ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಮುಂಭಾಗ ತುರುವೇಕೆರೆ, ನೆಲಮಂಗಲ ರೋಟರಿ ಕ್ಲಬ್, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಾಗೂ ಈಡಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಪ್ರತಿಷ್ಠಾಪಿಸಿದ ಪುನೀತ್ ರಾಜಕುಮಾರ್ ಪುತ್ಥಳಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಡಾ.ರಾಜಕುಮಾರ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರಿಗಿಂತಲೂ ಪುನೀತ್ ಹೆಚ್ಚು ಅಭಿಮಾನಿಗಳನ್ನು ಕೆಲವೇ ವರ್ಷಗಳಲ್ಲಿ ಗಳಿಸಿದ್ದರು. ಅವರು ಮಾಡಿದ ಜನಪರ ಸೇವೆ ಎಲ್ಲರನ್ನೂ ಮಂತ್ರ ಮುಗ್ದಗೊಳಿಸಿತ್ತು. ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ರವರು ತಮ್ಮ ನೇತ್ರ ದಾನ ಮಾಡಿದುದ್ದನ್ನು ಮಾದರಿಯನ್ನಾಗಿಸಿಕೊಂಡ ಅಭಿಮಾನಿಗಳು ತಮ್ಮ ನೇತ್ರವನ್ನು ಧಾರೆ ಎರೆದಿದ್ದಾರೆ. ಅದರ ಪರಿಣಾಮವಾಗಿ ಇಂದು ಸಾವಿರಾರು ಮಂದಿಯ ಬಾಳಲ್ಲಿ ಬೆಳಕು ಮೂಡಿದೆ ಎಂದರು.ಪರಿಸರ ಪ್ರೇಮಿ ಟಿ.ವಿ.ಎನ್ ಮೂರ್ತಿ ಮಾತನಾಡಿ, ಪುನೀತ್ ರಾಜಕುಮಾರ್ ಕೇವಲ ನಟನಾಗಿರಲಿಲ್ಲ. ಅವರು ಮಹಾನ್ ಮಾನವತಾವಾದಿ ಆಗಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಅವರ ಸ್ವಭಾವ ಮಂತ್ರಮುಗ್ದಗೊಳಿಸುತ್ತಿತ್ತು. ಅವರು ಪ್ರಚಾರಕ್ಕೆ ಬಾರದೇ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಿದ್ದು ನಮ್ಮಂಥವರಿಗ ಪ್ರೇರಣೆ ಆಗಿದೆ ಎಂದರು.