ಕನ್ನಡಕ್ಕೆ ಗುಂಡ್ಲುಪೇಟೆಯ ಕವಿಗಳಿಂದ ಸಾಕಷ್ಟು ಕೊಡುಗೆ: ಡಾ.ಅಶ್ವಿನಿ ಆರ್.ಎಸ್

KannadaprabhaNewsNetwork |  
Published : Nov 06, 2026, 01:45 AM IST
5ಜಿಪಿಟಿ2ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಪ್ರಾಂಶುಪಾಲ ಡಾ.ಮದನ್‌ ಕುಮಾರ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ತಾಲೂಕಿನ ತೆರಕಣಾಂಬಿ ಬೊಮ್ಮರಸ, ಗುಂಡ್ಲುಪೇಟೆಯ ಜಿ.ಪಿ. ರಾಜರತ್ನಂ, ಚಿಕ್ಕದೇವರಾಜ ಒಡೆಯರು ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬಂಡೀಪುರ ದೇಶದಲ್ಲೇ ಗಮನ ಸೆಳೆದ ಕಾರಣ ಹುಲಿಗಳ ನಾಡು ಗುಂಡ್ಲುಪೇಟೆ .

ಗುಂಡ್ಲುಪೇಟೆ: ಕನ್ನಡ ಸಾಹಿತ್ಯಕ್ಕೆ ತಾಲೂಕಿನ ಕವಿಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಚಾಮರಾಜನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಶ್ವಿನಿ ಆರ್.ಎಸ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿ ಮುಖ್ಯ ಭಾಷಣ ಮಾಡಿದರು. ತಾಲೂಕಿನ ತೆರಕಣಾಂಬಿ ಬೊಮ್ಮರಸ, ಗುಂಡ್ಲುಪೇಟೆಯ ಜಿ.ಪಿ. ರಾಜರತ್ನಂ, ಚಿಕ್ಕದೇವರಾಜ ಒಡೆಯರು ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬಂಡೀಪುರ ದೇಶದಲ್ಲೇ ಗಮನ ಸೆಳೆದ ಕಾರಣ ಹುಲಿಗಳ ನಾಡು ಗುಂಡ್ಲುಪೇಟೆ ಎಂದರು. ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ಕಾಲೇಜಿನ ಉಪಪ್ರಾಂಶುಪಾಲ ಡಾ.ಮದನ್ ಕುಮಾರ್ ವಹಿಸಿದ್ದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಇಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಂದ ಆಹಾರಮೇಳ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಮಣಿಕಂಠ, ಐಕ್ಯೂಎಸಿ ಸಂಚಾಲಕ ವಿಜಯ್ ಕುಮಾರ್ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳಸಿದ ಕಪ್‌ನಲ್ಲೇ ಪೆಪ್ಸಿ ಸರ್ವ್‌ ಮಾಡಿದ ಪಿವಿಆರ್ ತಿನಿಸು ಮಳಿಗೆ
ಬಿಎಂಟಿಸಿ ಬಸ್‌ ಪಾಸ್‌ ದರ ಹೆಚ್ಚಳ!