ಪುತ್ತೂರು: ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಅಧ್ಯಾಪಕರು ನಿರಂತರವಾಗಿ ಹೊಸ ಜ್ಞಾನ ಮತ್ತು ತಂತ್ರಜ್ಞಾನ ಕಲಿಯಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.
ಐದು ದಿನಗಳ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಎಐ ಆಧಾರಿತ ಬೋಧನೆ, ವಿಷಯ ರಚನೆ, ಮೌಲ್ಯಮಾಪನ, ವಿದ್ಯಾರ್ಥಿ ತೊಡಗಿಸಿಕೊಳ್ಳುವಿಕೆ, ದೃಶ್ಯ ವಿಷಯ ರಚನೆ, ಸಂವಾದಾತ್ಮಕ ಬೋಧನೆ, ಎಐ ಅನಾಲಿಟಿಕ್ಸ್ ಹಾಗೂ ಡಿಜಿಟಲ್ ಪೋರ್ಟ್ಫೋಲಿಯೊ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು.
ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಕಂಪ್ಯೂಟರ್ ಅಪಲಿಕೇಶನ್ ವಿಭಠಾಗಗಳ ಡೀನ್ ಡಾ. ವಿನಯಚಂದ್ರ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಗೀತಾ ಪೂರ್ಣಿಮಾ ಕೆ, ಅಕ್ಷತಾ ಬಿ, ಸುರಕ್ಷಾ ಎಸ್. ಫಾತಿಮಾತ್ ಸಾನಿದ, ನಿರೀಕ್ಷಾ ಆರ್ ವಿವಿಧ ಎಐ ಅಪ್ಲಿಕೇಶನ್ ಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಅಕ್ಷತಾ ಬಿ., ರಶ್ಮಿ ವಿ. ಮತ್ತು ಚೈತನ್ಯ ತರಬೇತುದಾರರಾಗಿದ್ದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಿಗೆ ವಿವಿಧ ಎಐ ಪರಿಕರಗಳನ್ನು ಪ್ರಾಯೋಗಿಕವಾಗಿ ಬಳಸುವ ಅವಕಾಶ ಕಲ್ಪಿಸಲಾಯಿತು.ಪಾಠಯೋಜನೆ, ಬೋಧನಾ ಸಂಪನ್ಮೂಲಗಳು, ಮೌಲ್ಯಮಾಪನ, ದೃಶ್ಯ ವಿಷಯಗಳು ಹಾಗೂ ಡಿಜಿಟಲ್ ಪೋರ್ಟ್ಫೋಲಿಯೊಗಳನ್ನು ಸ್ವತಃ ಸಿದ್ಧಪಡಿಸುವ ಮೂಲಕ ತರಬೇತಿಯನ್ನು ಅನುಭವಾತ್ಮಕವಾಗಿ ರೂಪಿಸಲಾಯಿತು.
ನಿರಂತರ ಪ್ರೋತ್ಸಾಹ: ಕಾಲೇಜಿನಲ್ಲಿ ನವೀನ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹವಿದ್ದು, ಅಧ್ಯಾಪಕರು ಕೈಗೊಳ್ಳುವ ಪ್ರತಿಯೊಂದು ಪ್ರಯತ್ನವೂ ಅಂತಿಮವಾಗಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡಬೇಕು ಎಂದರು. ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿಗೆ ಕಾಲೇಜು ನಿರಂತರ ಪ್ರೋತ್ಸಾಹ ನೀಡುತ್ತಿದೆ ಎಂದರು.
ಡಾ.ವಿನಯಚಂದ್ರ ವಂದಿಸಿದರು. ಡಾ. ಗೀತಾ ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು. ಎಫ್‌ಡಿಪಿಯಲ್ಲಿ ಭಾಗವಹಿಸಿದ ಡಾ. ಭಾರತಿ ಎಸ್ ರೈ, ಡಾ. ರಾಧಾಕೃಷ್ಣ ಗೌಡ ವಿ, ಜಾನ್ಸನ್ ಡೇವಿಡ್ ಸಿಕ್ವೇರಾ, ಧನ್ಯ ಪಿ ಟಿ, ತೇಜಸ್ವಿ ಭಟ್, ಹಾಗೂ ಶಿವಾನಿ ಮಲ್ಯ ಅನಿಸಿಕೆ ವ್ಯಕ್ತಪಡಿಸಿದರು. ಐದು ದಿನಗಳ ಈ ಎಫ್ ಡಿ ಪಿ ಅಧ್ಯಾಪಕರಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾ ಕೌಶಲ್ಯ, ಎಐ ಬಳಕೆಯ ಸಾಮರ್ಥ್ಯ ಹಾಗೂ ನವೀನ ಬೋಧನಾ ವಿಧಾನಗಳ ಕುರಿತು ಅರಿವು ಹೆಚ್ಚಿಸುವಲ್ಲಿ ಮಹತ್ವದ ವೇದಿಕೆಯಾಯಿತು.