ಕಾಂಗ್ರೆಸ್‌ ಸರ್ಕಾರದ ವಿರುದ್ಧ ನವಲಗುಂದದಲ್ಲೂ ಪ್ರತಿಭಟನೆ

KannadaprabhaNewsNetwork |  
Published : Nov 25, 2026, 02:15 AM IST
ನವಲಗುಂದದಲ್ಲಿ ಬಿಜೆಪಿಯಿಂದ ರಸ್ತೆ ತಡೆದು  ಬೃಹತ್ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬೆಳೆ ನಷ್ಟ ಅನುಭವಿಸಿದರೂ ಪರಿಹಾರ ಮಾತ್ರ ಕೊಡುತ್ತಿಲ್ಲ. ಕೂಡಲೇ ಬರಪರಿಹಾರ ನೀಡಬೇಕು.

ನವಲಗುಂದ:

ರಾಜ್ಯ ಸರ್ಕಾರದ ಜನ ಹಾಗೂ ರೈತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಪಟ್ಟಣದ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆಯೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್‌ ಕಚೇರಿ ತಲುಪಿ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬೆಳೆ ನಷ್ಟ ಅನುಭವಿಸಿದರೂ ಪರಿಹಾರ ಮಾತ್ರ ಕೊಡುತ್ತಿಲ್ಲ. ಕೂಡಲೇ ಬರಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಬರಗಾಲದಿಂದ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಿದೆ. ಮಲಪ್ರಭಾ ನದಿಯಲ್ಲಿ 14 ಟಿಎಂಸಿ ನೀರು ಲಭ್ಯವಿದ್ದರೂ ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಇನ್ನೂ 15 ದಿನ ಕಾಲುವೆಗಳಿಗೆ ನೀರು ಹರಿಸಬೇಕು. ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದರು. ರಾಜ್ಯದ 224 ಶಾಸಕರಲ್ಲಿ ನವಲಗುಂದದ ಶಾಸಕ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಕಳೆದುಕೊಂಡ ಒಬ್ಬೇ ಒಬ್ಬರಿಗೆ ಪರಿಹಾರ ನೀಡಿಲ್ಲ. ಯಾರಿಗಾದರೂ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದರೇ, ಅವರ ಮನೆಗೆ ಹೋಗಿ ಸತ್ಕಾರ ಮಾಡುತ್ತೇವೆ ಎಂದರು.ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಲದ ಅಧ್ಯಕ್ಷರಾದ ಗಂಗಪ್ಪ ಮನಮಿ, ಮಂಜುನಾಥ ಗಣಿ, ಷಣ್ಮುಖ ಗುರಿಕಾರ, ಎ ಬಿ ಹಿರೇಮಠ, ಸಿದ್ದಣ್ಣ ಕಿಟಗೇರಿ, ಸಿದ್ದನಗೌಡ ಪಾಟೀಲ, ಮಹಾಂತೇಶ ಕಲಾಲ, ಮಲ್ಲಿಕಾರ್ಜುನ ಸಂಗನಗೌಡ, ಸಂತೋಷ ನಾವಳ್ಳಿ, ಶಂಕರಪ್ಪ ತೋಟದ, ಎನ್ ಪಿ ಕುಲಕರ್ಣಿ, ಸಾಯಿಬಾಬಾ ಆನೆಗುಂದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ
ಅಂತೂ ಸುಂಕಸಾಳದ 34 ಮಕ್ಕಳಿಗೆ ಸಿಕ್ಕಿತು ಸುರಕ್ಷಿತ ನೆಲೆ!