ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರೈತರ ನೋಂದಣಿ ಕಾರ್ಯವನ್ನು 80 ದಿನಗಳವರೆಗೆ ಮತ್ತು ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರ ಹೆಸರು ನೋಂದಾಯಿಸಿಕೊಳ್ಳಲು ಆಧಾರ್ ಕಾರ್ಡ್ ಪ್ರತಿ, ಎಫ್ಐಡಿ ಸಂಖ್ಯೆ ಹಾಗೂ ಪಹಣಿ ಸಲ್ಲಿಸಿ ನೋಂದಾಯಿಸಿಕೊಳ್ಳತಕ್ಕದ್ದು. ಕಡಲೆ ಉತ್ಪನ್ನ ಖರೀದಿಸುವ ಪೂರ್ವದಲ್ಲಿ ರೈತರು ನೀಡಿರುವ ವಿವರವನ್ನು ಎನ್‌ಸಿಸಿಎಫ್ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಇ-ಸಂಯುಕ್ತಿ ತಂತ್ರಾಂಶದೊಂದಿಗೆ ಭೂಮಿ ಯುಡಿಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿ ನಂತರವೆ ನೋಂದಾಯಿಸಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಬೆಳೆ ದರ್ಶಕದಲ್ಲಿ ಬೆಳೆ ಬೆಳೆಯದೆ ಇರುವುದು ಕಂಡು ಬಂದಲ್ಲಿ ಅಂತಹ ರೈತರು ಹತ್ತಿರದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಸಂಪರ್ಕಿಸಿ ಆಕ್ಷೇಪಣೆ ಸಲ್ಲಿಸಿ ಬೆಳೆ ದರ್ಶಕದಲ್ಲಿ ಬೆಳೆ ನಮೂದಿಸಿಕೊಂಡ ನಂತರ ಖರೀದಿ ಕೇಂದ್ರದಲ್ಲಿ ನೋಂದಾಯಿಸಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರಗಳ ಅಧಿಕಾರಿಗಳನ್ನು ಹಾಗೂ ಶಾಖಾ ವ್ಯವಸ್ಥಾಪಕರನ್ನು (9449864458) ಸಂಪರ್ಕಿಸುವಂತೆ ತಿಳಿಸಿದ್ದಾರೆ.ಖರೀದಿ ಕೇಂದ್ರಗಳ ವಿವರ:
ಹಳ್ಳೂರು: 9901325201
ಕೆರೂರು: 9972301729
ನಂದವಾಡಗಿ: 9902377067
ಬೂದಿಹಾಳ: 7019825319
ಮುಗನೂರು: 8310324070
ಮುಧೋಳ: 9242783318
ಲೋಕಾಪೂರ: 9880927310ಸರ್ವಬಂದು: 9844474344
ಜಮಖಂಡಿ: 7019445935ತೊದಲಬಾಗಿ: 9741998771
ಬೀಳಗಿ: 7019682890ಬೀಳಗಿ ಕ್ರಾಸ್: 9880376768