ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್‌ ತಂತ್ರಜ್ಞಾನ ಮೇಳ

KannadaprabhaNewsNetwork |  
Published : Apr 22, 2026, 03:00 AM IST
ಫೋಟೋ: ೧೭ಪಿಟಿಆರ್-ವಿವೇಕಾನಂದ ವಿವೇಕಾನಂದ ಕಾಲೇಜ್‌ನಲ್ಲಿ `ಆಂತರ್ಯ೨-೨೦೨೬ ರಾಷ್ಟ್ರ ಮಟ್ಟದ ತಂತ್ರಜ್ಞಾನ ಮೇಳ ನಡೆಯಿತು. | Kannada Prabha

ಸಾರಾಂಶ

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ಆಶ್ರಯದಲ್ಲಿ ಆಂತರ್ಯ೨-೨೦೨೬ ರಾಷ್ಟ್ರ ಮಟ್ಟದ ತಂತ್ರಜ್ಞಾನ ಮೇಳ ನಡೆಯಿತು.

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ಆಶ್ರಯದಲ್ಲಿ ಆಂತರ್ಯ೨-೨೦೨೬ ರಾಷ್ಟ್ರ ಮಟ್ಟದ ತಂತ್ರಜ್ಞಾನ ಮೇಳ ನಡೆಯಿತು.ಬೆಳಗ್ಗೆ ಸಾವರ್ಕರ್ ಸಭಾ ಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಎಕ್ಸ್ ಫೇಕ್ಟರ್ ಸಾಫ್ಟ್ವೇರ್ಸ್ ಪ್ರೈವೇಟ್‌ ಲಿಮಿಟೆಡ್‌ನ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಶರತ್ ಕುಮಾರ್.ಎ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ.ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ ಕೆ, ಕಾರ್ಯಕ್ರಮ ಸಂಯೋಜಕಿ ಡಾ.ರಾಜೇಶ್ವರಿ.ಎಂ, ವಿದ್ಯಾರ್ಥಿ ಸಂಯೋಜಕರಾದ ಆದಿತ್ಯ ಮತ್ತು ಹವ್ಯಾಸ್ ವೇದಿಕೆಯಲ್ಲ್ಲಿ ಉಪಸ್ಥಿತರಿದ್ದರು. ೧೮ ಕಾಲೇಜುಗಳ ೨೨೮ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು. ಕೋಡಿಂಗ್, ವೆಬ್ ಡಿಸೈನ್, ಐಟಿ ಕ್ವಿಝ್, ಐಡಿಯಥಾನ್, ಐಟಿ ಮ್ಯಾನೇಜರ್, ಟ್ರೆಜರ್ ಹಂಟ್, ಗೇಮಿಂಗ್, ರೀಲ್ಸ್ ಮೇಕಿಂಗ್, ಡ್ಯಾನ್ಸ್ ಹೀಗೆ ೯ ಬಗೆಯ ಆಕರ್ಷಕ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಇಂಜಿನಿಯರಿಂಗ್‌ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ವಿದ್ಯಾ.ಆರ್.ಗೌರಿ ಬಹುಮಾನ ವಿತರಣೆ ಮಾಡಿದರು. ಪ್ರಾಂಶುಪಾಲ ಡಾ.ಮಹೇಶ್‌ ಪ್ರಸನ್ನ.ಕೆ ಉಪಸ್ಥಿತರಿದ್ದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಎಂಡ್ ಕಾಮರ್ಸ್‌ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗೆದ್ದುಕೊಂಡರು. ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಗಳಿಸಿದರು. ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ಡಾ.ರಾಜೇಶ್ವರಿ ವಂದಿಸಿದರು.

ಪ್ರೊ.ನಿಮಾ.ಎಚ್, ಪ್ರೊ.ರಮೇಶ.ಕೆ, ಪ್ರೊ.ಅನಿಲ್ ಕುಮಾರ್.ಕೆ, ಪ್ರೊ.ಅನಿರುದ್ಧ.ಬಿ.ಜಿ.ಎಸ್ ಮತ್ತು ಪ್ರೊ.ಪೂಜಲಕ್ಷ್ಮೀ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂತನ ಬಸ್ ಸಂಚಾರಕ್ಕೆ ಸಚಿವರಿಂದ ಚಾಲನೆ
ಮೂವರು ಸಾಧಕರಿಗೆ ಗೌಡಾ ಪ್ರದಾನ