ಮಾತೃಭಾಷೆಯಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಿ: ರಾಯರಡ್ಡಿ

KannadaprabhaNewsNetwork |  
Published : Nov 19, 2026, 02:30 AM IST
ಪೋಟೋ | Kannada Prabha

ಸಾರಾಂಶ

ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಭಾಷೆಯಲ್ಲಿಯೇ ಕಲಿಕೆ ನಡೆಯಬೇಕು. ಮಕ್ಕಳಿಗೆ ಮಾತೃಭಾಷೆಗೆ ಹೆಚ್ಚು ಒತ್ತುಕೊಟ್ಟು ಗುಣಮಟ್ಟದ ಶಿಕ್ಷಣ ನೀಡಬೇಕು.

ಕನ್ನಡಪ್ರಭ ವಾರ್ತೆ ಗದಗ

ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಭಾಷೆಯಲ್ಲಿಯೇ ಕಲಿಕೆ ನಡೆಯಬೇಕು. ಮಕ್ಕಳಿಗೆ ಮಾತೃಭಾಷೆಗೆ ಹೆಚ್ಚು ಒತ್ತುಕೊಟ್ಟು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಗದಗ ನಗರದ ಜಿ ಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದೊಮ್ಮೆ ಮಕ್ಕಳ ಕಲಿಕಾ ಅವಧಿಯಲ್ಲಿ ಕಲಿಸುವ ಶಿಕ್ಷಣದ ಗುಣಮಟ್ಟ ಕಳಪೆ ಮಟ್ಟದ್ದಾದರೆ ಮಕ್ಕಳ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಕಾಲೇಜುಗಳಲ್ಲಿನ ಉಪನ್ಯಾಸಕರಿಗೂ ಕಲಿಕಾ ತರಬೇತಿ ಅತ್ಯವಶ್ಯವಾಗಿದೆ. ಉಪನ್ಯಾಸಕರು ಸಂವಹನ ಕಲೆ ಹಾಗೂ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಕಲಿಸುವ ನೈಪುಣ್ಯತೆ ರೂಢಿಸಿಕೊಳ್ಳಬೇಕು.‌ ಸಭೆಗೆ ಬರುವಾಗ ಇಲಾಖೆಯ ಕುರಿತು ಸಂಪೂರ್ಣವಾದ ಪೂರಕ ಮಾಹಿತಿಯೊಂದಿಗೆ ಬರಬೇಕು ಎಂದರು.

ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ 30 ಕಾಲೇಜುಗಳಿವೆ. 6833 ವಿದ್ಯಾರ್ಥಿಗಳಿದ್ದಾರೆ. 237 ಹುದ್ದೆಗಳು ಮಂಜೂರಾಗಿದ್ದು 137 ಹುದ್ದೆಗಳು ಖಾಲಿ ಇವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಜಿಲ್ಲೆಯಲ್ಲಿ ವಿಬಿಜಿ-ರಾಮ್‌ಜಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಜಿಪಂಗೆ ಜಿಲ್ಲಾ ವಲಯದಡಿ ವೇತನ, ವೇತನೇತರ, ಅಭಿವೃದ್ಧಿ ಕಾರ್ಯಕ್ರಮಗಳ ಅನುದಾನದ ಕುರಿತು ಮಾಹಿತಿ ಒದಗಿಸಿದರು. 16ನೇ ಹಣಕಾಸು ಆಯೋಗದಡಿ ಜಿಪಂ, ತಾಪಂ, ಗ್ರಾಪಂಗಳಿಗೆ ಪ್ರತ್ಯೇಕ ಅನುದಾನ ಬರುತ್ತಿರುವ ಕುರಿತು ಮಾಹಿತಿ ಒದಗಿಸಿದರು.

ಎಡಿಸಿ ಡಾ. ದುರಗೇಶ್ ಕೆ.ಆರ್. ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಗಳು, ಮಾಸಿಕ ಪಿಂಚಣಿ ವಿತರಣೆ, ವೇತನದ ವಿವರ ಹಾಗೂ ಮಂಜೂರಾದ ಹಾಗೂ ಖಾಲಿ ಇರುವ ಹುದ್ದೆಗಳ ಕುರಿತು ಮಾಹಿತಿ ನೀಡಿದರು.

ಅಕ್ಷರ ದಾಸೋಹ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ಹಾಗೂ ಅಂಕಿ ಅಂಶ ತಿಳಿಸಿದರು.

ಭೂ ದಾಖಲೆಗಳ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಾವಾರು ಸರ್ವೆ ಪ್ರಕರಣಗಳು ಬಾಕಿ ಅವುಗಳ ಇತ್ಯರ್ಥಕ್ಕಾಗಿ ವಿಶೇಷ ಅಭಿಯಾನ ಸೇರಿದಂತೆ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಸಭೆಯಲ್ಲಿ ಡಿಸಿ ಸಿ.ಎನ್. ಶ್ರೀಧರ್, ಜಿಪಂ ಸಿಇಓ ಮುಕುಲ್ ಜೈನ್, ಎಸ್ಪಿ ಮಿಥುನ್ ಎಚ್.ಎನ್., ಎಸಿ ಗಂಗಪ್ಪ ಎಂ., ಜಿಪಂ ಲೆಕ್ಕಾಧಿಕಾರಿ ಪ್ರಶಾಂತ ಜೆ.ಸಿ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ನ. 27ರಂದು ಮಧ್ಯಾಹ್ನ 3ಕ್ಕೆ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಗುವುದು. ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ಪ್ರಗತಿ ವಿವರ ಸಲ್ಲಿಸಬೇಕು.

ಬಸವರಾಜ ರಾಯರಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ