ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪ್ರತಿದಿನ ಮುಂಜಾನೆ ಚಳಿ, ಮಳೆ, ಗಾಳಿ ಎನ್ನದೆ ನಿಷ್ಠೆಯಿಂದ ಮನೆ ಮನೆಗಳಿಗೆ ಪತ್ರಿಕೆ ವಿತರಣೆ ಮಾಡುವ ಪತ್ರಿಕಾ ಏಜೆಂಟರು ಹಾಗೂ ವಿತರಕಕರೇ ದಿನ ಪತ್ರಿಕೆಗಳ ಜೀವಾಳ. ಆದರೆ ವಿವಿಧ ಪತ್ರಿಕಾಲಯಗಳಿಂದ ಬರುವ ಪತ್ರಿಕೆಗಳನ್ನುವಿಂಗಡಿಸಲು ಪತ್ರಿಕಾ ವಿತರಕರಿಗೆ ಜನಪ್ರತಿನಿಧಿಗಳು, ತಾಲೂಕು ಆಡಳಿತ ಅಥವಾ ನಗರಸಭೆಯವರು ಸೂಕ್ತ ಜಾಗವನ್ನು ನೀಡಬೇಕೆಂದು ಪತ್ರಿಕಾ ವಿತರಕರಾದ ಎಸ್.ವಿ.ಅರುಣ್‌ಕುಮಾರ್, ಎ.ರವಿಕುಮಾರ್, ಕೆ.ಪಿ.ಸಮೀರಚಾರಿ ಮನವಿ ಮಾಡಿದ್ದಾರೆ.ನಗರದಲ್ಲಿ ಪತ್ರಿಕೆ ವಿಂಗಡಿಸಲು ಸೂಕ್ತಸ್ಥಳವಿಲ್ಲ. ಎಲ್ಲಂದರಲ್ಲಿ ಕುಳಿತಿಕೊಳ್ಳಬೇಕಿದೆ. ಮಳೆ ಬಂದರೆ ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಹಲವುವರ್ಷಗಳಿಂದ ಇದನ್ನೇ ವೃತ್ತಿಯನ್ನಾಗಿಸಿಕೊಂಡ ಹಲವರು ತಾಲೂಕಿನಲ್ಲಿದ್ದಾರೆ. ಬೆಳಿಗ್ಗೆ ಮನೆ ಮನೆಗೆ ಪತ್ರಿಕೆಹಾಕಿ, ಓದಿನ ಖರ್ಚಿಗೆ ಒಂದಷ್ಟು ಹಣ ಸಂಪದಾನೆ ಮಾಡುವ ಹುಡುಗರೂ ಇಲ್ಲಿದ್ದಾರೆ.
ರಜೆ ಇಲ್ಲದ ಶ್ರಮದ ಕೆಲಸಪತ್ರಿಕಾ ಏಜೆಂಟರು ಹಾಗೂ ವಿತರಕರಿಗೆ ರಜೆ ಎಂಬುದಿಲ್ಲ. ಪತ್ರಿಕಾ ಸಂಸ್ಥೆಗಳಿಗೆ ರಜೆ ಇದ್ದರಷ್ಟೇ ಇವರಿಗೆ ರಜೆ ಗರಿಷ್ಠ ಎಂದರೆ ವರ್ಷಕ್ಕೆ 4 ರಜೆಗಳು ಸಿಗಬಹುದು. ಪ್ರತಿದಿನ ಮುಂಜಾನೆ 4.30ಕ್ಕೆ ಇವರಕೆಲಸ ಆರಂಭವಾಗುತ್ತದೆ. ಮುದ್ರಣಾಲಯದಿಂದ ಬಂದ ಪತ್ರಿಕೆಗಳ ಕಟ್ಟುಗಳನ್ನು ಬಿಡಿಸಿ, ಅವುಗಳನ್ನು ಜೋಡಿಸುವುದು ನಂತರ ತಾವು ಹೋಗುವ ಮಾರ್ಗಗಳಿಗೆ ಪತ್ರಿಕೆಯನ್ನುತೆಗೆದುಕೊಂಡು ಸೈಕಲ್ ಇಲ್ಲವೇ, ದ್ವಿ ಚಕ್ರವಾಹನಹಳಲ್ಲಿ ಮನೆ-ಮನೆಗೆತೆರಳಿ ವಿತರಿಸುತ್ತಾರೆ. ಬೇಸಿಗೆ ಕಾಲದಲ್ಲಿ ಅಷ್ಟೇನು ಸಮಸ್ಯೆಯಾಗುವುದಿಲ್ಲ. ಆದರೆ, ಮಳೆಗಾಲದಲ್ಲಿ ಮಳೆ, ಚಳೆ, ಗಾಳಿಯ ಹೊಡೆತ, ಚಳಿಗಾಲದಲ್ಲಿ ಕೊರೆಯುವ ಶೀತ ವಾತಾವರಣದಲ್ಲೂ ವಿತರಕರು ತಮ್ಮ ಕೆಲಸವನ್ನು ಬಿಡುವುದಿಲ್ಲ. ಬದ್ಧತೆಯಿಂದ ಕೆಲಸ ಮಾಡುತ್ತಾರೆ.
ಕಳೆದ 24 ವರ್ಷಗಳಿಂದ ಪತ್ರಿಕೆಗಳನ್ನು ವಿತರಿಸುತ್ತಿರುವ ಗೌರಿಬಿದನೂರಿನ ಎಸ್.ವಿ. ಅರುಣ್‌ಕುಮಾರ್ ಹೇಳುವಂತೆ, ನಗರದಲ್ಲಿ ಪತ್ರಿಕೆಗಳನ್ನು ವಿಂಗಡಿಸಿಕೊಳ್ಳಲು ವಿತರಕರಿಗೆ ನಿಗದಿತ ಸ್ಥಳ ಎಂಬುದಿಲ್ಲ. ರಸ್ತೆಯಬದಿ ಸೇರಿದಂತೆ ಎಲ್ಲಂದರಲ್ಲಿ ಕುಳಿತು ಪತ್ರಿಕೆ ವಿಂಗಡಿಸುತ್ತಾರೆ. ಆದ್ದರಿಂದ ವಿತರಕರಿಗೆ ನಿಗದಿತ ಸ್ಥಳ ಕಲ್ಪಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ.