ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Nov 25, 2026, 02:15 AM IST
 | Kannada Prabha

ಸಾರಾಂಶ

ಹಾಲು, ಮೊಸರು, ಬಸ್ ಟಿಕೆಟ್ ದರ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆಯಾಗಿದೆ.

ಕನ್ನಡಪ್ರಭ ವಾರ್ತೆ ನರಗುಂದ

ಸ್ಟಿಂಗ್ ಆಪರೇಷನ್ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಹೆಸರಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾಂಗ್ರೆಸ್ ಸರಕಾರ ಬೆಲೆ ಏರಿಸದ ವಸ್ತುಗಳಿಲ್ಲ. ಹಾಲು, ಮೊಸರು, ಬಸ್ ಟಿಕೆಟ್ ದರ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.

ಮಂಗಳವಾರ ಪಟ್ಟಣದ ಶಿವಾಜಿ ಮಹಾರಾಜ್ ವೃತ್ತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಮತ್ತು ಬರ ಪರಿಹಾರ ನೀಡದ ಆಡಳಿತ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ, ರಸ್ತೆ ತಡೆ ನಡೆಸಿ ತಹಶೀಲ್ದಾರಗೆ ಮನವಿ ಅರ್ಪಿಸಿ ಆ ನಂತರ ಮಾತನಾಡಿದರು.

ಮುಂಗಾರು ಹಾಗೂ ಹಿಂಗಾರಿ ಬೆಳೆಗೆ ರೈತರು ಕೋಟ್ಯಂತರ ವಿಮೆ ತಂಬಿದ್ದಾರೆ. ವಿಮೆ ಪರಿಹಾರ ನೀಡದ ಗದಗ ಜಿಲ್ಲೆಯ ಜಿಲ್ಲಾಧಿಕಾರಿಯೊಬ್ಬ ಪಾರ್ಟಿಯೊಂದರಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ 8 ದಿನಗಳಿಂದ ಹಗಲು ರಾತ್ರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಯಾವುದೇ ಸ್ಪಂದನೆ ತೋರುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಬಳಿ ಭಾರತ ಜೋಡೋ ಯಾತ್ರೆ ನಡೆಸಲು ಹಣ ಇರುತ್ತದೆ. ಬರ ಪರಿಹಾರ ಮತ್ತು ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಹಣ ಇಲ್ಲವೆಂದರೆ, ಇಂತಹ ಸರ್ಕಾರ ಇದ್ದರೆಷ್ಟು, ಹೋದರೆಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ವಸಂತ ಜೋಗಣ್ಣವರ, ಎಸ್.ಆರ್. ಪಾಟೀಲ, ಮುತ್ತಪ್ಪ ಜಂಗಣ್ಣವರ, ಚಂದ್ರು ದಂಡಿನ, ಮುತ್ತಣ್ಣ ಜೋಗಣ್ಣವರ ಮಾತನಾಡಿದರು.

ಈ ಸಂದರ್ಭ ನರಗುಂದ ಬ್ಲಾಕ್ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ, ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತ್ತವಾಡ, ಎಂ.ಎಚ್. ತಿಮ್ಮನಗೌಡ್ರ, ಪವಾಡೆಪ್ಪ ವಡ್ಡಿಗೇರಿ, ಶರಣು ಪಿಡನಾಯ್ಕರ, ಪ್ರಶಾಂತ ಜೋಶಿ, ಉಮೇಶ ಯಳ್ಳೂರ, ದೇವಣ್ಣ ಕಲಾಲ, ಅನಿಲ ಧರಿಯಣ್ಣವರ, ಸದಾಶಿವ ನಂದಿ, ವಿಠ್ಠಲ ಹವಾಲ್ದಾರ, ಮಹೇಶ ಹಟ್ಟಿ, ಎಸ್.ಎಸ್. ಪಾಟೀಲ, ಮಂಜು ಮೆಣಸಗಿ, ಪ್ರಕಾಶ ಹಾದಿಮನಿ, ರುದ್ರಗೌಡ ಲಿಂಗನಗೌಡ್ರ, ಪ್ರವೀಣ ವಡ್ಡರ, ಸೋಮು ಹೊಂಗಲ, ಕೇದಾರಗೌಡ ಮಣ್ಣೂರ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ
ಅಂತೂ ಸುಂಕಸಾಳದ 34 ಮಕ್ಕಳಿಗೆ ಸಿಕ್ಕಿತು ಸುರಕ್ಷಿತ ನೆಲೆ!