ಹಾಡಿಗಳ ಜನರಿಗೆ ಮೂಲ ಸೌಲರ್ಯ ಕಲ್ಪಿಸಿ: ಸಚಿವ ಟಿ.ರಘುಮೂರ್ತಿ

KannadaprabhaNewsNetwork |  
Published : Nov 25, 2026, 01:15 AM IST
1, 2 | Kannada Prabha

ಸಾರಾಂಶ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವ್ಯಕ್ತಿವಾರು ಮಾಹಿತಿ ಕ್ರೋಡೀಕರಿಸಿಕೊಳ್ಳಲು ವಿಶೇಷ ಆಪ್ ರಚಿಸಲಾಗುವುದು. ನಿಗಮ ಹಾಗೂ ಇಲಾಖೆಗಳಿಂದ ವೈಯಕ್ತಿಕವಾಗಿ ಬೋರ್ ವೆಲ್ ಕೊರೆಯಲು ಅನುದಾನ ನೀಡಲಾಗುವುದು. ಇದು ಡೂಪ್ಲಿಕೇಷನ್ ಆಗದಂತೆ ಎಚ್ಚರಿಕೆ ವಹಿಸಲು ಸಹಕಾರವಾಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಾಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವಾರು ಮೂಲಭೂತ ಸೌಕರ್ಯಗಳ ಕೊರತೆ ಕಂಡು ಬಂದಿದ್ದು, ಅವುಗಳನ್ನು ಸರಿಪಡಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ‌ ಸಭೆಯಲ್ಲಿ ಮಾತನಾಡಿದ ಅವರು, ಹಾಡಿಗಳಲ್ಲಿ ವಾಸಿಸುವ ಜನರಿಗೆ ಸರ್ಕಾರ ಒದಗಿಸುವ ಸೌಲಭ್ಯ ದೊರೆತು ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ಪಡಿತರ ಚೀಟಿ ಪಡೆದುಕೊಳ್ಳಲು ಆಧಾರ ಹಾಗೂ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಿದ್ದು, ಹಾಡಿಗಳಲ್ಲಿ ಸಮೀಕ್ಷೆ ನಡೆಸಿ ಆಧಾರ್ ಕಾರ್ಡ್ ಹಾಗೂ ಆದಾಯ ಪ್ರಮಾಣ ಪತ್ರ ಇಲ್ಲದವರ ಪಟ್ಟಿ ಮಾಡಿಕೊಂಡು ವಿಶೇಷ ಶಿಬಿರ ನಡೆಸಿ, ಅವರಿಗೆ ಪಡಿತರ ಚೀಟಿ ಮಾಡಿಸಿಕೊಡುವಂತೆ ಅವರು ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವ್ಯಕ್ತಿವಾರು ಮಾಹಿತಿ ಕ್ರೋಡೀಕರಿಸಿಕೊಳ್ಳಲು ವಿಶೇಷ ಆಪ್ ರಚಿಸಲಾಗುವುದು. ನಿಗಮ ಹಾಗೂ ಇಲಾಖೆಗಳಿಂದ ವೈಯಕ್ತಿಕವಾಗಿ ಬೋರ್ ವೆಲ್ ಕೊರೆಯಲು ಅನುದಾನ ನೀಡಲಾಗುವುದು. ಇದು ಡೂಪ್ಲಿಕೇಷನ್ ಆಗದಂತೆ ಎಚ್ಚರಿಕೆ ವಹಿಸಲು ಸಹಕಾರವಾಗಲಿದೆ ಎಂದರು.

ವಿವಿಧ ಇಲಾಖೆಗಳು ಸಮುದಾಯ ಆಧಾರಿತವಾಗಿ ರಸ್ತೆ, ಚರಂಡಿ ಹಾಗೂ ಇನ್ನಿತರೆ ಕಾಮಗಾರಿಗಳು ಪೂರ್ಣಗೊಂಡ ನಂತರ ಗ್ರಾಮ ಪಂಚಾಯತಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಗ್ರಾಮ ಪಂಚಾಯತಿ ಮಟ್ಟದ ಅನುದಾನದಲ್ಲಿ ಅಗತ್ಯವಿರುವ ಬೇರೆ ಕಾಮಗಾರಿಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಶಾಸಕರಾದ ಅನಿಲ್ ಚಿಕ್ಕಮಾದು, ಜಿ.ಡಿ. ಹರೀಶ್ ಗೌಡ, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ನಗರ ಪಾಲಿಕೆಯ ಆಯುಕ್ತೆ ಎಂ.ಕೆ. ಸವಿತಾ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಡಿ.ಆರ್. ಅಶೋಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ರವಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ದುಡಗುಂಟಿ ಮೊದಲಾದವರು ಇದ್ದರು.ಬಾಕಿ ಮನೆ ಶೀಘ್ರ ಪೂರ್ಣಗೊಳಿಸಿ

ಕೆ.ಆರ್.ಐ.ಡಿ.ಎಲ್ ವತಿಯಿಂದ ಹಾಡಿಗಳಲ್ಲಿ 100 ಮನೆಗಳು ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದ್ದು, ಇದರಲ್ಕಿ 15 ಮನೆ ಪೂರ್ಣವಾಗಿದ್ದು, ಉಳಿದ 85 ಮನೆಗಳು ವಿವಿಧ ಹಂತದಲ್ಲಿದೆ. ಮನೆ ನಿರ್ಮಾಣ ಮಾಡಲು ಸರ್ಕಾರದ ಹಂತದಲ್ಲಿ ಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ವಿಶೇಷ ನಿಗಾ ವಹಿಸಿ ಮನೆಗಳನ್ನು ಶೀಘ್ರವಾಗಿ ‌ಪೂರ್ಣಗೊಳಿಸುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಸೂಚಿಸಿದರು.

ಈ ವೇಳೆ ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷರಾದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಆದಿವಾಸಿಗಳನ್ನು ಕಾಡಿನಿಂದ ಹೊರ ತರಲಾಗಿದೆ. ಅವರಿಗೆ ಕಾಡಂಚಿನಲ್ಲಿ ನಿವೇಶನ ನೀಡಲಾಗಿದೆ. ಆದರೆ, ಅವರಿಗೆ ಹಕ್ಕು ಪತ್ರ ನೀಡಿಲ್ಲ. ಹಕ್ಕು ಪತ್ರವಿಲ್ಲದೆ ಮನೆಗಳ ನಿರ್ಮಾಣ ಸಹ ಕಷ್ಟಕರವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾಧಿಕಾರಿಗಳು ಈ ಕುರಿತಂತೆ ಇರುವ ಸಮಸ್ಯೆಗಳ‌ ಬಗ್ಗೆ ವರದಿ ನೀಡಿದಲ್ಲಿ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಪರಿಶಿಷ್ಟ ಪಂಗಡದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಆಪ್ ಅಭಿವೃದ್ಧಿ: ಟಿ.ರಘುಮೂರ್ತಿ

ಕನ್ನಡಪ್ರಭ ವಾರ್ತೆ ಮೈಸೂರುಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವ್ಯಕ್ತಿವಾರು ಮಾಹಿತಿ ಕ್ರೋಡೀಕರಿಸಿಕೊಳ್ಳಲು, ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ವಿಶೇಷ ಆಪ್ ರಚಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ‌ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಒಂದೇ ಕಡೆ ಎಲ್ಲಾ ಮಾಹಿತಿ ದೊರೆಯುವ ವ್ಯವಸ್ಥೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದು ಜನರಿಗೆ ಮಾಹಿತಿಯುಕ್ತ ಆಪ್ ಆಗಲಿದೆ ಎಂದರು.ಈಗಾಗಲೇ ಯುವ ಸಮುದಾಯದ ಉದ್ಯೋಗ ಸಮಸ್ಯೆ ಪರಿಹರಿಸಲು ಪರಿಶಿಷ್ಟ ಪಂಗಡದವರಿಗೆ ಫುಡ್‌ಕಿಯೋಸ್ಕ್‌ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದೆ, ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೂ ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

ವಾಲ್ಮೀಕಿ, ನಾಯಕ, ಕಾಡು ಕುರುಬ, ಜೇನು ಕುರುಬ, ಸೋಲಿಗ, ಹಕ್ಕಿಪಿಕ್ಕಿ ಸೇರಿದಂತೆ ಎಸ್ಟಿ ಪಂಗಡದಲ್ಲಿರುವ 50 ಹೆಚ್ಚು ಉಪಜಾತಿಗಳವರಿಗೆ ವಿವಿಧ ಯೋಜನೆಗಳು ಜಾರಿಯಲ್ಲಿವೆ. ಆ ಎಲ್ಲ ಮಾಹಿತಿ ಈಗ ಆಪ್ ಮೂಲಕ ಬೆರಳು ತುದಿಯಲ್ಲೇ ಸಿಗಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ: ನಿಸಾರ್ ಅಹಮದ್
ರವಿ ಹಂಜ್‌ ಗಡಿಪಾರಿಗೆ ಬಸವಾಭಿಮಾನಿಗಳ ಆಗ್ರಹ