ಪುತ್ತೂರು: ಬಗರ್‌ಹುಕುಂ ಹಕ್ಕುಪತ್ರ ವಿತರಣೆ, ತಹಸೀಲ್ದಾರ್‌ಗೆ ಬೀಳ್ಕೊಡುಗೆ

KannadaprabhaNewsNetwork |  
Published : Jun 02, 2025, 01:17 AM IST
ಫೋಟೋ: ೨೭ಪಿಟಿಆರ್-ಹಕ್ಕುಪತ್ರಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿದರು. | Kannada Prabha

ಸಾರಾಂಶ

ಪುತ್ತೂರಿನ ಪುರಭವನದಲ್ಲಿ ಬಗರ್ ಹುಕುಂ ಹಕ್ಕುಪತ್ರ ವಿತರಣೆ ಹಾಗೂ ನಿವೃತ್ತರಾಗಲಿರುವ ತಹಸೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಶಾಸಕಾಂಗ, ಕಾರ್ಯಾಂಗ ಜೊತೆಯಲ್ಲಿ ಸಾಗಿದರೆ ಜನರಿಗೆ ಉತ್ತಮ ಸೇವೆ ಲಭ್ಯ: ಅಶೋಕ್ ರೈಕನ್ನಡಪ್ರಭ ವಾರ್ತೆ ಪುತ್ತೂರು

ಶಾಸಕಾಂಗ ಮತ್ತು ಕಾರ್ಯಾಂಗ ಜೊತೆಯಲ್ಲಿ ಸಾಗಿದರೆ ಮಾತ್ರ ಜನರಿಗೆ ಉತ್ತಮ ಸೇವೆಗಳು ಸಿಗುತ್ತದೆ. ಈ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ತಹಸೀಲ್ದಾರ್ ಮತ್ತು ಸಿಬ್ಬಂದಿ ಉತ್ತಮ ಸಹಕಾರ ನೀಡುತ್ತಿದ್ದು, ಇದರಿಂದಾಗಿ ೩ ಸಾವಿರ ಕಡತಗಳನ್ನು ೭ ತಿಂಗಳ ಅವಧಿಯೊಳಗಡೆ ವಿಲೇವಾರಿ ಮಾಡಲಾಗಿದೆ. ಬಗರ್ ಹುಕುಂ ಅರ್ಜಿಗೆ ಸಂಬxಧಿಸಿದxತೆ ೨೮ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಹಕ್ಕು ಪತ್ರ ವಿತರಣೆಯಲ್ಲಿ ಪುತ್ತೂರು ತಾಲೂಕು ರಾಜ್ಯದಲ್ಲಿಯೇ ಪ್ರಥಮವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳದ್ದಾರೆ.ಮಂಗಳವಾರ ಪುತ್ತೂರಿನ ಪುರಭವನದಲ್ಲಿ ನಡೆದ ಬಗರ್ ಹುಕುಂ ಹಕ್ಕುಪತ್ರ ವಿತರಣೆ ಹಾಗೂ ನಿವೃತ್ತರಾಗಲಿರುವ ತಹಸೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ೨ ವರ್ಷಗಳ ಹಿಂದೆ ೩೨ಸಾವಿರ ಕಡತ ಬಾಕಿ ಇದ್ದು, ಈ ಪೈಕಿ ೩ಸಾವಿರ ಕಡತವನ್ನು ೭ತಿಂಗಳಲ್ಲಿ ಮಾಡಲಾಗಿದೆ. ಇದಕ್ಕಾಗಿ ೧೫ ಬೈಠಕ್‌ಗಳನ್ನು ಮಾಡಲಾಗಿದೆ. ಬಗರ್‌ಹುಕುಂ ಹಕ್ಕುಪತ್ರ ವಿತರಣೆಯಲ್ಲಿ ಸಂಖ್ಯೆಯಲ್ಲಿ ಪುತ್ತೂರು ರಾಜಕ್ಕೆ ಮೊದಲ ಸ್ಥಾನದಲ್ಲಿದೆ. ಈ ಹಿಂದೆ ಸುಮಾರು ೧೫ ಸಾವಿರ ಕಡತಗಳನ್ನು ಕುಮ್ಕಿಯ ನೆಪವನ್ನು ಒಡ್ಡಿ ತಿರಸ್ಕರಿಸಿ ಫಲಾನುಭವಿಗಳಿಗೆ ಮೋಸ ಮಾಡಿ ಮುಚ್ಚಿ ಹಾಕಿದ್ದಾರೆ. ಕುಮ್ಕಿ ಹಕ್ಕು ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ದಾವೆ ಇದೆ ಎಂಬ ಕಾರಣದಿಂದ ತುಂಬಾ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಪುನರ್‌ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗುವುದು ಹಾಗೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು. ೨೮ ಮಂದಿಗೆ ಅಕ್ರಮ ಸಕ್ರಮದ ಹಕ್ಕು ಪತ್ರ ವಿತರಣೆ ಮಾಡಲಾಯಿತು. ೭೬ ಮಂದಿಗೆ ೯೪ಸಿ, ೯೪ಸಿಸಿ ಹಕ್ಕುಪತ್ರ ನೀಡಲಾಯಿತು.

ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ರೂಪ ರೇಖಾ ಆಳ್ವ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು. ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಸ್ವಾಗತಿಸಿದರು. ಪುತ್ತೂರು ಕಂದಾಯ ನಿರೀಕ್ಷಕ ಗೋಪಾಲ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ