ದೇವಾಲಯಗಳಿಗೆ ಸುಧಾರಿತ ಸೌಕರ್ಯಗಳ ಒದಗಿಸಿ: ಭೋಜೇಗೌಡ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ದೇವಾಲಯಗಳಿಗೆ ಸುಧಾರಿತ ಸೌಕರ್ಯಗಳ ಒದಗಿಸಿ: ಭೋಜೇಗೌಡಈ ಪುರಾತನ ದೇವಾಲಯ ಬಹಳಷ್ಟು ಪ್ರಸಿದ್ಧಿಯಾಗಿದೆ. ಆದರೆ ಮೂಲ ಸೌಕರ್ಯಗಳೇ ಇಲ್ಲ.ದೇವಾಲಯದ ದಿನ ನಿತ್ಯ ದ ಖರ್ಚಿಗೆ ಇಲಾಖೆಕೊಡುವ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ. ರಾಜ್ಯ ಸರ್ಕಾರ ಇತ್ತ ಕಡೆ ಗಮನಹರಿಸಬೇಕು

ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಹೋತ್ಸವ ಆಚರಣೆ

ಕನ್ನಡಪ್ರಭ ವಾರ್ತೆ,ಕಡೂರು

ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಕಾಲಕ್ಕೆ ತಕ್ಕಂತೆ ಸುಧಾರಿತ ಸೌಕರ್ಯಗಳನ್ನು ಒದಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.

ತಾಲೂಕಿನ ಸಖರಾಯಪಟ್ಟಣಲ್ಲಿ ಕಡೇ ಕಾರ್ತಿಕದ ಪ್ರಯುಕ್ತ ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ ಸಂಪ್ರ ದಾಯದಂತೆ ಎಣ್ಣೆ ಸೀರೆ ಸುಡುವ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಮಾತನಾಡಿದರು. ಈ ಪುರಾತನ ದೇವಾಲಯ ಬಹಳಷ್ಟು ಪ್ರಸಿದ್ಧಿಯಾಗಿದೆ. ಆದರೆ ಮೂಲ ಸೌಕರ್ಯಗಳೇ ಇಲ್ಲ. ಇನ್ನು ಇಲ್ಲಿನ ಅರ್ಚಕರಿಗೆ 5

ಸಾವಿರ ರು, ಕಸ ಗುಡಿಸುವವರಿಗೆ 3 ಸಾವಿರ ರು ಸೇರಿದಂತೆ ದೇವಾಲಯದ ದಿನ ನಿತ್ಯ ದ ಖರ್ಚಿಗೆ ಇಲಾಖೆ

ಕೊಡುವ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ. ರಾಜ್ಯ ಸರ್ಕಾರ ಇತ್ತ ಕಡೆ ಗಮನಹರಿಸಬೇಕು. ನಮ್ಮ ಅಜ್ಜನವರ ಕಾಲದಿಂದಲೂ ದೇವಾಲಯದ ಆದಾಯ ಯಾವತ್ತೂ ಕಡಿಮೆಯಾಗಿಲ್ಲ. ಈಗ ವರ್ಷಕ್ಕೆ 25 ಲಕ್ಷ ರು. ಆದಾಯವಿದ್ದರೂ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ ಎಂದರು.

ದೇವಾಲಯ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಈ ವರ್ಷ 25 ಲಕ್ಷ ರು. ಆದಾಯ ಬಂದಿದೆ. ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ. ನಮಗೆ ದೇವಾಲಯದ ಕೆಲಸಕ್ಕೆ ಜನ ಸಿಗುತ್ತಿಲ್ಲ. ಕಾರಣ ಅವರು ಕೊಡುವ ಸಂಬಳಕ್ಕೆ ಯಾರೂ ಬರುತ್ತಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಮೂಲ ಸೌಕರ್ಯ ಒದಗಿಸುವತ್ತ ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಸೋನಾಲ್ ಗೌಡ, ಗ್ರಾಪಂ ಸದಸ್ಯ ಫೈರೋಜ್ ಮಾಜಿ ತಾಪಂ ಸದಸ್ಯ ಆನಂದನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಯೋಗೀಂದ್ರ, ಗ್ರಾಮಸ್ಥರಾದ ದಿವಾಕರ , ಪಾಪಚ್ಚಿ, ಮಂಜುನಾಥ್, ವೆಂಕಟೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.17ಕೆಕೆಡಿಯು1.

ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಕಡೇ ಕಾರ್ತಿಕದ ಪ್ರಯುಕ್ತ ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ ಎಣ್ಣೆ ಸೀರೆ ಸುಡುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮತ್ತಿತರರು ಇದ್ದರು.

Share this article