ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬುಧವಾರ ತಮ್ಮ ಬೆಂಬಲಿಗರೊಂದಿಗೆ ನವನಗರದ ಬಿಜೆಪಿ ಜಿಲ್ಲಾ ಕಚೇರಿ ಮುತ್ತಿಗೆ ಹಾಕಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಮುಧೋಳ ಮತಕ್ಷೇತ್ರದಲ್ಲಿ ಬಿಜೆಪಿಯು ಅರುಣ ಕಾರಜೋಳ ಪಕ್ಷವಾಗಿದೆ. ಮೂಲ ಬಿಜೆಪಿಗರಲ್ಲದ, ಕಾಂಗ್ರೆಸ್‌ನಿಂದ ಬಂದ ಅವರ ಹಿಂಬಾಲಕರನ್ನು ನೀವು ಪದಾಧಿಕಾರಿಗಳಾಗಿ ನೇಮಕ ಮಾಡಿದ್ದೀರಿ ಎಂದು ಹರಿಹಾಯ್ದರು.
ಪಿ.ಎಚ್.ಪೂಜಾರ ವಿರುದ್ಧ ಚುನಾವಣೆ:ಅನೇಕ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಪಿ.ಎಚ್.ಪೂಜಾರ ವಿರುದ್ಧ ಚುನಾವಣೆ ಮಾಡಿದರು. ಸ್ಪಷ್ಟವಾಗಿ ಪಕ್ಷೇತರ ಅಭ್ಯರ್ಥಿ ಪರ ಮತ ಚಲಾಯಿಸಲು ಸೂಚನೆ ನೀಡಿದರು. ನಮ್ಮಲ್ಲಿ ಅಧಿಕೃತ ದಾಖಲೆಗಳಿವೆ. ಇದೆಲ್ಲ ಗೊತ್ತಿದ್ದರೂ ಪಿ.ಎಚ್.ಪೂಜಾರ ಯಾಕೆ ಸುಮ್ಮನೆ ಕುಳಿತಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾರಜೋಳ ಭಯ ಪೂಜಾರಗೆ ಕಾಡುತ್ತಿರಬಹುದು. ಕಾರಜೋಳ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಮತಚಾಯಿಸಿದ್ದಕ್ಕೆ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದರು.
ಪಕ್ಷ ಸಾಬೀತುಪಡಿಸಲಿ:
ಅರುಣ ಕಾರಜೋಳ ಕುಮ್ಮಕ್ಕಿನಿಂದ ಪಕ್ಷದ ತಾಲೂಕು ಹಾಗೂ ಜಿಲ್ಲಾ ಅಧ್ಯಕ್ಷರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಆಪಾದಿಸಿದರು. ಕಚೇರಿಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರ ಮಧ್ಯೆ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲರು ತಮ್ಮ ಕಚೇರಿಯಲ್ಲಿ ರಾಮಣ್ಣ ತಳೇವಾಡ ಅವರೊಂದಿಗೆ ಮಾತುಕತೆ ನಡೆಸಿದರು. ಉಚ್ಚಾಟನೆಗೆ ಉತ್ತರ ನೀಡುವಂತೆ ಅಧ್ಯಕ್ಷರನ್ನು ಕೇಳಿಕೊಳ್ಳಲಾಗಿದೆ ಎಂದು ರಾಮಣ್ಣ ತಳೇವಾಡ ತಿಳಿಸಿದ್ದರು. ನಂತರ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು.
ಬಾಕ್ಸ್,,,,
ಗೋವಿಂದ ಕಾರಜೋಳ ಪುತ್ರನ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಅಲ್ಲದೆ ಈ ಹಿಂದೆ ಬಿಜೆಪಿ ಜಿಪಂನಲ್ಲಿ ಬಹುಮತ ಇದ್ದಾಗಲೂ ಅಧಿಕಾರಕ್ಕೆ ಏರಲು ಸಾಧ್ಯವಾಗಲಿಲ್ಲ. ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ ಅಧ್ಯಕ್ಷರಾದರು. ನನ್ನ ಪತ್ನಿ ಅಲ್ಪ ಮತಗಳಿಂದ ಸೋತರು. ಆ ಸಂದರ್ಭದಲ್ಲಿಯೂ ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಇಲ್ಲಿನ ಚಿತ್ರಣ ಗೊತ್ತಿತ್ತು. ಆದರೇ ಯಾರೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜನಪ್ರಿಯ ಕಾರ್ಯಕ್ರಮ ಬಿಡುಗಡೆ
ಇಂತಹ ವ್ಯಕ್ತಿಗಳು ನಮ್ಮ ಮುಧೋಳ ಮತಕ್ಷೇತ್ರಕ್ಕೆ ಅಭ್ಯರ್ಥಿಗಳಾದರೆ ನಾವು ಸಹಿಸುವುದಿಲ್ಲ. ಒಂದು ವೇಳೆ ನಾನು ಪಕ್ಷದಲ್ಲಿ ಇರಲಿ, ಇರದೆ ಇರಲಿ ಅವರ ಘನ ಕಾರ್ಯಗಳನ್ನು ಬಿಡುಗಡೆ ಮಾಡುವೆ. ಅಧಿಕಾರ ಇಲ್ಲದೇನೆ ಇಂತಹ ಮಹಾನ್ ಕಾರ್ಯಗಳನ್ನು ಮಾಡಿದ್ದಾರೆ ಎಂದರು.