ಕನ್ನಡಪ್ರಭ ವಾರ್ತೆ ಗೋಕಾಕ
ತಾಲೂಕಿನ ಕೌಜಲಗಿ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಲಗಿ ತಾಲೂಕು ಘಟಕ ಮತ್ತು ಜಿಲ್ಲಾ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುವ ಸೇವೆ ಅಗ್ರಗಣ್ಯವಾಗಿದೆ ಎಂದರು.
ಮೂಡಲಗಿ ತಾಲೂಕು ಘಟಕದ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಜಿ.ಮಾವಿನಗಿಡದ, ಗೌರವಾಧ್ಯಕ್ಷರಾದ ಎಲ್.ಎಂ. ಬಡಕಲ್, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘಕ್ಕೆ ಸದಸ್ಯರಾದ ಎಂ.ವೈ.ಸಣ್ಣಕ್ಕಿ, ಡಿ.ಜೆ ಕಲಾರಕೊಪ್ಪ, ಎಸ್.ಎಸ್.ಕುರನಗಿ ಹಾಗೂ ಕೌಜಲಗಿ ಗ್ರಾಪಂ ನೂತನ ಅಧ್ಯಕ್ಷರಾದ ಅಶೋಕ ಉದ್ದಪ್ಪನವರ, ಜಿಲ್ಲಾ ಸಂಘ ಸದಸ್ಯರಾದ ಎಸ್.ಎನ್.ಪಾಟೀಲ, ಎಸ್.ಎಂ.ದಬಾಡಿ ಅವರನ್ನು ಕೌಜಲಗಿ ಸಮೂಹ ಸಂಪನ್ಮೂಲ ಕೇಂದ್ರದಿಂದ ಸತ್ಕರಿಸಲಾಯಿತು.ಎಸ್.ಎಂ.ಲೋಕನ್ನವರ, ಎಂ.ಆರ್.ಭೋವಿ, ಎ.ಎ.ಪರಸನ್ನವರ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ ಉದ್ದಪ್ಪನ್ನವರ, ಎಸ್.ಬಿ.ಹಳ್ಳೂರ, ನೀಲಪ್ಪ ಕೇವಟಿ, ಕೆ.ಆರ್. ಅಜ್ಜಪ್ಪನ್ನವರ, ಬಿ.ಬಿ.ಕೇವಟಿ, ವಿ.ಐ.ಮಿಲ್ಲಾನಟ್ಟಿ, ಮಹಾದೇವ ಶಿವಾಪುರ, ಎ.ಎಸ್.ದಳವಾಯಿ, ಮುಸ್ತಾಕ್ ಅಹ್ಮದ, ಪಿ.ವೈ. ಸಾತಗುಣಿ, ಶಿಕ್ಷಕರು, ಸಂಘದ ಪದಾಧಿಕಾರಿಗಳು ಇತರರು ಹಾಜರಿದ್ದರು.