ಬಿ. ರಾಮಪ್ರಸಾದ್ ಗಾಂಧಿ ಹಂಪಿ
ವಸ್ತು ಪ್ರದರ್ಶನ ಮಳಿಗೆಯಲ್ಲಿ ಎರಡು ಕ್ಯೂ ಆರ್ ಕೋಡ್‌ಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ಆರೋಗ್ಯ ಮಾಹಿತಿ ಪಡೆಯಲು ಹಾಗೂ ಅಂಗಾಂಗ ದಾನ ಮಾಡಲು ಕ್ಯೂ ಆರ್ ಕೋಡ್ ಮೂಲಕ ನೋಂದಣಿಗೊಳಿಸಬಹುದು.
ಹಂಪಿ ಹಾಗೂ ಸುತ್ತಮುತ್ತಲು ಹಂಪಿ ಉತ್ಸವದ ಅಂಗವಾಗಿ ತಾತ್ಕಾಲಿಕವಾಗಿ 9 ಕ್ಲಿನಿಕ್ ಗಳನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ತಾತ್ಕಾಲಿಕವಾಗಿ ಸ್ಥಾಪನೆಯಾಗಿರುವ ಆಸ್ಪತ್ರೆಗಳು ಎಲ್ಲೆಲ್ಲಿ ಇವೆ ಎಂಬ ಮಾಹಿತಿ ತಿಳಿಯುತ್ತದೆ. ಸಾರ್ವಜನಿಕರು ಆಗ ಬೇಕಾದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಬಹದು.ಇನ್ನೊಂದು ಕ್ಯೂ ಆರ್ ಕೋಡ್‌ನಲ್ಲಿ ಸ್ಕ್ಯಾನ್ ಮಾಡಿದರೆ ಅಂಗಾಂಗಳನ್ನು ದಾನ ಮಾಡುವವರು ನೋಂದಣಿ ಮಾಡಿಸಬಹುದು. ಒಟ್ಟಿನಲ್ಲಿ 75- 80 ಆರೋಗ್ಯ ಮಾಹಿತಿಗಳನ್ನು ಈ ಕ್ಯೂ ಆರ್ ಕೋಡ್ ಮೂಲಕ ಪಡೆಯಬಹುದು.
ಬಾಲ್ಯವಿವಾಹ ತಡೆಯಲು 1098 ನಂಬರ್‌ಗೆ ಕರೆ ಮಾಡಿದರೆ ಕೂಡಲೇ ಆರೋಗ್ಯ ಸಿಬ್ಬಂದಿ ಸಂಬಂಧಪಟ್ಟ ಸ್ಥಳಕ್ಕೆ ಧಾವಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಡಿಸಿ ದಿವಾಕರ್ ಹಾಗೂ ಶಾಸಕ ಗವಿಯಪ್ಪನವರ ಸಮ್ಮುಖದಲ್ಲಿ ಕ್ಯೂ ಆರ್ ಕೋಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯದಲ್ಲಿಯೇ ಇದೇ ಪ್ರಥಮ ಬಾರಿಗೆ ಹಂಪಿ ಉತ್ಸವದಲ್ಲಿ ಕ್ಯೂ ಆರ್ ಕೋಡ್ ಪದ್ಧತಿ ಜಾರಿಗೆ ತಂದಿದ್ದೇವೆ. ಇದರಿಂದ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಸ್ಥಾಪನೆಯಾಗಿರುವ ಆಸ್ಪತ್ರೆಗಳ ಎಲ್ಲಿವೆ ಎಂಬುದು ತಿಳಿಯುತ್ತದೆ ಹಾಗೂ ತ್ವರಿತವಾಗಿ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುತ್ತದೆ ಎಂದು ವಿಜಯನಗರ ಡಿಎಚ್‌ಒ ಡಾ. ಶಂಕರನಾಯ್ಕ ಹೇಳಿದರು.