ಶ್ರೀ ಮಲೈಮಹದೇಶ್ವರ ಬೆಟ್ಟದ ಪಾದಯಾತ್ರಿಗಳಿಗೆ ಸುರಕ್ಷತೆ ಒದಗಿಸಿ

KannadaprabhaNewsNetwork |  
Published : Feb 12, 2025, 12:32 AM IST
11ಕೆಆರ್ ಎಂಎನ್ 3.ಜೆಪಿಜಿರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ರವರು ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಮುಂಬರಲಿರುವ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಶ್ರೀ ಮಲೈಮಹದೇಶ್ವರ ಬೆಟ್ಟಕ್ಕೆ, ಜಿಲ್ಲೆಯಿಂದ ಪಾದಯಾತ್ರೆ ಮೂಲಕ ತೆರಳುವ ಭಕ್ತಾಧಿಗಳ ಸುರಕ್ಷತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಮನಗರ: ಮುಂಬರಲಿರುವ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಶ್ರೀ ಮಲೈಮಹದೇಶ್ವರ ಬೆಟ್ಟಕ್ಕೆ, ಜಿಲ್ಲೆಯಿಂದ ಪಾದಯಾತ್ರೆ ಮೂಲಕ ತೆರಳುವ ಭಕ್ತಾಧಿಗಳ ಸುರಕ್ಷತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,

ಫೆ.26ರಂದು ಮಹಾ ಶಿವರಾತ್ರಿ ಹಬ್ಬವಿದ್ದು, ಈ ಪ್ರಯುಕ್ತ ಜಿಲ್ಲೆಯ ಭಕ್ತಾಧಿಗಳು ಕಾಲ್ನಡಿಗೆ ಮೂಲಕ ಶ್ರೀ ಮಲೈಮಹದೇಶ್ವರ ಬೆಟ್ಟಕ್ಕೆ ತೆರಳುತ್ತಾರೆ. ಭಕ್ತರು ಕನಕಪುರ ತಾಲೂಕು ಬೊಮ್ಮಸಂದ್ರ ಗ್ರಾಮದ ಬಳಿ ಹರಿಯುವ ಕಾವೇರಿ ನದಿ ದಾಟುವ ಸಂದರ್ಭದಲ್ಲಿ ನದಿ ನೀರಿನ ಪ್ರಮಾಣ ಕಡಿಮೆಯಾಗಬೇಕು, ಪಾದಯಾತ್ರಿಗಳ ಸುರಕ್ಷತೆಗಾಗಿ ಎರಡೂ ಬದಿಯಲ್ಲೂ ಅಲ್ಲಿ ಎನ್‌ಡಿಆರ್‌ಎಫ್‌ನವರು ರಕ್ಷಣಾ ಕಾರ್ಯದಲ್ಲಿ ಬಳಸುವ ಉತ್ಕೃಷ್ಟ ಗುಣಮಟ್ಟದ ನಾಲ್ಕು ರೋಪ್‌ಗಳನ್ನು ಕಟ್ಟಬೇಕು. ಅದನ್ನು ಹಿಡಿದು ಭಕ್ತರು ನದಿಯನ್ನು ಸರಾಗವಾಗಿ ದಾಟುವಂತಿರಬೇಕು. ಪಾದಯಾತ್ರೆ ಪ್ರಾರಂಭವಾಗುವ ಒಂದು ವಾರದ ಮೊದಲೇ ಈ ಕಾರ್ಯ ಪೂರ್ಣಗೊಳ್ಳಬೇಕು. ನುರಿತ ಈಜುಗಾರರ ತಂಡವು ಸದಾ ಅಲ್ಲಿರಬೇಕು, ಅವರಿಗೆ ಸಂಭಾವನೆ ಪಾವತಿಸಲಾಗುವುದು, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ತಂಡದವರು ಸ್ಥಳದಲ್ಲಿರಬೇಕು, ಮೋಟಾರ್ ಬೋಟ್, ಅಗತ್ಯ ಪರಿಕರಗಳು ಹಾಗೂ ಡೀಸೆಲ್ ಇರಿಸಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಪಾದಯಾತ್ರಿಗಳು ಬೆಳಿಗ್ಗೆಯಿಂದ ಸಂಜೆವರೆಗೆ ಮಾತ್ರ ನದಿ ದಾಟಲು ಅವಕಾಶ ಮಾಡಿಕೊಡಬೇಕು, ನದಿ ಸಮೀಪ ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಬೇಕು, ಆರೋಗ್ಯ ಇಲಾಖೆಯಿಂದ ನುರಿತ ವೈದ್ಯರ ತಂಡವನ್ನು ಸ್ಥಳದಲ್ಲಿಯೇ ನಿಯೋಜಿಸಬೇಕು, ಅಗತ್ಯ ಔಷಧ, ಮಾತ್ರೆಗಳು ಇರಬೇಕು, ಸುಸಜ್ಜಿತ ಆಂಬ್ಯುಲೆನ್ಸ್ ಕೂಡ ಅಲ್ಲಿರುವಂತೆ ತಿಳಿಸಿದರು.

ಅಪರ ಪೋಲಿಸ್ ವರಿಷ್ಠಾಧಿಕಾರಿಗಳಾದ ಟಿ.ವಿ.ಸುರೇಶ್, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿದ್ದರು.

11ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅಧಿಕಾರಿಗಳ ಸಭೆ ನಡೆಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ