ಹೊಸಪೇಟೆ: ಆರ್‌ಎಸ್‌ಎಸ್ ನೊಂದಣಿಗೆ ಒತ್ತಾಯಿಸಿ ಮತ್ತು ಆರ್‌ಎಸ್‌ಎಸ್ ಸಂಪೂರ್ಣ ಹಣಕಾಸು ವ್ಯವಹಾರಗಳ ವಿವರ ತನಿಖೆಗೊಳಪಡಿಸಬೇಕು. ಸಂಘದ ಹಣಕಾಸು ಮೂಲಗಳನ್ನು ಬಹಿರಂಗ ಪಡಿಸುವಂತೆ ಒತ್ತಾಯಿ ಸಂವಿಧಾನ ರಕ್ಷಿಸಿ, ಸಂವಿಧಾನ ಗೌರವಿಸಿ, ಧೈಯ ವಾಕ್ಯದೊಂದಿಗೆ ಜು.8ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡ ಸೋಮಶೇಖರ್ ಬಣ್ಣದ ಮನೆ ಹೇಳಿದರು.
ನಗರದ ಗಾಂಧಿಚೌಕ್‌ನಿಂದ್ ಪ್ರತಿಭಟನಾ ಮೆರವಣೆಗೆ ಆರಂಭಿಸಿ ನಗರದ ಪ್ರಮುಖ ರಸ್ತೆಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ನಡೆಸಿ, ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಹೇಳಿದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಸಂಚಾಲಕ ಮರಡಿ ಜಂಬಯ್ಯ ನಾಯಕ ಮಾತನಾಡಿ, ಆರ್‌ಎಸ್‌ಎಸ್ ತಾನು ದೇಶಪ್ರೇಮದ ಹೆಸರಿನಲ್ಲಿ ಜನರನ್ನು ಸಂಘಟಿಸುತ್ತಿದೆ. ಆದರೆ ಆಂತರಿಕವಾಗಿ ಪ್ರಜೆಗಳನ್ನು ಧರ್ಮ, ಸಂಸ್ಕೃತಿ, ಜಾತಿ, ಲಿಂಗ, ವರ್ಗಗಳ ಆಧಾರದಲ್ಲಿ ದೇಶದ ಪ್ರಜೆಗಳನ್ನು ವಿಭಜಿಸುತ್ತಿದೆ ಎಂದರು.ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡರಾದ ತಮ್ಮನಾಳಪ್ಪ, ಸಣ್ಣ ಮಾರೆಪ್ಪ, ವೀರಭದ್ರ ನಾಯಕ, ಸದ್ದಾಂ, ಕೃಷ್ಣ ಮೊದಲಿಯಾರ್, ವಿಶಾಲ್ ಮ್ಯಾಸರ್ ಶಿವು.ಸಣ್ಣ ಈರಪ್ಪ ಸೇರಿದಂತೆ ಇತರರು ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಕುರಿತು ಪೋಸ್ಟರ್ ಬಿಡುಗಡೆಗೊಳಿಸಲಾಯಿತು.