ಕುರುಗೋಡಿಗೆ ಮೂಲ ಸೌಕರ್ಯ ಕಲ್ಪಿಸುವೆ: ಶಾಸಕ ಗಣೇಶ

KannadaprabhaNewsNetwork |  
Published : Sep 03, 2024, 01:42 AM IST
ಕುರುಗೋಡು  01  ಪಟ್ಟಣದ ೨೦ನೇ ವಾರ್ಡ್ನಲ್ಲಿಎಸ್ಎಫ್ಸಿ ವಿಶೇಷಅನುದಾನದ ರೂ.೬೦ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ಸಿಸಿರಸ್ತೆ, ಮತ್ತುಚರಂಡಿ ನಿರ್ಮಾಣಕಾಮಗಾರಿಗೆಶಾಸಕ ಜೆ.ಎನ್.ಗಣೇಶ್ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಜನ ಸಂಖ್ಯೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಕೆರೆಗೆ ಇನ್ನಷ್ಟು ಅನುದಾನ ತಂದು ಕೆರೆ ಅಭಿವೃದ್ಧಿ ಪಡಿಸಲಾಗುವುದು.

ಕುರುಗೋಡು: ಪಟ್ಟಣವನ್ನು ಸುಂದರ, ಸ್ವಚ್ಛತೆಯೊಂದಿಗೆ ಕುರುಗೋಡಿನ ಎಲ್ಲ ವಾರ್ಡ್‌ಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಜೆ.ಎನ್. ಗಣೇಶ ಭರವಸೆ ನೀಡಿದರು.

ಪಟ್ಟಣದ ೨೦ನೇ ವಾರ್ಡಿನಲ್ಲಿ ೨೦೧೯-೨೦ನೇ ಸಾಲಿನ ಎಸ್ಎಫ್ಸಿ ವಿಶೇಷ ಅನುದಾನದ ₹೬೦ ಲಕ್ಷ ವೆಚ್ಚದಿಂದ ನಿರ್ಮಾಣವಾಗುವ ಸಿಸಿರಸ್ತೆ, ಚರಂಡಿ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕುರುಗೋಡು ತಾಲೂಕು ಜನತೆಗೆ ಆರೋಗ್ಯದ ದೃಷ್ಟಿಯಿಂದ ವದ್ದಟ್ಟಿ ರಸ್ತೆಯಲ್ಲಿ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣ ಹಾಗೂ ಸರ್ಕಾರಿ ಸೌಲಭ್ಯಗಳು ಒಂದೇ ಸೂರಿನಡಿ ದೊರಕಿಸುವ ಉದ್ದೇಶದಿಂದ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳು ಮುಗಿಯುವ ಹಂತದಲ್ಲಿದೆ. ಶೀಘ್ರದಲ್ಲೇ ಅವುಗಳನ್ನು ಉದ್ಘಾಟಿಸಿ ಜನತೆಗೆ ಅರ್ಪಿಸಲಾಗುವುದು ಎಂದು ಹೇಳಿದರು.

ಹೆಚ್ಚುತ್ತಿರುವ ಕುರುಗೋಡು ನಿವಾಸಿಗಳಿಗೆ ಕುಡಿವ ನೀರು ಸಮಸ್ಯೆ ಆಗದಂತೆ ಜನ ಸಂಖ್ಯೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಕೆರೆಗೆ ಇನ್ನಷ್ಟು ಅನುದಾನ ತಂದು ಕೆರೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಇದಕ್ಕೂ ಮೊದಲು ಪಟ್ಟಣದ ೨೩ನೇ ವಾರ್ಡಿನ ಬಳ್ಳಾರಿ ರಸ್ತೆಯಲ್ಲಿ ೨೦೧೮-೧೯ನೇ ಸಾಲಿನ ಎಸ್ಎಫ್ಸಿ ವಿಶೇಷ ಅನುದಾನ ₹೨.೫೦ ಕೋಟಿ ವೆಚ್ಚದಿಂದ ನಿರ್ಮಾಣವಾಗುವ ಎಪಿಎಂಸಿಯಿಂದ ಮಿನಿ ವಿಧಾನಸೌಧವರೆಗೆ ಬರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಕುರುಗೋಡು ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಬ್ಲಾಕ್ ಅಧ್ಯಕ್ಷ ಚಾನಾಳು ಚನ್ನಬಸವರಾಜ್, ಪುರಸಭೆ ಸದಸ್ಯರಾದ ಎನ್.ನಾಗರಾಜ, ನಾಗಭೂಷಣ, ನಟರಾಜ, ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ಎಂ.ಹರ್ಷವರ್ಧನ ವಾರ್ಡಿನ ಪ್ರಮುಖರಾದ ಎಸ್.ಪಂಪಾಪತಿಗೌಡ, ನಬಿಸಾಬ, ಡಾ.ತಿಪ್ಪೇಸ್ವಾಮಿ, ಡಾ.ಹೂಗಾರ್, ಶಶಿಗೌಡ, ಇದ್ದರು.

ಕುರುಗೋಡು ಪಟ್ಟಣದ ೨೦ನೇ ವಾರ್ಡಿನಲ್ಲಿ ಎಸ್ಎಫ್ಸಿ ವಿಶೇಷ ಅನುದಾನದ ₹೬೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ಸಿಸಿರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಗಣೇಶ ಭೂಮಿಪೂಜೆ ನೆರವೇರಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು