ಮಾಯಸಂದ್ರ ಗ್ರಾಪಂ ಅಧ್ಯಕ್ಷರಾಗಿ ಖಾದಿರ್ ಪಾಷಾ

KannadaprabhaNewsNetwork |  
Published : Oct 05, 2025, 01:01 AM IST
3 ಟಿವಿಕೆ 5 – ತುರುವೇಕೆರೆ ತಾಲೂಕು ಮಾಯಸಂದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಖಾದಿರ್‌ ಪಾಷಾ ರವರನ್ನು ಹಲವಾರು ಮಂದಿ ಅಭಿನಂದಿಸಿದರು. | Kannada Prabha

ಸಾರಾಂಶ

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಖಾದಿರ್ ಪಾಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಖಾದಿರ್ ಪಾಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 15 ಸದಸ್ಯ ಬಲವುಳ್ಳ ಪಂಚಾಯತಿಯಲ್ಲಿ ಖಾದಿರ್ ಪಾಷಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಎನ್.ಎ. ಕುಂ ಇ ಅಹಮದ್, ಖಾದಿರ್‌ ಪಾಷಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಖಾದಿರ್ ಪಾಷಾ ತಮ್ಮನ್ನು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸರ್ವ ಸದಸ್ಯರಿಗೂ ಕೃತಜ್ಙತೆಗಳನ್ನು ಸಲ್ಲಿಸಿದರು. ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಿಗೂ ಅಗತ್ಯವಿರುವ ಮೂಲ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಪಂಚಾಯಿತಿಯ ಅಭಿವೃದ್ಧಿಗಾಗಿ ಒತ್ತು ನೀಡುವುದಲ್ಲದೇ ಸಾರ್ವಜನಿಕರ ಸಮಸ್ಯೆಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು.

ನೂತನ ಅಧ್ಯಕ್ಷರ ಆಯ್ಕೆಯ ಘೋಷಣೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸ್ಥಳೀಯ ಮುಖಂಡರು, ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾ.ಪ್ರಂ. ಉಪಾಧ್ಯಕ್ಷೆ ಕು.ವಿಶಾಲಾಕ್ಷಿ, ಸದಸ್ಯರಾದ ಅಜಿತ್ ಪ್ರಸಾದ್, ಎಂ.ಜಿ. ಮಂಜುನಾಥ್, ಎಂ.ಎಂ. ಶ್ರೀನಿವಾಸ (ಕಾಳಿ), ಸವಿತಾ ಶಿವಕುಮಾರ್, ಪಾರ್ಥಸಾರಥಿ. ಉಷಾ ಶ್ರೀನಿವಾಸ್, ಹುಸ್ಮಾಭಾನು ತಬ್ರೇಜ್, ಶಾತಾಜ್ ಏಜಾಸ್ ಪಾಷ, ಸುಜಾತ ಶಿವರಾಜ್ ನಾಯಕ, ಪಿ.ಡಿ.ಒ ಎಚ್.ಬಿ. ಸುರೇಶ್, ಕಾರ್ಯದರ್ಶಿ ಧರ್ಮಪ್ರಕಾಶ್ ಮುಖಂಡರಾದ ರೆಹ್ಮತ್ ಉಲ್ಲಾ ಖಾನ್, ಕಲೀಲ್ ಪಾಷ, ರೆಹಮತ್, ದಿಲ್ದಾರ್ ಪಾಷಾ, ಅಜ್ಗರ್ ಪಾಷ, ಮುಬಾರಕ್, ಪಿ ಎ ಸಿ ಎಸ್‌ ನ ಅಧ್ಯಕ್ಷ ಎಂ.ಎಲ್. ಲೋಕೇಶ್ ಕಣಕೂರು ಚಂದ್ರಶೇಖರ್, ಪಟೇಲ್ ರಾಜು, ನಾಗೇಶ್, ಶಾಮಿಯಾನ ರಮೇಶ್, ಪೈಂಟ್ ಮೋಹನ್ ಸೇರಿದಂತೆ ಹಲವಾರು ಸ್ಥಳೀಯ ಗ್ರಾಮಸ್ಥರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’