ಸರಿಯಾದ ಸಾಕ್ಷಿ ಇದ್ದರೆ ಶಿಕ್ಷೆ ಖಂಡಿತ: ಎಸ್ಪಿ ಶ್ರೀನಿವಾಸಲು

KannadaprabhaNewsNetwork |  
Published : Jan 31, 2024, 02:21 AM IST
ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲಿಸ್ ಠಾಣಿಯ ಅವರಣದಲ್ಲಿ ದಲಿತ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಅಡೂರ ಶ್ರೀನಿವಾಸಲು ಅವರು ೧೧೨ ನ ಕರಪತ್ರ ಹಾಗೂ ಬೀಟ್ ಸಿಬ್ಬಂದಿಗಳ ಮಾಹಿತಿಯ ಪೋಸ್ಟರ್'ಗಳನ್ನು ಬಿಡುಗಡೆಗೊಳಿಸಿದರು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಾಡಬೂಳ ಪೊಲೀಸ್ ಠಾಣೆ ಆವರಣದಲ್ಲಿ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರ ನೇತೃತ್ವದಲ್ಲಿ ದಲಿತ ದಿನಾಚರಣೆ ಅಂಗವಾಗಿ ೧೧೨ರ ಕರಪತ್ರ ಹಾಗೂ ಬೀಟ್ ಸಿಬ್ಬಂದಿ ಮಾಹಿತಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ನೂರು ದೂರುಗಳ ಪೈಕಿ ಸರಿಯಾದ ಸಾಕ್ಷಿ ಇಲ್ಲದೆ ಇರುವುದರಿಂದ ಕೇವಲ ಬೆರಳೆಣಿಕೆಯಷ್ಟು ಮಾತ್ರ ಆರೋಪಿಗಳಿಗೆ ಶಿಕ್ಷೆ ಯಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಅಪರಾಧಗಳ ಬಗ್ಗೆ ಸಾಕ್ಷಿ ಮತ್ತು ಅಪರಾಧಕ್ಕೆ ಸಂಬಂಧಿಸಿದಂತೆ ಸರಿಯಾದ ಮತ್ತು ನಿಖರವಾದ ಸಾಕ್ಷಿ ಹೇಳಿದರೆ ಅಪರಾಧಿಗಳಿಗೆ ಶಿಕ್ಷೆ ನೀಡುವುದು ಖಂಡಿತ ಎಂದು ಕಲಬುರಗಿ ಜಿಲ್ಲಾ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ತಿಳಿಸಿದ್ದಾರೆ.

ತಾಲೂಕಿನ ಮಾಡಬೂಳ ಪೊಲೀಸ್ ಠಾಣೆ ಆವರಣದಲ್ಲಿ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರ ನೇತೃತ್ವದಲ್ಲಿ ದಲಿತ ದಿನಾಚರಣೆ ಅಂಗವಾಗಿ ೧೧೨ರ ಕರಪತ್ರ ಹಾಗೂ ಬೀಟ್ ಸಿಬ್ಬಂದಿ ಮಾಹಿತಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ನೂರು ದೂರುಗಳ ಪೈಕಿ ಸರಿಯಾದ ಸಾಕ್ಷಿ ಇಲ್ಲದೆ ಇರುವುದರಿಂದ ಕೇವಲ ಬೆರಳೆಣಿಕೆಯಷ್ಟು ಮಾತ್ರ ಆರೋಪಿಗಳಿಗೆ ಶಿಕ್ಷೆ ಯಾಗುತ್ತಿದೆ ಎಂದರು.

ಪಿರ‍್ಯಾದುದಾರರು ಘಟನೆಯ ಬಗ್ಗೆ ನಿಖರವಾದ ಮಾಹಿತಿ ನೀಡದೆ ಯಾವುದೋ ಒಂದು ಕಾರಣಕ್ಕಾಗಿ ಇಲ್ಲ ಸಲ್ಲದ ವಿಷಯಗಳನ್ನು ಸೇರಿಸಿ ದೂರು ದಾಖಲಿಸುತ್ತಿರುವುದು ಸರಿಯಲ್ಲ, ಘಟನೆಯ ಬಗ್ಗೆ ಪ್ರತ್ಯಕ್ಷವಾಗಿರುವ ಘಟನೆಯ ನಿಖರವಾಗಿ ಮಾಹಿತಿಯೊಂದಿಗೆ ದೂರು ಸಲ್ಲಿಸಿದಾಗ ಮಾತ್ರ ಪ್ರಕರಣವನ್ನು ಭೇದಿಸಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಜಾತಿನಿಂದನೆಯ ದೌರ್ಜನ್ಯ ವಿಷಯದಲ್ಲಿ ಇಂತಹ ವಿಷಯಗಳು ಹೆಚ್ಚಾಗಿ ಕಾಣಸಿಗುತ್ತಿವೆ. ಹಾಗಾಗಿ ಸಾರ್ವಜನಿಕರು ಮತ್ತು ಪ್ರತ್ಯಕ್ಷದರ್ಶಿಗಳು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಈ ವೇಳೆ ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಶಹಾಬಾದ ಸಿಪಿಐ ನಟರಾಜ ಲಾಡೆ, ಮಾಡಬೂಳ ಪಿಎಸ್ಐ ಚೇತನ್, ಕ್ರೈಂ ಪಿಎಸ್ಐ ಶೀಲಾದೇವಿ, ಮುಖಂಡರಾದ ಸುನೀಲ್ ದೊಡ್ಮನಿ, ಮಲ್ಲಪ್ಪ ಹೊಸ್ಮನಿ, ಗುಂಡು ಮತ್ತಿಮೂಡ, ಆನಂದ ಮಸ್ಕಿ, ನಾಗರಾಜ ಸಜ್ಜನ್ ಇಂಗನಕಲ್ ಸೇರಿದಂತೆ ಮುಖಂಡರು, ಪೊಲೀಸ್ ಇಲಾಖೆಯ ಸಿಬ್ಬಂದಿ ಕಲ್ಲಪ್ಪ ಎಸ್ಐ, ಲಕ್ಷ್ಮಣ ಎಸ್ಐ, ಕಮಲಾಕರ್, ಪ್ರಶಾಂತ ಹೇರೂರ್, ವೀರಶೆಟ್ಟಿ, ಸಂಗಣ್ಣ, ಶಾಂತಮಲ್ಲು, ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ