ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಹಂತದಲ್ಲಿ ಡೀಸಿ ಕಚೇರಿ ಬಳಿ ಬಿಜೆಪಿಗರ ರ್‍ಯಾಲಿ ಬರುತ್ತಿದ್ದಂತೆಯೇ ಆಟೋ, ಬಸ್, ಬೈಕ್‌ಗಳ ಮೇಲೆ ಮುಖಂಡರೇ ಖುದ್ದು ದಾಳಿ ಮಾಡಿ ಹೆಲ್ಮೆಟ್ ಪುಡಿ ಮಾಡಿದರು. ಬಸ್ಸಿನ ಮೇಲೆ ಬಾಟಲ್ ಎಸೆದರು. ಕಾರ್ ತಡೆದು ವಾಗ್ವಾದ ಮಾಡಿದ ನೋಟಗಳು ಕಂಡವು. ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ನಗರದ ಸರ್ದಾರ್ ಪಟೇಲ್ ವೃತ್ತದಿಂದ ಶುರುವಾದ ಪ್ರತಿಭಟನೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಹೋರಾಟ ಉಗ್ರಗೊಳಿಸಿದರು. ಟೈಯರ್‌ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಘೋಷಣೆ ಕೂಗಿದರು. ಕಲಬುರಗಿ ಜಿಲ್ಲೆಯಲ್ಲಿ ಮೂವರು ಸಚಿವರು ಇದ್ದರೂ, ಬರಗಾಲ ಘೋಷಣೆ ಮಾಡಲು ವಿಫಲವಾಗಿದ್ದಾರೆ. ಕಲಬುರಗಿ ಜಿಲ್ಲೆಯನ್ನ ಬರಪೀಡಿತ ಪ್ರದೇಶ ಘೋಷಣೆ ಮಾಡಿ ತಕ್ಷಣ ರೈತರಿಗೆ 50 ಸಾವಿರ ಪರಿಹಾರಕ್ಕೆ ಆಗ್ರಹಿಸಿದರು. ಬರಪೀಡಿತ ಪ್ರದೇಶ ಘೋಷಣೆ ಮಾಡದೆ ಹೋದ್ರೆ ಮುಂದಿನ ದಿನಗಳಲ್ಲಿ ಕಲಬುರಗಿ ಬಂದ್ ಮಾಡೋದಾಗಿಯೂ ಗುಡುಗಿದರು.ಜಿಲ್ಲೆಯ ಕಾಂಗ್ರೆಸ್ ಶಾಸಕರು ಮಂತ್ರಿಗಿರಿಗಾಗಿ ಹೋರಾಡಿದಂತೆ ಬರ ಘೋಷಣೆಗೆ ಹೋರಾಡಬೇಕಿತ್ತೆಂದು ಬಿಜೆಪಿ ಮುಖಂಡರಾದ ಅಶೋಕ ಬಗಲಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಉಮೇಶ ಜಾಧವ್, ಚಂದು ಪಾಟೀಲ್, ಮಾಜಿ ಸಂಸದ ಉಮೇಶ ಜಾಧವ್ ಮಾತಲ್ಲೇ ತಿವಿದರು.ಬಿಜೆಪಿ ನಗರ ಅಧ್ಯಕ್ಷ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಅಶೋಕ ಗಲಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್, ಉಮೇಶ್ ಪಾಟೀಲ್ ಮಹದೇವ ಬೆಳಮಗಿ, ಶಿವಯೋಗಿ ನಾಗನಹಳ್ಳಿ, ಶರಣು ಸಜ್ಜನ್, ಸುಂದರ್ ಕುಲಕರ್ಣಿ, ಮಲ್ಲಿಕಾರ್ಜುನ ಓಕಲಿ, ಅಶೋಕ್ ಮನಕರ್, ಅನಿಲ್ ಜಾಧವ ಚನ್ನು, ಲಿಂಗನವಾಡಿ ಶರಣು ಸಿಗ್ಗಿ , ವರದ ಶಂಕರ್ ಶೆಟ್ಟಿ, ಮಂಜುನಾಥ್ ಚಿಲ್ ಶೆಟ್ಟಿ, ಶಾಂತು ದುಧಾನಿ, ಸಂತೋಷ ದೋಣಿ, ಶೋಭಾ ಬಾಗೇವಾಡಿ, ಇಂದಿರಾ, ಚಂದಮ್ಮ ಪಾಟೀಲ್, ವಿಜಯಲಕ್ಷ್ಮಿ ಗೊಬ್ಬರಕರ್ ,ಶಶಿಕಲಾ ತೆಂಗಳಿ, ಸಪ್ನಾ ಮಂಗಲಿ, ನಂದ ಬಾಬಾ, ಸುವರ್ಣ ಪಾಟೀಲ್ , ಲಿಂಗರಾಜ್ ಪಟ್ಟಣ ರೈತ ಮೋರ್ಚಾ, ಯುವ ಮೋರ್ಚಾ ನಗರ ಅಧ್ಯಕ್ಷ ಮಹೇಶ ಚವಾಣ್, ಚನ್ನಬಸಪ ಬಗ್ಗೆ, ಶಿವುಲಿಂಗ ಪಾಟೀಲ್, ಗೋಪಾಲ್ ಕುಲಕರ್ಣಿ, ಪ್ರೀತಮ್ ಪಾಟೀಲ್, ಮಂಡಲ ಅಧ್ಯಕ್ಷ ಶ್ರೀನಿವಾಸ.ಜಿ ದೇಸಾಯಿ, ಅಪ್ಪು ಕಣಕಿ, ಅವಿನಾಶ ಕುಲಕರ್ಣಿ, ಶಿವಯೋಗಿ ನಾಗನಹಳ್ಳಿ, ಲಿಂಗರಾಜ ಬಿರಾದಾರ, ವಿಶಾಲ ದರ್ಗಿ, ವೀರಣ್ಣಾ ಹೊನ್ನಳ್ಳಿ, ಮಲ್ಲೂ ಊದನೂರ, ರಾಮ್ಮು ಗುಮ್ಮಟ, ಗುರು ಪಟ್ಟಣ, ರಾಜು ದೇವದುರ್ಗ, ರವಿ ಹಾಗರಗಿ, ಶಂಭುಲಿಂಗ ಬಳಬಟ್ಟಿ, ಕುಮ್ಮಣಗೌಡ ಪಾಟೀಲ, ಅನಿಲ್ ಜಾಧವ, ವೀರು ಪಾಟೀಲ ರಾಯಕೋಡ, ವಿಶ್ವನಾಥ ಸಾಲಿಮಠ ಚವ್ಹಾಣ, ಅರವಿಂದ ನಾಯಕ ಇದ್ದರು.
ಬರ ಪಟ್ಟಿಯಿಂದ ಕಲಬುರಗಿ ಜಿಲ್ಲೆ ಕೈಬಿಟ್ಟಿರುವುದನ್ನು ಖಂಡಿಸಿ ಕಲ್ಬುರ್ಗಿಯಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಬೈಕ್ ಸವಾರನ ಹೆಲ್ಮೆಟ್ ಕಿತ್ತೆಸದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮರುಕ್ಷಣವೇ ಅದನ್ನು ನೆಲಕ್ಕೆ ಹಾಕಿ ಪುಡಿ ಮಾಡಿದ ಘಟನೆ ನಡೆಯಿತು. ಕಲ್ಬುರ್ಗಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಡೆದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.