ದಾನಿಗಳ ನೆರವಿನಿಂದ ಮಕ್ಕಳಿಗೆ ಉತ್ತಮವಾದ ಸಮವಸ್ತ್ರ: ಮುಖ್ಯ ಶಿಕ್ಷಕ ಕೃಷ್ಣ

KannadaprabhaNewsNetwork |  
Published : Nov 06, 2026, 01:45 AM IST
ಉತ್ತಮವಾದ ಸಮವಸ್ತ್ರ | Kannada Prabha

ಸಾರಾಂಶ

ನಮ್ಮ ಶಾಲೆಯ ಮಕ್ಕಳಿಗೆ ವಿಶೇಷವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಕೊಡುತ್ತಿದ್ದು, ಜೊತೆಗೆ ದಾನಿಗಳ ನೆರವಿನಿಂದಲೂ ಸಹ ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಿದ್ದೇವೆ. ಇಂತಹ ಸೌಲಭ್ಯಗಳನ್ನು ಪಡೆದುಕೊಂಡ ಮಕ್ಕಳು ಉತ್ತಮವಾದ ವಿದ್ಯಾಭ್ಯಾಸವನ್ನು ಮೈಗೂಡಿಸಿಕೊಂಡು ತಮ್ಮ ಭವಿಷ್ಯವನ್ನು ಪ್ರಜ್ವಲಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹನೂರು

ದಾನಿಗಳ ನೆರವಿನಿಂದ ಶಾಲೆಯ ಎಲ್ಲಾ ಮಕ್ಕಳಿಗೂ ಸಹ ಸಮವಸ್ತ್ರ ವಿತರಣೆ ಮಾಡಿರುವುದು ಶೈಕ್ಷಣಿಕವಾಗಿ ಉತ್ತಮ ಬೆಳವಣಿಗೆ ಎಂದು ಮಾರ್ಟಳ್ಳಿ ಪಿಎಂ ಶ್ರೀ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣ ತಿಳಿಸಿದರು.

ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿರುವ ಪಿಎಂಶ್ರೀ ಸರ್ಕಾರಿ ಉನ್ನತೀಕರಿಸಿದ ಶಾಲೆಯ 289 ಮಕ್ಕಳಿಗೆ ಇತ್ತೀಚೆಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಿ ನಂತರ ಅವರು ಮಾತನಾಡಿದರು.

ದಾನಿಗಳಾದ ಲತಾ ನಟರಾಜ್, ಅಪ್ಪು ಗೋವಿಂದ, ಈಶ್ವರ್ ಶಿಕ್ಷಣ ಸಂಸ್ಥೆಗಳು, ಬಾಲಾಜಿ ಮಂಜ್ಯಾ ನಾಯ್ಕ ಕುಟುಂಬ ವರ್ಗ, ಈಶ್ವರ್ ಮುತ್ಯಾಲಿ, ಶಾಲಾ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸಮಿತಿಯ ಸದಸ್ಯರು ಇವರೆಲ್ಲರ ಸಹಕಾರದೊಂದಿಗೆ ನಮ್ಮ ಶಾಲೆಯ 289 ಮಕ್ಕಳಿಗೂ ಉಚಿತವಾಗಿ ಸಮವಸ್ತ್ರವನ್ನು ವಿತರಣೆ ಮಾಡುವಂತಹ ಸೌಭಾಗ್ಯ ನಮ್ಮದಾಗಿದೆ. ಜೊತೆಗೆ ನಮ್ಮ ಶಾಲೆಯ ಮಕ್ಕಳಿಗೆ ವಿಶೇಷವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಕೊಡುತ್ತಿದ್ದು, ಜೊತೆಗೆ ದಾನಿಗಳ ನೆರವಿನಿಂದಲೂ ಸಹ ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಿದ್ದೇವೆ. ಇಂತಹ ಸೌಲಭ್ಯಗಳನ್ನು ಪಡೆದುಕೊಂಡ ಮಕ್ಕಳು ಉತ್ತಮವಾದ ವಿದ್ಯಾಭ್ಯಾಸವನ್ನು ಮೈಗೂಡಿಸಿಕೊಂಡು ತಮ್ಮ ಭವಿಷ್ಯವನ್ನು ಪ್ರಜ್ವಲಿಸಿಕೊಳ್ಳಬೇಕು. ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ತಮ್ಮ ತಂದೆ- ತಾಯಿಗಳಿಗೆ, ಶಾಲೆಗೆ, ಗ್ರಾಮಕ್ಕೆ, ಶಿಕ್ಷಕರಿಗೆ ಕೀರ್ತಿ ತರುವಂತಹ ಮಕ್ಕಳಾಗಬೇಕು ಎಂದು ಸಲಹೆ ನೀಡಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ್ ಎಂ. ಹಾಗೂ ಉಪಾಧ್ಯಕ್ಷರು, ಸದಸ್ಯರು, ಶಿಕ್ಷಕ, ಶಿಕ್ಷಕಿಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳಸಿದ ಕಪ್‌ನಲ್ಲೇ ಪೆಪ್ಸಿ ಸರ್ವ್‌ ಮಾಡಿದ ಪಿವಿಆರ್ ತಿನಿಸು ಮಳಿಗೆ
ಬಿಎಂಟಿಸಿ ಬಸ್‌ ಪಾಸ್‌ ದರ ಹೆಚ್ಚಳ!