ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷರಾಗಿ ಆರ್.ನಾಗಪ್ಪ ಆಯ್ಕೆ

KannadaprabhaNewsNetwork |  
Published : Jan 19, 2024, 01:48 AM IST
ಹೊನ್ನಾಳಿ ಫೋಟೋ 18ಎಚ್.ಎಲ್.ಐ1. ಪಟ್ಟಣದ ಪಿ.ಎಲ್.ಡಿ.ಬ್ಯಾಂಕ್ ನ ನೂತನ ಉಪಾದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಆರ್.ನಾಗಪ್ಪ ಅವರನ್ನು ಬ್ಯಾಂಕ್ನ ನಿರ್ದೇಶಕರುಗಳು, ವ್ಯವಸ್ಥಾಪಕರು ಅಭಿನಂದಿಸಿದರು.   | Kannada Prabha

ಸಾರಾಂಶ

ನಿಕಟಪೂರ್ವ ಉಪಾಧ್ಯಕ್ಷ ಎ.ಕೆ.ಗುತ್ಯಪ್ಪ ನಿಧನದಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಆರ್.ನಾಗಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಆರ್.ನಾಗಪ್ಪರನ್ನು ಬ್ಯಾಂಕ್ ನ ನೂತನ ಉಪಾಧ್ಯಕ್ಷರೆಂದು ಘೋಷಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ (ಪಿಎಲ್‌ಡಿ) ಉಪಾಧ್ಯಕ್ಷರಾಗಿ ಆರ್.ನಾಗಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಜಿ.ನವೀನ್ ಕುಮಾರ್ ತಿಳಿಸಿದರು.

ನಿಕಟಪೂರ್ವ ಉಪಾಧ್ಯಕ್ಷ ಎ.ಕೆ.ಗುತ್ಯಪ್ಪ ನಿಧನದಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಆರ್.ನಾಗಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಆರ್.ನಾಗಪ್ಪರನ್ನು ಬ್ಯಾಂಕ್ ನ ನೂತನ ಉಪಾಧ್ಯಕ್ಷರೆಂದು ಘೋಷಿಸಲಾಯಿತು.

ನೂತನ ಉಪಾಧ್ಯಕ್ಷ ಆರ್. ನಾಗಪ್ಪ ಮಾತನಾಡಿ ಈ ಸ್ಥಾನದ ಅಕಾಂಕ್ಷಿಯಾಗಿರಲಿಲ್ಲ, ಈ ಹಿಂದೆ ಉಪಾಧ್ಯಕ್ಷರಾಗಿದ್ದ ಎ.ಕೆ.ಗುತ್ಯಪ್ಪ ಅಕಾಲಿಕ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಬ್ಯಾಂಕ್ ನ ನಿರ್ದೇಶಕರು ಸೇರಿ ಎಲ್ಲರ ಸಹಕಾರದಿದ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದು, ಅವರಿಗೆಲ್ಲಾ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ರೈತರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಕೆಲಸ ನಿರ್ವಹಿಸುವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರು ಮಾತನಾಡಿದರು. ಬ್ಯಾಂಕಿನ ವ್ಯವಸ್ಥಾಪಕಿ ವಿಶಾಲಾಕ್ಷಮ್ಮ, ಮಹೇಶಪ್ಪ, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ