ಕಡೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಡೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕು ಅಂಗನವಾಡಿ ಸಂಘಟನೆ ಅಧ್ಯಕ್ಷೆ ಪಾರ್ವತಮ್ಮ ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷ ಕಲ್ಲೇಶಪ್ಪ ನೇತೃ ತ್ವದಲ್ಲಿ ಎಐಟಿಯುಸಿ ಹಾಗೂ ಅಂಗನವಾಡಿ ಸಂಘಟನೆಗಳ ಒಕ್ಕೂಟದ ದೇಶ ವ್ಯಾಪಿ ಕರೆ ನೀಡಿದ್ದ ಹಿನ್ನಲೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಅಂಗನವಾಡಿ ಕಾರ್ಯಕರ್ತರು ಹೋರಾಟ ನಡೆಸಿದರು.ಪಾರ್ವತಮ್ಮ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸಿಲ್ಲ. ಈ ಬಾರಿ ಬಜೆಟ್ ನಲ್ಲೂ ಗೌರವ ಧನ ಹೆಚ್ಚಳ ಮಾಡಲಿಲ್ಲ. ಹಾಗಾಗಿ ಮುಷ್ಕರ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತಿದ್ದೇವೆ ಎಂದರು. ಕಾರ್ಮಿಕ ಸಂಘಟನೆ ಅಧ್ಯಕ್ಷ ಕಲ್ಲೇಶಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವರ್ಗಕ್ಕೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆದು ಕಾರ್ಮಿಕರ ರಕ್ಷಿಸುವ ಕಾನೂನು ಜಾರಿ ಮಾಡಬೇಕು. ಅಂಗನವಾಡಿ ಮತ್ತು ಕಾರ್ಮಿಕರಿಗೆ ಕನಿಷ್ಠ ₹25 ಸಾವಿರ ವೇತನ ಮತ್ತು ನಿವೃತ್ತಿ ವೇತನ ನೀಡಬೇಕು ಎಂದರು. ಅಂಗನವಾಡಿ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ, ಗ್ರಾಜ್ಯುಟಿ ಜಾರಿ ಮಾಡಿ ಸಿ ಮತ್ತು ಡಿ.ದರ್ಜೆ ನೌಕರರೆಂದು ಪರಿಗಣಿಸಿ ಕಾಯಂ ಮಾಡಬೇಕು ಎಂದು ಆಗ್ರಹಿಸಿದರು. ಒಟಿಪಿಗೆ ಬಳಸುವ ಟಿ.ಎಚ್. ಆರ್ ಮತ್ತು ಎಫ್ ಆರ್ ಎಸ್ ಪದ್ದತಿ ಸರಳೀಕರಣಗೊಳಿಸಬೇಕು.
12ಕೆಕೆಡಿಯು1. ಕಡೂರು ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಾರ್ಮಿಕರು ಮನವಿ ಅರ್ಪಿಸಿದರು.