುನಾಥ್, ಪಿ.ವಿ.ಬಾಲಕೃಷ್ಣ,ಜಿ. ವೆಂಕಟೇಶ್,ಸತೀಶ್,ನಟರಾಜ ದೀಕ್ಷಿತ್, ಲಕ್ಷ್ಮೀಕಾಂತರಾವ್, ಸುನೀಲ್,ರಮ್ಯಸರಸ್ಪತಿ, ಸಂದ್ಯಾ, ಶೋಭ, ಪದ್ಮ, ಮುರುಳಿ, ಶಾರದಮ್ಮ, ಜೋಡಿದಾರ್ ಮುರುಳೀಧರ್, ನಾರಾಯ, ಉಷಾದೇವಿ ರಮೇಶ್, ಲಕ್ಷ್ಮೀಕಾಂತ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ರೋಸ್ಟರ್ ತಿದ್ದುಪಡಿಗೆ ಆಗ್ರಹಿಸಿ ಲಂಬಾಣಿ ಸಮಾಜದಿಂದ ಮನವಿ
ವಿಷಾಹಾರದಿಂದ 57 ವಿದ್ಯಾರ್ಥಿಗಳು ಅಸ್ವಸ್ಥ: ಭುಗಿಲೆದ್ದ ಆಕ್ರೋಶ