ಹಿರಿಯರು ತಮ್ಮನ್ನು ಯಾವುದಾದರೂ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸದೆ ಆಸಕ್ತಿಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ತಮಗೆ ಇಷ್ಟವಾಗುವ ಕೆಲಸ, ಚಟುವಟಿಕೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಸದಾ ಚಟುವಟಿಕೆಯಿಂದಿದ್ದು, ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಆರೋಗ್ಯಕರ ಜೀವನಶೈಲಿಗೆ ಸರಿಯಾದ ದಿನಚರಿಯೂ ಅಗತ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ವಾಲ್ಟರ್ ಹೆಚ್ ಡಿ''''ಮೆಲ್ಲೊ ಅಭಿಪ್ರಾಯಪಟ್ಟರು.
ಪುತ್ತೂರು : ಹಿರಿಯರು ತಮ್ಮನ್ನು ಯಾವುದಾದರೂ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸದೆ ಆಸಕ್ತಿಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ತಮಗೆ ಇಷ್ಟವಾಗುವ ಕೆಲಸ, ಚಟುವಟಿಕೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಸದಾ ಚಟುವಟಿಕೆಯಿಂದಿದ್ದು, ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಆರೋಗ್ಯಕರ ಜೀವನಶೈಲಿಗೆ ಸರಿಯಾದ ದಿನಚರಿಯೂ ಅಗತ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ವಾಲ್ಟರ್ ಹೆಚ್ ಡಿ''''''''''''''''ಮೆಲ್ಲೊ ಅಭಿಪ್ರಾಯಪಟ್ಟರು.
ಅವರು ಪುತ್ತೂರಿನ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರಿಕರ ಹಿತರಕ್ಷಣಾ ಸಂಘದ ಜಂಟಿ ಆಶ್ರಯದಲ್ಲಿ ಪುತ್ತೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಹಾಗೂ ಹಿರಿಯರ ಸೇವೆ ಮಾಡುತ್ತಿರುವ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯರು ಆರೋಗ್ಯಕರವಾಗಿ, ಉತ್ಸಾಹದಿಂದ ಹಾಗೂ ಸಮಾಜದೊಂದಿಗೆ ಬೆರೆತು ಬದುಕುವ ಮೂಲಕ ತಮ್ಮ ಅನುಭವವನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳಬೇಕು. ಅದೇ ರೀತಿ ಮಹಾತ್ಮಗಾಂಧಿ ಹಾಕಿಕೊಟ್ಟ ಅಹಿಂಸೆ ನಮಗೆ ಇವತ್ತಿನ ಕಾಲದಲ್ಲಿ ಪ್ರೇರಣೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಕರ್ತವ್ಯನಿಷ್ಠೆ ಮತ್ತು ಶಿಸ್ತಿನ ಜೀವನವೂ ಹಿರಿಯರಿಗೆ ಮಾತ್ರವಲ್ಲದೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.ರಾಜ್ಯ ಪ್ರಶಸ್ತಿ ಪುರಷ್ಕೃತ ನಿವೃತ್ತ ಮುಖ್ಯಗುರು ಸತೀಶ್ ಭಟ್ ಮಾತನಾಡಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯಂತಹ ನಾಯಕರ ಸರಳತೆ, ಪ್ರಾಮಾಣಿಕತೆ ಹಾಗೂ ನೈತಿಕ ಮೌಲ್ಯಗಳನ್ನು ಇಂದಿನ ಸಾರ್ವಜನಿಕ ಜೀವನದಲ್ಲಿಯೂ ಅಳವಡಿಸಿಕೊಳ್ಳುವ ಅಗತ್ಯವಿದೆ. ಹಿರಿಯರು ತಮ್ಮ ಜೀವನಾನುಭವದ ಜೊತೆಗೆ ಪುಸ್ತಕಗಳನ್ನು ಓದಿ, ಅಧ್ಯಯನಶೀಲರಾಗಿರಬೇಕು. ತಾವು ಕಲಿತ ಜ್ಞಾನ ಮತ್ತು ಅನುಭವವನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಹ ಕೆಲಸವನ್ನು ಮಾಡಬೇಕು. ವೃದ್ಧಾಪ್ಯವನ್ನು ಭಯದಿಂದ ನೋಡುವ ಬದಲು ಉತ್ಸಾಹದಿಂದ ಸ್ವೀಕರಿಸಿ, ಆತ್ಮವಿಶ್ವಾಸದಿಂದ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಪ್ರತಿ ತಿಂಗಳು ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಿಕೊಂಡು ಹಿರಿಯರ ಆರೋಗ್ಯ ಸೇವೆ ಮಾಡುತ್ತಿರುವ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರು ಮತ್ತು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಲಾಯಿತು. ಪ್ರೊ ವತ್ಸಲಾ ರಾಜ್ಞಿ ಸನ್ಮಾನಿತರನ್ನು ಪರಿಚಯಿಸಿದರು.ನಿವೃತ್ತ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಪ್ರಮುಖರಾದ ಡಾ.ಸಂದೀಪ್ ನಾಯಕ್ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕ ಮಹಮ್ಮದ್ ಹಾಜಿ ಪಡೀಲ್ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಕಾಂಚನ ಸುಂದರ್ ಭಟ್ ಉಪಸ್ಥಿತರಿದ್ದರು. ಕನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಮತ್ತು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಜೇವಿಯರ್ ಡಿ ಸೋಜಾ ಸ್ವಾಗತಿಸಿದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್ ವಂದಿಸಿದರು. ನಿವೃತ್ತ ಶಿಕ್ಷಕಿ ವೇದಾವತಿ ಮತ್ತು ತಿರುಮಲೇಶ್ವರ ಭಟ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮೆಡಿಕಲ್ ಕಾಲೇಜು ಬಳಿಕ ಇನ್ನೊಂದು ಆಂದೋಲನಕ್ಕೆ ಸಹಿ ಅಭಿಯಾನ :
ಈ ಹಿಂದೆ ನಾವು ಸಾರ್ವಜನಿಕ ಸರಕಾರಿ ಮೆಡಿಕಲ್ ಕಾಲೇಜು ದಕ್ಷಿಣ ಕನ್ನಡದ ಪುತ್ತೂರಿಗೆ ಬೇಕೆಂದು ಚಿಕ್ಕ ರೂಪುರೇಶೆ ಕೊಟ್ಟು ಚುನಾವಣೆ ಸಂದರ್ಭದಲ್ಲಿ ಮತ್ತಷ್ಟು ಅದಕ್ಕೆ ಒತ್ತು ನೀಡಿದ್ದ ಹಿನ್ನೆಲೆಯಲ್ಲಿ ಒಂದು ಹಂತದ ಆಂದೋಲನಕ್ಕೆ ಜಯ ಸಿಕ್ಕಿದೆ. ಯಾಕೆಂದರೆ ಕಾಲೇಜಿನ ವರ್ಕ್ ಆರ್ಡರ್ ನೋಡಿದ್ದೇನೆ. ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಆಸೆಗಳು ಮತ್ತಷ್ಟು ಸರಕಾರದ ಮುಂದೆ ಹೆಚ್ಚಾಗುತ್ತದೆ. ಮುಂದಿನ ದಿನ ಪುತ್ತೂರಿನಲ್ಲಿ ಕಿದ್ವಾಯಿ, ನಿಮ್ಹಾನ್ಸ್ ಮತ್ತು ಜಯದೇವ ಆಸ್ಪತ್ರೆಯ ಘಟಕಗಳನ್ನು ಒಂದೇ ಆವರಣದಲ್ಲಿ ಸ್ಥಾಪಿಸುವಂತೆ ಆಗ್ರಹಿಸುತ್ತಿದ್ದೇವೆ. ಈ ಆಂದೋಲನದಲ್ಲಿ ಹಿರಿಯರು, ಎಲ್ಲರೂ ಬೆಂಬಲ ನೀಡಬೇಕೆಂದು ಡಾ.ಸಂದೀಪ್ ನಾಯಕ್ ಮನವಿ ಮಾಡಿದರು.
ಹಿರಿಯ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಪ್ರೊ.ಝೇವಿಯರ್ ಡಿಸೋಜ ಅವರು ಮಾತನಾಡಿ ಮೆಡಿಕಲ್ ಕಾಲೇಜಿನ ಬೇಡಿಕೆ ಈಡೇರಿದೆ. ಎಲ್ಲಾ ಪಕ್ಷಗಳು ಕೂಡಾ ಆಗ ಅದನ್ನು ಕೈಗೆತ್ತಿಕೊಂಡಿತ್ತು. ಜನರು ಆಂದೋಲನ ರೀತಿಯಲ್ಲಿ ಹೋಗುವಾಗ ಅಲ್ಲಿ ಜನಪ್ರತಿನಿಧಗಳಾಗುವುವವರು ಗಮನ ಕೊಡಲೇ ಬೇಕಾಗುತ್ತದೆ. ಎಲ್ಲಾ ಪಕ್ಷದವರು ನಾವು ಗೆದ್ದರೆ ಅದನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ಈಗ ಕ್ಯಾನ್ಸರ್ ಹೃದ್ರೊಗ, ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ಕಿದ್ವಾಯಿ, ನಿಮ್ಹಾನ್ಸ್ ಮತ್ತು ಜಯದೇವ ಆಸ್ಪತ್ರೆ ಘಟಕವನ್ನು ಪುತ್ತೂರಿನಲ್ಲಿ ತೆರೆಯಲು ಆಂದೋಲನ ರೂಪ ಆರಂಭಗೊಂಡಿದೆ. ಅದನ್ನು ಹಿರಿಯರಿಂದಲೇ ಆರಂಭಿಸುತ್ತಿದ್ದೇವೆ ಎಂದರು.
ಸಭೆಯಲ್ಲಿ ಹಿರಿಯರಿಂದ ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.