ಕನ್ನಡಪ್ರಭ ವಾರ್ತೆ ಸರಗೂರು
ಪಟ್ಟಣ ವ್ಯಾಪ್ತಿಯ ಎಲ್ಲ ವಾರ್ಡಿನಲ್ಲೂ ನಿತ್ಯವೂ 15 ರಿಂದ 20 ಬೀದಿ ನಾಯಿಗಳು ಗುಂಪು ಗುಂಪಾಗಿ ಒಟ್ಟೊಟ್ಟಿಗೆ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಮಕ್ಕಳು, ಮಹಿಳೆಯರು, ವಯಸ್ಸಾದವರು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಅಂದರೆ ನಾಯಿಗಳು ಸಹ ಬಸ್ ಗಳಲ್ಲಿ ಬೇರೆ ಗ್ರಾಮಗಳಿಗೆ ಹೋಗುತ್ತಿರಬೇಕು ಎನ್ನುವಂತಿದೆ.
8ನೇ ವಾರ್ಡ್ ನಲ್ಲಿ ಲಾರಿ ಚಾಲಕರಾದ ಮನ್ಸೂರ್ ಅವರಿಗೆ ಸೇರಿದ ಕೋಳಿಯೊಂದನ್ನು ನಾಯಿಗಳು ಹಿಡಿದು ಸಾಯಿಸಿದೆ. ಇದನ್ನು ಸಾರ್ವಜನಿಕರು ಅಟ್ಟಾಡಿಸಿ ಸತ್ತಿರುವ ಕೋಳಿಯನ್ನು ರಕ್ಷಿಸಿ ಇದನ್ನು ಚರಂಡಿಗೆ ಬೀಸಾಡಿದರು. ಇದೆ ರೀತಿ 7ನೇ ವಾರ್ಡ್ ನಲ್ಲಿ ಅಂಗಡಿ ಮುಂಬಾಗ ಪತ್ರಿಕೆಯ ವಿತರಕರು, ಪತ್ರಿಕೆಯನ್ನು ಅಂಗಡಿಯ ಡೋರಿನ ಚಿಲಕಕ್ಕೆ ಹಾಕಿ ಬೇರೆ ಅಂಗಡಿ ಕಡೆ ಹೋದಾಗ ನಾಯಿಗಳು ಸೇರಿ ಪತ್ರಿಕೆಯನ್ನು ಚೂರು ಚೂರು ಮಾಡಿರುತ್ತವೆ. ಒಟ್ಟಾರೆ ಎಲ್ಲ ಬೀದಿಗಳಲ್ಲಿ ನಾಯಿಗಳ ಸಂತಾನ ಜಾಸ್ತಿಯಾಗಿದ್ದು, ಒಂದೊಂದು ನಾಯಿ ಮರಿಗಳು ಆರರಿಂದ ಏಳು ಮರಿಗಳು ಹಾಕಿರುತ್ತವೆ. ಎಲ್ಲಿ ಹೋದರು ನಾಯಿಮರಿಗಳ ಸಂತತಿ ಜಾಸ್ತಿಯಾಗಿದೆ. ಇದಕ್ಕೆ ಪರಿಹಾರವೇನು ? ಎಂಬುದು ತಿಳಿಯುತ್ತಿಲ್ಲ.ನಾಯಿ ಗುಂಪನ್ನು ನೋಡಿದರೆ ದೊಡ್ಡವರಿಗೆ ತಲೆ ಜುಮ್ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಮಕ್ಕಳ ಗತಿ ಏನು ಎಂಬುದು ಸಂಶಯಾಸ್ಪದ. ಇದರ ಬಗ್ಗೆ ಪ್ರಾಣಿ ಪ್ರಿಯರು ತಿಳಿದುಕೊಳ್ಳಬೇಕಾದ ವಿಚಾರವಾಗಿದೆ.
ಕೋತಿಗಳು ಕೆಲವು ವಾರ್ಡ್ ಗಳಲ್ಲಿ ಮನೆ ಮನೆ ಒಳಗೆ ನುಗ್ಗಿ ಮನೆಯಲ್ಲಿದ್ದ ಪದಾರ್ಥಗಳನ್ನು ಹೊತ್ತು ಒಯ್ಯುತ್ತಿವೆ, ಇದರಿಂದಾಗಿ ಬಾರಿ ಹಿಂಸೆ ನೀಡುತ್ತಿವೆ,
ಇದಲ್ಲದೆ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ತೆರಳುವವರಂತೂ ಬೀದಿ ನಾಯಿಗಳಿಂದ ಜೀವ ಕೈಯಲ್ಲಿ ಹಿಡಿದು ಕೆಲವರು ದೊಣ್ಣೆ, ಕಡ್ಡಿಗಳನ್ನು ಹಿಡಿದು ನಡೆದಾಡುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಭಯ ಬೀತರಾಗಿದ್ದಾರೆ.
ಅಧಿಕಾರಿಗಳು, ಜನಪ್ರತಿಗಳ ನಿರ್ಲಕ್ಷ್ಯ
ಹಾಗೂ ಆಯಾಯ ರಸ್ತೆಗಳಲ್ಲಿ ಪತ್ರಿಕೆ ವಿತರಿಸುವ ಹುಡುಗರನ್ನು ಅಟ್ಟಾಡಿಸಿಕೊಂಡು ಬಂದು ಬಿದ್ದು ಬಂದಿದ್ದಾರೆ, ಈ ರೀತಿ ಹಲವಾರು ಬಾರಿಯಾಗಿ ಪತ್ರಿಕೆ ವಿತರಿಸಲು ಯಾರು ಬರುವುದಿಲ್ಲ, ಹಾಗೂ ಸಾರ್ವಜನಿಕರು ಬೈಕ್ ನಲ್ಲಿ ಹೋಗುವಾಗ ಬೈಕ್ ನ್ನೆ ಹಿಮ್ಮೆಟ್ಟಿಕೊಂಡು ಬರುತ್ತವೆ, ಈ ಸಂಬಂಧ ಪ್ರಾಣಿ ದಯಾ ಸಂಘದವರು ಈ ಬಗ್ಗೆ ನಾಯಿಗಳನ್ನು ಸಾಯಿಸಬೇಡಿ ಎನ್ನುತ್ತಾರೆಂದು ನೊಂದ ಸಾರ್ವಜನಿಕರು ಹೇಳುತ್ತಾರೆ, ಆದ್ದರಿಂದ ಈ ಸಮಸ್ಯೆಯ ಬಗ್ಗೆ ಪರಿಹಾರವೇನು ಎನ್ನುತ್ತಿದ್ದಾರೆ.
ಎಸ್.ಕೆ. ಸಂತೋಷ್ ಕುಮಾರ್, ಮುಖ್ಯಾಧಿಕಾರಿ, ಪಪಂ, ಸರಗೂರು