ಪಿಯುಸಿ ಫಲಿತಾಶ ಪ್ರಕಟ: ಮಂಡ್ಯ ಜಿಲ್ಲೆಗೆ 12ನೇ ಸ್ಥಾನ

KannadaprabhaNewsNetwork |  
Published : Apr 10, 2026, 01:30 AM IST
ಪಿಯುಸಿ ಫಲಿತಾಶ ಪ್ರಕಟ: ಮಂಡ್ಯ ಜಿಲ್ಲೆಗೆ 12ನೇ ಸ್ಥಾನ | Kannada Prabha

ಸಾರಾಂಶ

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಗೆ ಶೇ.88.85ರಷ್ಟು ಫಲಿತಾಂಶ ದೊರಕಿದೆ. ರಾಜ್ಯದಲ್ಲಿ 12ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆ ಎರಡು ಸ್ಥಾನ ಮೇಲೇರಿರುವುದು ಸಮಾಧಾನ ತಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಗೆ ಶೇ.88.85ರಷ್ಟು ಫಲಿತಾಂಶ ದೊರಕಿದೆ. ರಾಜ್ಯದಲ್ಲಿ 12ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆ ಎರಡು ಸ್ಥಾನ ಮೇಲೇರಿರುವುದು ಸಮಾಧಾನ ತಂದಿದೆ.

ಈ ವರ್ಷ 12,639 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11,231 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.88.86 ರಷ್ಟು ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಲ್ಲಿ 6448 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 6022 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.93.39 ರಷ್ಟು ಫಲಿತಾಂಶ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ 2045 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1538 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.75.21 ರಷ್ಟು ಫಲಿತಾಂಶ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 4146 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 3671 ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಶೇ.81.54 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.

ಪರೀಕ್ಷೆಗೆ ಕುಳಿತಿದ್ದ ಬಾಲಕರ ಪೈಕಿ 5827 ವಿದ್ಯಾರ್ಥಿಗಳಿಗೆ 4697 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.80.61 ಫಲಿತಾಂಶ ಗಳಿಸಿದ್ದರೆ, ಬಾಲಕಿಯರಲ್ಲಿ 8145 ವಿದ್ಯಾರ್ಥಿಗಳು ಹಾಜರಾಗಿ 6954 ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಶೇ.85.38 ರಷ್ಟು ಫಲಿತಾಂಶ ಗಳಿಸಿದ್ದಾರೆ. ಎಂದಿನಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ನಗರ ಮತ್ತು ಪಟ್ಟಣ ವಿಭಾಗದಲ್ಲಿ 5745 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 4932 ಮಂದಿ ತೇರ್ಗಡೆಯಾಗಿದ್ದು, ಶೇ.85.85 ರಷ್ಟು ಫಲಿತಾಂಶ ಲಭಿಸಿದೆ. ಗ್ರಾಮಾಂತರ ವಿಭಾಗದಲ್ಲಿ 6894 ವಿದ್ಯಾರ್ಥಿಗಳಿಗೆ 6299 ವಿದ್ಯಾರ್ಥಿಗಳು ತೇರ್ಡೆಯಾಗಿ ಶೇ.91.37 ರಷ್ಟು ಫಲಿತಾಂಶ ಗಳಿಸಿದ್ದಾರೆ.

2024-25ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 12,765 ವಿದ್ಯಾರ್ಥಿಗಳಲ್ಲಿ 9351 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶೇ.73.27 ಫಲಿತಾಂಶದೊಂದಿಗೆ ಜಿಲ್ಲೆ 14ನೇ ಸ್ಥಾನದಲ್ಲಿತ್ತು. 2023-24ನೇ ಸಾಲಿನಲ್ಲಿ 12,218 ವಿದ್ಯಾರ್ಥಿಗಳು ಪರೀಕ್ಷೆ ಬರೆದು 9843 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶೇ.80.56 ಫಲಿತಾಂಶದೊಂದಿಗೆ ಮಂಡ್ಯ ಜಿಲ್ಲೆ 24ನೇ ಸ್ಥಾನದಲ್ಲಿತ್ತು.

ಪಾಂಡವಪುರ ತಾಲೂಕಿನ ಎಸ್‌ಟಿಜಿ ಪದವಿಪೂರ್ವ ಕಾಲೇಜಿನ ಟಿ.ಎಸ್.ಸಹನಾ ವಿಜ್ಞಾನ ವಿಭಾಗದಲ್ಲಿ 593 , ಮಾಂಡವ್ಯ ಎಕ್ಸಲೆನ್ಸ್ ಕಾಲೇಜಿನ ಕೆ.ವೈ.ಸಂಜನಾ 592 ಹಾಗೂ ಕಾರ್ಮಲ್ ಕಾಲೇಜಿನ ಫಯಾಜ್ ಅಲಿಖಾನ್ ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಗಳಿಸಿದ್ದಾರೆ.

ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು 3473 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 2829 ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುವ ಮೂಲಕ ಶೇ.81.46 ರಷ್ಟು ಫಲಿತಾಂಶ ಲಭಿಸಿದೆ. ಇಂಗ್ಲಿಷ್ ವಿಭಾಗದಲ್ಲಿ 9 ಸಾವಿರ ಪರೀಕ್ಷೆಗೆ ಕುಳಿತು 8074 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.89.71 ರಷ್ಟು ಫಲಿತಾಂಶ ಗಳಿಸಿದ್ದರೆ, ಕನ್ನಡ ವಿಭಾಗದಲ್ಲಿ 4972 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3577 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.71.94 ರಷ್ಟು ಫಲಿತಾಂಶ ಬಂದಿದೆ.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯನ್ನು ಟಾಪ್-10ರೊಳಗೆ ತರುವುದಕ್ಕೆ ಸಾಕಷ್ಟು ಶ್ರಮಿಸಿದ್ದೆವು. ಆದರೆ, 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಶೇ.15.58 ರಷ್ಟು ಫಲಿತಾಂಶ ಹೆಚ್ಚಿರುವುದು ಹಾಗೂ ಜಿಲ್ಲೆ ಎರಡು ಸ್ಥಾನ ಮೇಲೇರಿರುವುದು ಸಂತಸ ತಂದಿದೆ.

- ಚಲುವಯ್ಯ, ಉಪ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಮಂಡ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಝೂಂಬಿ ಡ್ರಗ್ಸ್ ಬಗ್ಗೆ ಸುಳ್ಳು ಸುದ್ದಿಹರಡಿದರೆ ಕ್ರಮ: ಸಿಂಗ್ ಎಚ್ಚರಿಕೆ
ಖಾಸಗಿ ಗೋದಾಮಿಗೆ ಬೆಂಕಿ:ಕೊಟ್ಯಂತರ ರು. ವಸ್ತು ಭಸ್ಮ