ಲಕ್ಷ್ಮೇಶ್ವರ: ಗುಣಮಟ್ಟದ ಶಿಕ್ಷಣದಿಂದ ದೇಶದ ವಿದ್ಯಾರ್ಥಿಗಳು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಹೆಚ್ಚಿನ ಸಾಧನೆ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾವಂತರಾಗಿದ್ದಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಹೆಚ್ಚು ಸಾಧನೆ ಮಾಡುತ್ತಾರೆ. ಶಿಗ್ಲಿ ಗ್ರಾಮವು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯಾಗಿದೆ. ಶಿಗ್ಲಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಕೊರತೆ ಇತ್ತು. ಆದ್ದರಿಂದ ಸರ್ಕಾರ ನೂತನ ಪ್ರೌಢಶಾಲೆ ಮಂಜೂರು ಮಾಡುವ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದರು.
ಸಭೆಯ ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವ ಕಾರ್ಯವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದರು.ಈ ವೇಳೆ ಡಿ.ವೈ. ಹುನಗುಂದ, ರಾಮಣ್ಣ ಶಿಗ್ಲಿ, ಯಲ್ಲಪ್ಪ ತಳವಾರ, ಅಶೋಕ ಶಿರಹಟ್ಟಿ, ಬಿಇಒ ನಾಣಕಿ ನಾಯ್ಕ್ ಮಾತನಾಡಿದರು. ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಾ ಬಿದರಹಳ್ಳಿ, ಬಿ.ಎಸ್. ಹರ್ಲಾಪೂರ, ಎನ್.ಎನ್. ನೆಗಳೂರ, ಸಿಆರ್‌ಸಿ ಜ್ಯೋತಿ ಗಾಯಕವಾಡ, ಗ್ರಾಪಂ ಅಧ್ಯಕ್ಷೆ ಸಂಗೀತಾ ಪೂಜಾರ, ಗ್ರಾಪಂ ಸದಸ್ಯರು ರೇಣುಕಾ ಅತಡಕರ್, ಶೈಲಜಾ ಹೂಗಾರ, ಈರವ್ವ ಹಾರನಹಳ್ಳಿ, ಜಯಶ್ರೀ ಕರ್ಜಗಿ, ಯಲ್ಲವ್ವ ತಳವಾರ, ಮುದಕಣ್ಣ ಗಡಾದ, ಬಸಣ್ಣ ಕರ್ಜಗಿ, ಈರಣ್ಣ ಅಂಬಲಿ, ಅಪ್ಪಣ್ಣ ಕರ್ಜಕಣ್ಣವರ, ಗಣೇಶ ಚವ್ಹಾಣ, ಸುಭಾಷ್ ಹುಲಗೂರ, ಕರಿಯಪ್ಪಗೌಡ ಹೊಸಗೌಡ್ರ, ಡಿ.ಡಿ. ಲಮಾಣಿ ಇದ್ದರು. ಶಿಕ್ಷಕ ತಿಪ್ಪಾ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಎಸ್.ಬಿ. ಅಣ್ಣಿಗೇರಿ ಸ್ವಾಗತಿಸಿದರು.ಇಂದು ಶಿವಾನುಭವ ಕಾರ್ಯಕ್ರಮ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಡಿ. 3ರಂದು ಸಂಜೆ 6 ಗಂಟೆಗೆ 377ನೇ ಮಾಸಿಕ ಶಿವಾನುಭವ ಹಾಗೂ ಕನ್ನಡ ರಾಜರು ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭ ಜರುಗಲಿದೆ.ಸಾನ್ನಿಧ್ಯವನ್ನು ಶಾಂತಲಿಂಗ ಶ್ರೀಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಸಂಗಮೇಶ ತಮ್ಮನಗೌಡ್ರ, ಡಾ. ವೈ.ಎಂ. ಭಜಂತ್ರಿ, ನಿಂಗಪ್ಪ ಕುರಿ, ಮಹಾಲಕ್ಷ್ಮೀ ಚಂದನ್ನವರ, ನಿವೇದಿತಾ ಹಡಪದ, ಬಿ.ಎಂ. ಬೆಳಹಾರ, ಮಲ್ಲಸರ್ಜ ದೇಸಾಯಿ, ಶಿವಾನಂದ ಶೇಬಣ್ಣವರ, ಜಗದೀಶ ಜ್ಞಾನೋಪಂಥ, ಎನ್.ಆರ್. ಅಬ್ಬಿಗೇರಿ, ನಾಗೇಶ ಹುಬ್ಬಳ್ಳಿ, ಬಿ.ಎಂ. ಗೊಜನೂರ, ಶ್ರೀ ಗುರು ಬ್ರಹ್ಮಾನಂದ ಭಜನಾ ಸಂಘ, ಶ್ರೀ ಶರಣ ಬಸವೇಶ್ವರ ಭಜನ ಸಂಘದ ಪದಾಧಿಕಾರಿಗಳು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.