ತಾರ್ಕಿಕ ಚಿಂತನೆಯಿಂದ ಗಣಿತ ಅರ್ಥೈಸುವಿಕೆ ಸುಲಭ: ಡಾ.ಟಿ.ಪ್ರಕಾಶ್ ಪ್ರಭು

KannadaprabhaNewsNetwork |  
Published : Aug 23, 2026, 02:45 AM IST
ಫೋಟೋ: ೨೧ಪಿಟಿಆರ್-ವಿವೇಕಾನಂದ ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಸಂಘದ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಗಣಿತವು ಕಠಿಣ ವಿಷಯವೆಂದು ಹಲವರು ಭಾವಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ತರ್ಕಬದ್ಧ ಚಿಂತನೆ ಇಲ್ಲದಿರುವುದರಿಂದ ಇಂತಹ ಭಯ ಇರುತ್ತದೆ. ವಿದ್ಯಾರ್ಥಿಗಳು ತಾರ್ಕಿಕ ಶಕ್ತಿಯನ್ನು ಬೆಳೆಸಿಕೊಂಡರೆ ಖಂಡಿತವಾಗಿಯೂ ಗಣಿತವು ಸರಳವಾಗುತ್ತದೆ ಎಂದು ಉಜಿರೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ಟಿ.ಪ್ರಕಾಶ್ ಪ್ರಭು ಹೇಳಿದರು.

ಪುತ್ತೂರು: ಗಣಿತವು ಕಠಿಣ ವಿಷಯವೆಂದು ಹಲವರು ಭಾವಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ತರ್ಕಬದ್ಧ ಚಿಂತನೆ ಇಲ್ಲದಿರುವುದರಿಂದ ಇಂತಹ ಭಯ ಇರುತ್ತದೆ. ವಿದ್ಯಾರ್ಥಿಗಳು ತಾರ್ಕಿಕ ಶಕ್ತಿಯನ್ನು ಬೆಳೆಸಿಕೊಂಡರೆ ಖಂಡಿತವಾಗಿಯೂ ಗಣಿತವು ಸರಳವಾಗುತ್ತದೆ ಎಂದು ಉಜಿರೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ಟಿ.ಪ್ರಕಾಶ್ ಪ್ರಭು ಹೇಳಿದರು.ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ವಿಜ್ಞಾನ ಸಂಘ ಮತ್ತು ಐ.ಕ್ಯೂ.ಎ.ಸಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ ೨೦೨೬-೨೭ನೇ ಸಾಲಿನ ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿಜ್ಞಾನ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಹೊಂದಿರಬೇಕು. ಆಗ ಮಾತ್ರ ಹೊಸದೊಂದರ ಆವಿಷ್ಕಾರವಾಗುತ್ತದೆ. ಆದರೆ ಪ್ರಶ್ನೆಗಳನ್ನು ಕೇಳುವಾಗ ಮುಗ್ಧತೆ ಇರಬೇಕು. ಭಾರತೀಯ ಚಿಂತನೆಗಳು ಮತ್ತು ವಿಚಾರಧಾರೆಗಳು ಸುಳ್ಳಾಗಲು ಸಾಧ್ಯವಿಲ್ಲ. ವಿಜ್ಞಾನ ಮತ್ತು ಸುಜ್ಞಾನ ಎರಡು ಮಿಶ್ರಿತವಾದರೆ ಮಾತ್ರ ಬದುಕಿಗೆ ಸಾಕಾರವಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಹೇಳಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ಸಂಘದ ಲೋಗೋವನ್ನು ಉದ್ಘಾಟಿಸಲಾಯಿತು. ವಿಜ್ಞಾನ ಸಂಘದ ಕಾರ್ಯದರ್ಶಿ ಅನರ್ಘ್ಯ.ಜಿ ವಾರ್ಷಿಕ ಕಾರ್ಯಚಟುವಟಿಕೆಗಳ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಿಗೆ `ಮಾಥ್ ಫನ್ ಅಂಡ್ ಮ್ಯೂಸಿಕ್ ವಿಷಯದ ಕುರಿತು ವಿಶೇಷ ಕಾರ್ಯಾಗಾರ ನಡೆಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್, ರಾಸಾಯನ ಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್ ಕೆ.ಎಸ್, ವಿಜ್ಞಾನ ಸಂಘದ ಸಂಯೋಜಕಿ ಸೌಮ್ಯ.ಬಿ, ವಿಜ್ಞಾನ ಸಂಘದ ಅಧ್ಯಕ್ಷ ಶ್ರೀಜನ್, ಕಾರ್ಯದರ್ಶಿ ಅನರ್ಘ್ಯ.ಜಿ, ಜೊತೆ ಕಾರ್ಯದರ್ಶಿ ಜೀವಿತ ಎಂ.ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಹಂಶಿತಾ.ಕೆ ಸ್ವಾಗತಿಸಿದರು. ಚೇತನ ಸಿ.ಆರ್ ವಂದಿಸಿದರು. ಅಂಕಿತ.ಎ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲಸೌಕರ್ಯ ಅಭಿವೃದ್ಧಿ: ಆಯುಕ್ತರಿಂದ ವಿವಿಧೆಡೆ ಪರಿಶೀಲನೆ
ಅಧ್ಯಾಪಕರು ಹೊಸ ಜ್ಞಾನ, ತಂತ್ರಜ್ಞಾನ ಕಲಿಯಬೇಕು: ಆ್ಯಂಟನಿ ಪ್ರಕಾಶ್ ಮೊಂತೇರೊ