ಕೆಎಂಎಫ್ ಮೇಲೆ ಕಣ್ಣಿಟ್ಟ ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Jul 26, 2025, 01:30 AM IST
25ಕೆಪಿಎಲ್29 ಕೊಪ್ಪಳ ಗವಿಮಠಕ್ಕೆ ಭೇಟಿ ನೀಡಿ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಆರ್ಶಿವಾದ ಪಡೆದ ರಾಬಕೊವಿ ಅಧ್ಯಕ್ಷ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ | Kannada Prabha

ಸಾರಾಂಶ

ರಾಬಕೊವಿ ಅಧ್ಯಕ್ಷನಾಗಿರುವ ರಾಘವೇಂದ್ರ ಹಿಟ್ನಾಳ ಇದೀಗ ಕರ್ನಾಟಕ ಹಾಲು ಒಕ್ಕೂಟದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ ಸಹೋದರ ಡಿ.ಕೆ. ಸುರೇಶ ಕೆಎಂಎಫ್ ಅಧ್ಯಕ್ಷ ಗಾದಿಗೆ ಏರಲು ಪ್ರಯತ್ನಿಸುತ್ತಿರುವಾಗಲೇ ಹಿಟ್ನಾಳ ರಾಬಕೊವಿ ಅಧ್ಯಕ್ಷರಾಗುವ ಮೂಲಕ ಕೆಎಂಎಫ್ ಗದ್ದುಗೆ ಮೇಲೆ ಕಣ್ಣಿಟ್ಟಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಶುಕ್ರವಾರ ಬಳ್ಳಾರಿಯಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಪುನಃರಾಯ್ಕೆ ಬಯಸಿದ್ದ ಮಾಜಿ ಶಾಸಕ ಭೀಮಾನಾಯ್ಕ ನಾಮಪತ್ರ ಸಲ್ಲಿಸದೆ ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದ್ದರಿಂದ ಹಿಟ್ನಾಳ ಗೆಲುವು ಸುಗಮವಾಗಿದೆ.

ಕೆಎಂಎಫ್‌ ಮೇಲೆ ಕಣ್ಣು:

ರಾಬಕೊವಿ ಅಧ್ಯಕ್ಷನಾಗಿರುವ ರಾಘವೇಂದ್ರ ಹಿಟ್ನಾಳ ಇದೀಗ ಕರ್ನಾಟಕ ಹಾಲು ಒಕ್ಕೂಟದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ ಸಹೋದರ ಡಿ.ಕೆ. ಸುರೇಶ ಕೆಎಂಎಫ್ ಅಧ್ಯಕ್ಷ ಗಾದಿಗೆ ಏರಲು ಪ್ರಯತ್ನಿಸುತ್ತಿರುವಾಗಲೇ ಹಿಟ್ನಾಳ ರಾಬಕೊವಿ ಅಧ್ಯಕ್ಷರಾಗುವ ಮೂಲಕ ಕೆಎಂಎಫ್ ಗದ್ದುಗೆ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಭಾಗವಾಗಿಯೇ ಕೆಎಂಎಫ್ ನಾಮನಿರ್ದೇಶಕ ಹುದ್ದಗಳಿಗೂ ನೇಮಕ ನಡೆಯುತ್ತಿದೆ ಎಂದೇ ಹೇಳಲಾಗುತ್ತದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶಕರು ಸಹ ಹಾಲು ಒಕ್ಕೂಟದ ಅಧ್ಯಕ್ಷರಾಗಬಹುದು ಎನ್ನುವ ತಿದ್ದುಪಡಿಯೇ ಈಗ ಶಾಸಕ ರಾಘವೇಂದ್ರ ಹಿಟ್ನಾಳ್‌ಗೆ ವರವಾಗಿದೆ. ಸಿಎಂ ಸಿದ್ದರಾಮಯ್ಯ ಅಭಯದೊಂದಿಗೆ ಹಿಂಬಾಗಿಲಿನಿಂದ ರಾಬಕೊವಿ ಹಾಲು ಒಕ್ಕೂಟ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಗುರಿ ಈಗ ಕೆಎಂಎಫ್ ಎಂದು ಆಪ್ತರೆದರು ಹೇಳಿಕೊಂಡಿದ್ದಾರೆ ಶಾಸಕ ಹಿಟ್ನಾಳ.ಸೋಲಿಲ್ಲದ ಸರದಾರ:

ರಾಘವೇಂದ್ರ ಹಿಟ್ನಾಳ್‌ ರಾಜಕೀಯ ಪ್ರವೇಶದಾಗಿನಿಂದಲೂ ಈ ವರೆಗೆ ಸೋಲು ಕಂಡಿಲ್ಲ. ಜಿಲ್ಲಾ ಪಂಚಾಯಿತಿಯಿಂದ ಹಿಡಿದು, ಮೂರು ಬಾರಿ ಶಾಸಕರಾಗಿರುವ ಹಿಟ್ನಾಳ ರಾಜಕೀಯದಲ್ಲಿ ತಿರುಗಿ ಹಿಂದೆ ನೋಡಿಲ್ಲ. ಹಿಟ್ನಾಳ ನಡೆದಿದ್ದೆ ದಾರಿ ಎನ್ನುವುದಕ್ಕೆ ಹಾಲು ಒಕ್ಕೂಟದ ಅಧ್ಯಕ್ಷ ಪಟ್ಟ ಧಕ್ಕಿದ್ದೆ ಸಾಕ್ಷಿಯಾಗಿದೆ. 2005ರಲ್ಲಿ ಅಳವಂಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಹಿಟ್ನಾಳ್‌, ಅದೇ ಅವಧಿಯಲ್ಲಿ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಜಿಪಂ ಅಧ್ಯಕ್ಷರಾದರು. 2011ರಿಂದ 2013 ಅವಧಿಯಲ್ಲಿಯೂ ಜಿಪಂ ಸದಸ್ಯರಾಗಿ ಪುನರಾಯ್ಕೆಯಾಗಿ ಅಧ್ಯಕ್ಷರಾದರು. ಜಿಪಂ ಅಧ್ಯಕ್ಷರಾಗಿದ್ದ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 2013ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಬಳಿಕ 2018, 2023ರಲ್ಲಿ ಆಯ್ಕೆಯಾಗಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದರು. ಇದೀಗ ಪ್ರಥಮ ಪ್ರಯತ್ನದಲ್ಲಿಯೇ ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಬಳ್ಳಾರಿ ಜಿಲ್ಲೆಗೆ ಕಾಲಿಟ್ಟಿದ್ದಾರೆ.ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರ ಆಶೀರ್ವಾದ ಹಾಗೂ ನಿರ್ದೇಶಕರ ಬೆಂಬಲದಿಂದ ರಾಬಕೊವಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷನಾಗಿದ್ದೇನೆ. ಕೆಎಂಎಫ್ ಕುರಿತು ಈಗಲೇ ಏನು ಹೇಳುವುದಿಲ್ಲ. ಮೊದಲು ರಾಬಕೊವಿಯಲ್ಲಿ ಡೆಲಿಗೆಟ್ಸ್ ಆಯ್ಕೆ ಪ್ರಕ್ರಿಯೇ ನಡೆಯಬೇಕಾಗಿದೆ ಎಂದು ರಾಘವೇಂದ್ರ ಹಿಟ್ನಾಳ ಹೇಳಿದರು.

PREV

Recommended Stories

ಪ್ರೇಮದ ಇನ್ನೊಂದು ಹೆಸರೇ ಅಮೃತಾ ಪ್ರೀತಮ್
ಹೋಬೋ ಸೆಕ್ಷುಯಾಲಿಟಿ : ಒಂದು ಹಗುರ ಸಂಬಂಧದ ಕಥೆ!