ಕುಷ್ಟಗಿ: ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕುಷ್ಟಗಿ ಪಟ್ಟಣದಲ್ಲಿ ಮುಸ್ಲೀಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಕಟ್ಟಾಳು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದ ಜಮೀರ್ ಅಹ್ಮದ್ ಖಾನ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರ ನಡೆದಿದ್ದು, ಅವರಿಗೆ ಸಚಿವ ಸ್ಥಾನ ನೀಡಿ ಮುಸ್ಲಿಂ ಸಮುದಾಯದ ನಾಯಕತ್ವಕ್ಕೆ ಬೆಲೆ ನೀಡಬೇಕು ಎಂದು ಹೇಳಿದರು.
ಈ ಪ್ರತಿಭಟನೆ ಪಟ್ಟಣದ ಮಲ್ಲಯ್ಯ ವೃತ್ತದಿಂದ ಆರಂಭವಾಗಿ ಬಸ್ ನಿಲ್ದಾಣ ರಸ್ತೆ ಮೂಲಕ ಮಾರುತಿ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಸೇರಿ ಆಕ್ರೋಶ ಹೊರಹಾಕಿದ ಅವರು, ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳದೆ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವದು ಎಂದು ಕಾಂಗ್ರೆಸ್ ವರಿಷ್ಟರಿಗೆ ಎಚ್ಚರಿಕೆ ನೀಡುವ ಮೂಲಕ ಎಲ್ಲರೂ ಜಮೀರ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮುಸ್ಲೀಂ ಸಮುದಾಯದ ಮುಖಂಡ ಅಬ್ದುಲ್ ನಯಿಂ, ಶೇಖ್ ನಿಜಾಮುದ್ದೀನ ಕಪಾಲಿ, ಸದ್ದಾಂ ಹುಸೇನ, ಅಕ್ಬರ್ ಮಾಟಲದಿನ್ನಿ, ಮೌಲಾ ಗುಮಗೇರಿ, ರಜಾಕ ಸುಳ್ಳದ, ಹುಸೇನ ನದಾಫ್, ಮೈನುದ್ದೀನ ವಕೀಲರು, ಶಪೀ ವಕೀಲರು, ಅಬ್ದುಲ್ ಟೆಂಗುಂಟಿ, ಯೂಸುಫ್ ಕನಕಾಪೂರ, ರಿಯಾಜ್, ಹುಸೇನ ಕಾಯಿಗಡ್ಡಿ ಸೇರಿದಂತೆ ಅನೇಕರಿದ್ದರು.