ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಹಾವೀರ ವೃತ್ತದ ಬಳಿಯ ಕಾಮಧೇನು ಕಂಫರ್ಟ್ ಮುಂಭಾಗ ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೃದಯವಂತ ವ್ಯಕ್ತಿಯಾಗಿದ್ದ ಪುನೀತ್ ರಾಜ್‌ಕುಮಾರ್ ಸಮಾಜಕ್ಕೆ ನೀಡಿದ ಕೊಡುಗೆ ಮಾದರಿಯಾದದ್ದು. ಪ್ರಚಾರವನ್ನು ಎಂದೂ ಬಯಸದೆ ನಿಸ್ವಾರ್ಥದಿಂದ ನೊಂದವರಿಗೆ ಸಹಾಯಹಸ್ತ ನೀಡುವುದರೊಂದಿಗೆ ಎಲ್ಲರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ ಎಂದು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ಶಂಕರೇಗೌಡ ಮಾತನಾಡಿ, ಬದುಕಿದ್ದಾಗ ಪುನೀತ್ ರಾಜ್‌ಕುಮಾರ್ ಮಾಡಿದ ಸಮಾಜಮುಖಿ ಕೆಲಸಗಳು ಯಾರಿಗೂ ಗೊತ್ತಾಗಲೇ ಇಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಅಪ್ಪು ನೋಡಿಕೊಂಡಿದ್ದರು. ಅವರು ಅಗಲಿದಾಗಲೇ ಪುನೀತ್ ರಾಜ್‌ಕುಮಾರ್ ಒಳ್ಳೆಯ ಕೆಲಸಗಳು ಬೆಳಕಿಗೆ ಬಂದಿದ್ದವು ಎಂದರು.ಭಾರತೀಯ ಚಿತ್ರರಂಗದ ನಟಸಾರ್ವಭೌಮ ಡಾ. ರಾಜ್ಕುಮಾರ್ ಆದರ್ಶದ ಹಾದಿಯಲ್ಲಿ ಹೆಜ್ಜೆ ಹಾಕಿದ ಪುನೀತ್ ರಾಜ್‍ಕುಮಾರ್ ಅಗಲಿ ಮೂರು ವರ್ಷಗಳಾದವು ಅನ್ನೋದನ್ನು ಕೋಟ್ಯಂತರ ಅಭಿಮಾನಿಗಳಲ್ಲದೇ ಅವರ ಕುಟುಂಬ ವರ್ಗ ಕೂಡ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಸ್ಮರಿಸಿದರು.
ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ, ಪುಷ್ಪನಮನ ಸಲ್ಲಿಸಿದ ಬಳಿಕ ಪುನೀತ್ ಅವರ ನೆಚ್ಚಿನ ಸಿಹಿ ತಿನಿಸುಗಳನ್ನು ಎಡೆಇಟ್ಟರು. ನಂತರ ನೆರೆದಿದ್ದ ನೂರಾರು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಿದರು.ನಟರಾಜು, ರವಿ, ಬೋರೇಗೌಡ, ಚಂದ್ರು, ನಾರಾಯಣ್, ಮಹೇಶ್, ಅಭಿಷೇಕ್, ಅಶೋಕ್ ಇತರರಿದ್ದರು.