ಬಸ್‌ ಸೌಲಭ್ಯಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಮನವಿ

KannadaprabhaNewsNetwork |  
Published : Sep 11, 2026, 02:15 AM IST
ಸಿರುಗುಪ್ಪ ನಗರದ ಕೆ.ಕೆ.ಆರ್.ಟಿ.ಸಿ ಅಧಿಕಾರಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಕರ್ಯ ಒದಗಿಸುವಂತೆ ಸಾರ್ವಜನಿಕರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸಿರುಗುಪ್ಪ ಡಿಪೋ ವ್ಯವಸ್ಥಾಪಕ ನೀಲಪ್ಪಗೆ ಸ್ಥಳೀಯ ನಿವಾಸಿಗಳು ಮತ್ತು ಪೋಷಕರು ಮನವಿ

ಸಿರುಗುಪ್ಪ: ತಾಲೂಕಿನ ಗಚ್ಚಿನ ಕಾಲುವೆ, ಬಾಗೇವಾಡಿ ಕ್ಯಾಂಪ್ ಹಾಗೂ ಬಸವಣ್ಣ ಕ್ಯಾಂಪ್‌ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸೂಕ್ತ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿರುಗುಪ್ಪ ಡಿಪೋ ವ್ಯವಸ್ಥಾಪಕ ನೀಲಪ್ಪಗೆ ಸ್ಥಳೀಯ ನಿವಾಸಿಗಳು ಮತ್ತು ಪೋಷಕರು ಮನವಿ ಪತ್ರ ಸಲ್ಲಿಸಿದ್ದರು.

ಹಿರಿಯ ಮುಖಂಡ ವಿ. ಹನುಮಂತಪ್ಪ ಮಾತನಾಡಿ, ಮೂರು ಕ್ಯಾಂಪ್‌ಗಳಲ್ಲಿ ಸುಮಾರು 300 ರಿಂದ 500 ಕುಟುಂಬಗಳು ವಾಸಿಸುತ್ತಿದ್ದು, ನಿತ್ಯ 50 ರಿಂದ 100 ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ 50 ರಿಂದ 60 ಸಾರ್ವಜನಿಕರು ಸಿರುಗುಪ್ಪ ನಗರಕ್ಕೆ ಪ್ರಯಾಣಿಸುತ್ತಾರೆ.

ಹಚ್ಚೋಳ್ಳಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಈ ಕ್ಯಾಂಪ್‌ಗಳಲ್ಲಿ ನಿಲ್ಲದೆ ತೆರಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಗಚ್ಚಿನ ಕಾಲುವೆ, ಬಾಗೇವಾಡಿ ಕ್ಯಾಂಪ್ ಮತ್ತು ಬಸವಣ್ಣ ಕ್ಯಾಂಪ್‌ಗೆ ಬಂದು ಹೋಗುವಂತೆ ಬಸ್ ವ್ಯವಸ್ಥೆ ಮಾಡಬೇಕು. ಸಂಜೆ 5:30ಕ್ಕೆ ಸಿರುಗುಪ್ಪ ನಗರದಿಂದ ಹೊರಟು ಈ ಗ್ರಾಮ ತಲುಪುವಂತೆ ಬಸ್‌ ಬಿಡಬೇಕು. ಹಚ್ಚೋಳ್ಳಿ ಮಾರ್ಗವಾಗಿ ಓಡಾಡುವ ಎಲ್ಲ ಬಸ್ಸು ಗಚ್ಚಿನ ಕಾಲುವೆ ಹತ್ತಿರ ಕಡ್ಡಾಯವಾಗಿ ನಿಲ್ಲಿಸುವಂತೆ ಚಾಲಕ, ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಎಸ್‌ನಿಂದ ಹಾವೇರಿ ಜಿಲ್ಲೆ ಬರಗಾಲ ಘೋಷಣೆಗೆ ಒತ್ತಾಯಿಸಿ೨೧ರಂದು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ, ಬೈಕ್ ರ‍್ಯಾಲಿ
ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಯಲ್ಲಿ ಮಹಿಳೆ ಸಹಭಾಗಿತ್ವ ಅತ್ಯುತ್ತಮ ಬೆಳವಣಿಗೆ