ಕಮಲ್ ಹಾಸನ್ ವಿವಾದಿತ ಹೇಳಿಕೆ ಖಂಡಿಸಿ ಕರವೇ ಪ್ರತಿಭಟನೆ

KannadaprabhaNewsNetwork |  
Published : Jun 05, 2025, 01:01 AM ISTUpdated : Jun 05, 2025, 01:02 AM IST
ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ರಾಜ್‌ ಪ್ರಶಾಂತ್ ಕನ್ನಡ ಭಾಷೆಗೆ ಕ್ರಿ.ಶ. 400 ರಲ್ಲಿ ದೊರೆತಿರುವ ಹಲ್ಮಿಡಿ ಶಾಸನವೇ ಅತಿದೊಡ್ಡ ಮೂಲಾಧಾರ. ಆದರೂ ಕನ್ನಡ ನಾಡಿನ ನೆಲ, ಜಲ ಹಾಗೂ ಭಾಷೆ ಬಗ್ಗೆ ಅಗೌರವ ತೋರಿಸಿ ರುವ ಕಮಲ್ ಹಾಸನ್‌ ಕೂಡಲೇ ಕ್ಷಮೆಯಾಚಿಸಬೇಕು ಎಂದರು.ವಿಶೇಷ ಸಂಸ್ಕೃತಿ, ಸಂಪ್ರದಾಯ ಹಾಗೂ ಕವಿಗಳು ಉದಯಿಸಿರುವ ಕನ್ನಡನಾಡು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ರಾಷ್ಟ್ರದಲ್ಲೇ ಮನ್ನಣೆ ಗಳಿಸಿಕೊಂಡಿದೆ. ದಾರ್ಶನಿಕರು, ವಚನಕಾರರ ತವರೂರಾದ ಕರ್ನಾಟಕ ಇಡೀ ವಿಶ್ವಾದ್ಯಂತ ಭಾಷೆಯ ಸೊಗಡನ್ನು ಹೊಂದಿದೆ ಎಂದರು.ಕರ್ನಾಟಕದ ಪುಣ್ಯಭೂಮಿಯಲ್ಲಿ ಜನಿಸಿದ ಅನೇಕ ನಟ ನಟಿಯರು ಪರಭಾಷೆ ಚಿತ್ರಗಳಲ್ಲಿ ನಟಿಸಿದ್ದರೂ ಆಯಾ ಭಾಷೆಯನ್ನು ಗೌರವಿಸಿದ್ದಾರೆ. ಆದರೆ, ಕಮಲ್‌ ಹಾಸನ್ ಕನ್ನಡ ಚಿತ್ರಗಳಲ್ಲೂ ನಟಿಸಿಯೂ ಕೂಡಾ ತಮಿಳಿನಿಂದ ಕನ್ನಡ ಜನಿಸಿತು ಎಂಬ ಹೇಳಿಕೆ ನೀಡಿರುವುದು ತೀವ್ರ ಖಂಡನೀಯ ಎಂದು ಹೇಳಿದರು.ಕಮಲ್‌ ಹಾಸನ್‌ ನೀಡಿರುವ ಹೇಳಿಕೆ ನೇರವಾಗಿ ಆರೂವರೆ ಕೋಟಿ ಕನ್ನಡಿಗರು ಹಾಗೂ ಭಾಷಾ ಇತಿಹಾಸಕಾರರಿಗೆ ನೋವುಂಟಾ ಗಿದೆ. ಈ ಸಂಬಂಧ ಅವರು ಕ್ಷಮೆ ಕೇಳದೇ ಸಮರ್ಥನೆಗೆ ಮುಂದಾಗಿರುವುದು ಸರಿಯಲ್ಲ. ಕನ್ನಡಕ್ಕೆ ವಿಶಿಷ್ಟ ಸ್ಥಾನಮಾನ ಇರುವುದರಿಂದ ನೋಟಿನಲ್ಲಿ ಕನ್ನಡ 4ನೇ ಸ್ಥಾನ ಪಡೆದುಕೊಂಡಿದೆ ಎಂದರು.ಹೀಗಾಗಿ ನಟ ಕಮಲ್ ಹಾಸನ್ ಸಾರ್ವಜನಿಕರ ಎದುರು ಬಹಿರಂಗ ಕ್ಷಮೆಯಾಚಿಸಿದರೆ ಒಳಿತು. ಇಲ್ಲವಾದರೆ ಅವರ ನಟನೆಯ ಯಾವುದೇ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಗೊಳಿಸಲು ಬಿಡದೇ ಎಲ್ಲಾ ಚಿತ್ರ ಮಂದಿರಗಳಲ್ಲಿ ಪ್ರತಿಭಟಿಸ ಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಕರವೇ ಕಾರ್ಯದರ್ಶಿ ರವಿಚಂದ್ರ, ಮುಖಂಡರಾದ ಮಂಜುನಾಥ್, ಸತೀಶ್, ಹಾಲಪ್ಪ, ಅಭಿ, ಪೂರ್ಣೇಶ್, ನಟರಾಜ್, ಅರುಣ್‌ಕುಮಾರ್, ಭರತ್, ಚಂದ್ರು, ಉಮೇಶ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

4 ಕೆಸಿಕೆಎಂ 2ಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ