ಪುತ್ತಿಗೆ: ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಪೂರ್ವ ಸಾಮೂಹಿಕ ಪ್ರಾರ್ಥನೆ

KannadaprabhaNewsNetwork |  
Published : Jun 13, 2025, 03:10 AM IST
11ಪುತ್ತಿಗೆ | Kannada Prabha

ಸಾರಾಂಶ

ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದದೊಂದಿಗೆ ಅವರ ಮಾರ್ಗದರ್ಶನದಲ್ಲಿ, ಊರ ಸಮಸ್ತ ಭಕ್ತ ಜನರ ಸಹಕಾರದೊಂದಿಗೆ ಬುಧವಾರ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆಯಲ್ಲಿರುವ ಸುಮಾರು ೧೨೦೦ ವರ್ಷ ಇತಿಹಾಸವಿರುವ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಈಗ ಸಿದ್ಧತೆಗಳು ನಡೆದಿವೆ.

ಈ ಪ್ರಯುಕ್ತ ಪ್ರಸಕ್ತ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದದೊಂದಿಗೆ ಅವರ ಮಾರ್ಗದರ್ಶನದಲ್ಲಿ, ಊರ ಸಮಸ್ತ ಭಕ್ತ ಜನರ ಸಹಕಾರದೊಂದಿಗೆ ಬುಧವಾರ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ಜರುಗಿತು.ದೇವಸ್ಥಾನದ ತಂತ್ರಿಗಳಾದ ವಾದಿರಾಜ ತಂತ್ರಿಗಳ ಮತ್ತು ಅರ್ಚಕರಾದ ವಿಷ್ಣುಮೂರ್ತಿ ಉಪಾಧ್ಯಾಯ ಅವರ ಸಮಕ್ಷಮದಲ್ಲಿ, ಕುಮಾರ ಗುರು ತಂತ್ರಿಗಳು ಮಾತನಾಡಿ, ಜೀರ್ಣೋದ್ಧಾರದಂತಹ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿ ಪ್ರಾರ್ಥನೆಯನ್ನು ವಿದ್ಯುಕ್ತವಾಗಿ ಮಾಡಿಸಿದರು.ತದನಂತರ ನಡೆದ ಸಭೆಯಲ್ಲಿ ಶ್ರೀ ಮಠದ ದಿವಾನರಾದ ನಾಗರಾಜಾಚಾರ್ಯರು ಮಾತನಾಡಿ, ಭಕ್ತ ಜನರ ಸಹಕಾರವನ್ನು ಕೋರಿದರು. ಕಾರ್ಯದರ್ಶಿ ಪ್ರಸನ್ನಾಚಾರ್ಯ, ಅರ್ಚಕರಾದ ಲಕ್ಷ್ಮೀನಾರಾಯಣ ಉಪಾಧ್ಯಾಯ, ಪಳ್ಳಿ ನಟರಾಜ್ ಹೆಗ್ಡೆ, ಪಳ್ಳಿ ರಾಜರಾಮ ಹೆಗ್ಡೆ, ಶಾಂತಾರಾಮ ಪ್ರಭು, ಕುಯಿಲಾಡಿ ಸುರೇಶ್ ನಾಯಕ್, ವಾಸುದೇವ್ ಭಟ್, ನಾರಾಯಣ ಪೂಜಾರಿ, ಪುತ್ತಿಗೆ ಪ್ರಕಾಶ್ ಶೆಟ್ಟಿ, ಪ್ರವೀಣ್ ಶೇರಿಗಾರ್, ಅಪ್ಪು ನಾಯಕ್ ಮೊದಲಾದ ಊರಿನ ಊರಿನ ಅನೇಕ ಗಣ್ಯರು ಉಪಸ್ಥಿತರಿದ್ದರು.ಕಾಪು ಶಾಸಕ ಸುರೇಶ್ ಶೆಟ್ಟಿ ಈ ಸಂದರ್ಭದಲ್ಲಿ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು ತಮ್ನ ಸಹಕಾರದ ಭರವಸೆಯನ್ನಿತ್ತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''