ಎಚ್.ಡಿಕೆಯನ್ನು ಮುಖ್ಯಮಂತ್ರಿಯಾಗಿ ನೋಡಲು ಜನತೆ ಕಾತುರ

KannadaprabhaNewsNetwork |  
Published : Jan 10, 2026, 01:15 AM IST
52 | Kannada Prabha

ಸಾರಾಂಶ

ಜನರಿಗೆ ಅಗತ್ಯವಾದ ರಸ್ತೆ, ಚರಂಡಿ, ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇನೆ,

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣರಾಜ್ಯದ ಜನತೆ ಮತ್ತೊಮ್ಮೆ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೋಡುವ ಹಿಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಮಹದೇವ್ ತಿಳಿಸಿದರು.ತಾಲೂಕಿನ ರಾಮನಾಥ ತುಂಗಾ ಗ್ರಾಮದಲ್ಲಿ ಆಯೋಜಿಸಿದ್ದ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ,ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರದೆ ಹೋದರೆ ರಾಜ್ಯದ ಜನರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬುದನ್ನು ಅರಿತು ಜನತೆ ಮತ್ತೊಮ್ಮೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ ಎಂದರು.ತಾಲೂಕಿನಲ್ಲಿ ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಮೊದಲೆರಡು ವರ್ಷ ಪ್ರವಾಹ ನಂತರ ದೇಶಾದ್ಯಂತ ಕೊರೋನಾ ಕರಿನೆರಳು ಆವರಿಸಿ ತಾಲೂಕಿನ ಅಭಿವೃದ್ಧಿಗೆ ತೊಡಕಾಯಿತು, ಇದರ ನಡುವೆಯು ಜನರ ಆಶೋತ್ತರಗಳಿಗೆ ಪೂರಕವಾದ ಕೆಲಸಗಳನ್ನು ಮಾಡಿದ್ದೇನೆ. ಜನರಿಗೆ ಅಗತ್ಯವಾದ ರಸ್ತೆ, ಚರಂಡಿ, ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇನೆ, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 280 ಕೋಟಿ ರು. ವೆಚ್ಚದಲ್ಲಿ ಜಲ ಜೀವನ್ ಯೋಜನೆಯನ್ನು ತರಲು ಪಡಬಾರದ ಕಷ್ಟಪಟ್ಟು ಸಂಪುಟ ಸಚಿವರು ಹಾಗೂ ಉಸ್ತುವಾರಿ ಸಚಿವರ ಕೈಕಾಲು ಯೋಜನೆಯನ್ನು ಜಾರಿಗೊಳಿಸೀದ್ದೇನೆ, ಹೀಗಾಗಿ ಜನರ ಕುಡಿಯುವ ನೀರಿಗೆ ಯಾವುದೇ ಹಾಹಾಕಾರ ಇಲ್ಲದಂತಾಗಿದೆ ಎಂದರು.ಚುನಾವಣೆಗಳಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ. ನಾನು ಕಳೆದ ಚುನಾವಣೆಯಲ್ಲಿ ಪರಾಭವಗೊಂಡರೂ ಕಾರ್ಯಕರ್ತರ ಹಿತ ಕಾಯುವ ಕೆಲಸ ಮಾಡುತ್ತಿದ್ದೇನೆ. ತಾಲೂಕಿನಲ್ಲಿ ಸಚಿವರ ಕಾರ್ಯವೈಖರಿ ಜನರ ಬಾಯಲ್ಲಿ ಬರಲಿ ಎಂಬ ಕಾರಣಕ್ಕೆ ಎರಡುವರೆ ವರ್ಷ ಕಾಯುತ್ತಿದ್ದೆ, ಟೀಕೆ ಮಾಡುವುದರಿಂದ ಏನು ಫಲ ಸಿಗುವುದಿಲ್ಲ, ಕಾರ್ಯಕರ್ತರನ್ನು ಬಡಿದೆಬ್ಬಿಸುವ ಸಲುವಾಗಿ ಬೂತ್ ಮಟ್ಟದಲ್ಲಿ ಸಭೆ ನಡೆಸುವ ಕಾರ್ಯಕರ್ತರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮಾತನಾಡಿ, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನೆಗೆ ಕೊರತೆ ಇಲ್ಲ. ಆದರೂ ಇಡೀ ರಾಜ್ಯದಲ್ಲಿ ಜೆಡಿಎಸ್ ಬೂತ್ ಮಟ್ಟದ ಕಾರ್ಯಕಾರಿ ಸಮಿತಿ ನೇಮಕ ಮಾಡುವುದರ ಮೂಲಕ ಅಧಿಕಾರ ವಿಕೇಂದ್ರಿಕರಣ ಮಾಡುತ್ತಿದೆ. ಕ್ಷೇತ್ರದಲ್ಲಿ ಪಕ್ಷದ ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಜವಾಬ್ದಾರಿ ನೀಡಿ ಪಕ್ಷ ಅಧಿಕಾರಕ್ಕೆ ಬಂದಾಗ ಅವರಿಗೆ ಸೂಕ್ತ ಸ್ಥಾನ ಮಾನ ಒದಗಿಸಲಾಗುತ್ತದೆ ಎಂದರು.ದೊಡ್ಡ ಬ್ಯಾಲಾಳು ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿ, ವರಿಷ್ಠರ ಆದೇಶದಂತೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ. ಪ್ರತಿ ಬೂತ್ ನಲ್ಲಿ ಕನಿಷ್ಠ 20 ಕಾರ್ಯಕರ್ತರು ಇರುವಂತೆ ಸಮಿತಿಯನ್ನು ರಚಿಸಲು ಅವಕಾಶವಿದೆ ಎಂದರು. ಜೆಡಿಎಸ್ ಮುಖಂಡರಾದ ಆರ್.ಪಿ. ಬೋರೇಗೌಡ, ಆರ್.ಬಿ. ಮಹೇಂದ್ರ ಕುಮಾರ್, ಸುರೇಶ್, ಬಸವರಾಜ್ ಅರಸು, ಅಶೋಕ್, ಶಿವರಾಜ್, ಕೃಷ್ಣ, ವೆಂಕಟೇಶ್, ಮಹಾದೇವ್, ಕೆಂಪೇಗೌಡ, ಕುಮಾರ್, ಸುರೇಂದ್ರ, ಡಿ.ಕೆ. ರಾಜಣ್ಣ, ಗುರುಮೂರ್ತಿ, ಮಹದೇವ್ ನಾಯ್ಕ, ಸುಗೀರ್ ಸಾಬ್, ಮಂಜುಳಾ, ಸತ್ಯ, ಶಿವು, ರಾಜೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ