ಕನ್ನಡಪ್ರಭ ವಾರ್ತೆ ಕೋಲಾರಹಿಂದೂಗಳ ಮೇಲೆ ಸನಾತನ ಧರ್ಮದ ಕಾಲದಿಂದಲೂ ದೌರ್ಜನ್ಯಗಳು ನಿರಂತರವಾಗಿ ಮುಂದುವರೆಯುತ್ತಾ ಬಂದಿವೆ. ಹಿಂದೂಗಳು ಒಗ್ಗಟಾಗಿ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ, ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಹಿಂದೂಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು ಎಂದು ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯಾನಂದ ಸಾಂದೀಪನಿ ಆಶ್ರಮದ ಶ್ರೀ ದತ್ತಾಪಾದುಕನಂದ ಚಿನ್ಮಯನಂದ ಸ್ವಾಮಿ ಕರೆ ನೀಡಿದರು.ಬಾಂಗ್ಲಾ ದೇಶದ ಹಿಂದೂಗಳ ಹಾಗೂ ಶ್ರದ್ದಾ ಕೇಂದ್ರಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳನ್ನು ಖಂಡಿಸಿ ಹಿಂದುಗಳ ಹಿತ ರಕ್ಷಣಾ ಸಮಿತಿಯಿಂದ ನಗರದ ಬಂಗಾರಪೇಟೆ ವೃತ್ತದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ಮೆರಣಿಗೆ ಮೂಲಕ ಮೆರವಣಿಗೆ ನಡೆಸಿದ ನಂತರ ಮೆಕ್ಕೆ ವೃತ್ತದಲ್ಲಿ ಬಹಿರಂಗ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ದೇಶದ ವಿವಿಧೆಡೆ ಪಿತೂರಿ
ರಾಜಸ್ಥಾನದಲ್ಲಿ ಹನುಮಾನ್ ಮೇಲೆ, ಪಶ್ಚಿಮ ಬಂಗಾಳ ನವರಾತ್ರಿ ಉತ್ಸವದಲ್ಲಿ ಕಲ್ಲು ತೂರಾಟ ಸೇರಿದಂತೆ ಹಿಂದೂಗಳನ್ನು ಕೆಣಕುವಂತ ಪಿತೂರಿಗಳು ನಡೆಯುತ್ತಾ ಬಂದಿದೆ, ಇದರ ಜೊತೆಗೆ ರಾಜಕೀಯ ಪಕ್ಷಗಳ ಅಧಿಕಾರದ ದುರಾಸೆಗಳಿಗೆ ಕೆಲವು ಹಿಂದೂಗಳ ಕುಮ್ಮಕ್ಕು ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.ಭಾರತದ ಭಿಕ್ಷೆಯಲ್ಲಿ ಬಾಂಗ್ಲಾದೇಶ ಜೀವಂತವಿದೆ. ೧೯೭೧ರಲ್ಲಿ ಭಾರತದ ಸಹಾಯದ ಹಸ್ತಚಾಚದಿದ್ದರೆ ಇಂದು ಬಾಂಗ್ಲಾದೇಶ ಪಾಕಿಸ್ತಾನದ ಪಾಲಾಗುತ್ತಿತ್ತು, ಸ್ವಾತಂತ್ರ್ಯ ಇರುತ್ತಿರಲಿಲ್ಲ ಎಂಬುವುದು ನೆನಪಿಸಿಕೊಳ್ಳಬೇಕು. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ದವಾಗಿ ಭಾರತ ದೇಶವು ಹಿಂದೂಗಳ ರಕ್ಷಣೆಗೆ ಮುಂದಾಗ ಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದರು.ಬಾಂಗ್ಲಾ ಹಿಂದುಗಳನ್ನು ರಕ್ಷಿಸಿಹಿಂದೂಗಳ ಮೇಲಿನ ದೌರ್ಜನ್ಯ ನಿಯಂತ್ರಿಸುವ ಮನಸ್ಸು ಭಾರತ ಮಾಡಬೇಕಾಗಿದೆ, ಭಾರತವು ಮನಸ್ಸು ಮಾಡಿದಲ್ಲಿ ಬಾಂಗ್ಲಾದೇಶವನ್ನು ೨೪ ಗಂಟೆಯಲ್ಲಿ ವಶಕ್ಕೆ ಪಡೆಯುವ ಶಕ್ತಿ ಭಾರತಕ್ಕೆ ಇದೆ, ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ದ ಯಾವ ಜಗತ್ತಿನ ಯಾವ ರಾಷ್ಟ್ರಗಳು ಮಾತನಾಡುತ್ತಿಲ್ಲ, ಈ ಸಂಬಂಧವಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಸಂವಿಧಾನದ ರಕ್ಷಣೆ ಬಿಳಿ ಹಾಳೆಗಳಷ್ಟೇ ಇದರ ಬಗ್ಗೆ ಪರಿಪೂರ್ಣವಾಗಿ ಅರಿವುಂಟಾಗುವರೆಗೂ ದೌರ್ಜನ್ಯಗಳು ನಿಲ್ಲದು, ಹಿಂದೂಗಳ ಮೇಲೆ ವಿಶ್ವದಲ್ಲಿ ಎಲ್ಲೇ ದೌರ್ಜನ್ಯಗಳು ನಡೆದರು ಖಂಡಿಸುವಂತಾಗಬೇಕು, ಹಿಂದೂಗಳ ಸಂಘಟನೆಗೆ ಸಂಕಲ್ಪ ಮಾಡಬೇಕು, ಪ್ರತಿಭಟಿಸುವ ಮೂಲಕ ಮುಚ್ಚಿರುವ ಕಣ್ಣುಗಳನ್ನು ತೆರೆಸುವಂತಾಗಬೇಕು ಎಂದರು.
ಪ್ರಾಮಾಣಿಕರನ್ನು ಆಯ್ಕೆ ಮಾಡಿಚುನಾವಣೆಯಲ್ಲಿ ನಿಲ೯ಕ್ಷಿಸದೆ ಎಚ್ಚೆತ್ತುಕೊಂಡು ಜವಾಬ್ದಾರಿಯಿಂದ ನಡೆದುಕೊಳ್ಳುವ ಮೂಲಕ ಆಡಳಿತವನ್ನು ಪ್ರಾಮಾಣಿಕರಿಗೆ ನೀಡಬೇಕು, ಮುಂಜಾಗ್ರತಾ ಕ್ರಮವಾಗಿ ಜಾರಿಗೆ ತಂದ ಸಿಎಎ ವಿರುದ್ದ ಎತ್ತಿಕಟ್ಟುವ ವಿಫಲ ಯತ್ನಗಳು ನಡೆದವು. ಪಿಎಫ್‌ಐ ಸಂಘಟನೆಗಳ ಮೂಲಕ ವಿದ್ವಂಸ ಕೃತ್ಯಗಳಿಗೆ ಮಣೆ ಹಾಕಿದವು. ಷರಿಯ ಕಾನೂನುಗಳ ಮಾದರಿಯಲ್ಲಿ ಡಿಜೆ ಹಳ್ಳಿ, ಕೆ.ಜೆ.ಹಳ್ಳಿಯ ಕೃತ್ಯಗಳ ಪ್ರಯತ್ನಗಳು ಉದಾಹರಿಸಬಹುದಾಗಿದೆ ಎಂದರು.ಹಿಂದೂಗಳ ಹಿತರಕ್ಷಣಾ ಸಮಿತಿಯ ಸಂಚಾಲಕ ಉಲ್ಲಾಸ ಮಾತನಾಡಿ, ಜಾಮಾತೆ ಇಸ್ಲಾಂ ಮುಖ್ಯ ಉದ್ದೇಶ ಹಿಂದುಗಳ ವಿರುದ್ದ ಅಕ್ಕಪಕ್ಕದ ದೇಶಗಳನ್ನು ಎತ್ತಿಕಟ್ಟಿ ಪ್ರಚೋದಿಸುವ ಕೆಲಸ ನಡೆಯುತ್ತಿದೆ. ಭಾರತದ ಚುನಾವಣೆಯಲ್ಲಿ ಮತ ಚಲಾವಣೆಯ ಇ.ವಿ.ಎಂ ಯಂತ್ರಗಳ ಪೆಟ್ಟಿಗೆ ವಿರುದ್ದ ಹಿಂದೆ ಅಪಪ್ರಚಾರ ಮಾಡಿದ್ದ ಪಕ್ಷಗಳು ರಾಜ್ಯದಲ್ಲಿ ಈಗ ಗೆದ್ದಿರುವಂತ ಪ್ರತಿ ನಿಧಿಗಳು ಮಾಡಲಿ ನೋಡೋಣ ಎಂದು ಸವಾಲು ಹಾಕಿದರು. ಬಳಿಕ ತಹಸೀಲ್ದಾರ್ ನಯನ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ವೇದಿಕೆಯಲ್ಲಿ ಹಿಂದುಗಳ ಹಿತರಕ್ಷಣಾ ಸಮಿತಿ ಮುಖಂಡರಾದ ಡಾ.ಶಂಕರ್ ನಾಯಕ್. ಆರ್.ಎಸ್.ಎಸ್. ಸಂಚಾಲಕ ನಾಗರಾಜ್, ಮಾಜಿ ಶಾಸಕರಾದ ವೈ.ಸಂಪಂಗಿ, ವೆಂಕಟಮುನಿಯಪ್ಪ, ಮಂಜುನಾಥಗೌಡ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಓಂಶಕ್ತಿ ಚಲಪತಿ, ಎಸ್.ಬಿ.ಮುನಿವೆಂಕಟಪ್ಪ, ಕೆಂಬೋಡಿ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ವೆಂಕಟೇಶ್, ಪಿ.ಎಸ್.ಸತ್ಯನಾರಾಯಣ ರಾವ್, ವಾಸುದೇವರಾವ್, ಶ್ರೀನಿವಾಸ್, ಶಿಳ್ಳಂಗೆರೆ ಮಹೇಶ್, ಸಿ.ಡಿ.ರಾಮಚಂದ್ರ, ಸಿ.ಎಂ.ಆರ್. ಶ್ರೀನಾಥ್, ಬಣಕನಹಳ್ಳಿ ನಟರಾಜ್, ವಡಗೂರು ರಾಮು, ಓಹಿಲೇಶ್ ಇದ್ದರು.