ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಬರ ಪರಿಹಾರದಡಿಯಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ೪೯೨ ಕೊಳವೆ ಬಾವಿಗಳಿಗೆ ಅನುಮೋದನೆ ನೀಡಲಾಗಿತ್ತು. ಅದರಲ್ಲಿ ಈವರೆಗೆ ೩೦೫ ಪೂರ್ಣಗೊಂಡಿದ್ದು, ೧೮೭ ಬಾಕಿ ಇವೆ. ಎಲ್ಲೆಡೆ ಇತ್ತೀಚೆಗೆ ಮಳೆಯಾಗುತ್ತಿದ್ದು, ಬೋರ್ ವೆಲ್ ಕೊರೆಯಿಸುವುದು ಸೇರಿದಂತೆ ಯಾವುದೇ ಕೆಲಸ ಮಾಡಬಾರದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ನಿರ್ವಹಣೆ ಮತ್ತು ಮುಂಗಾರು-ಪೂರ್ವ ಮುಂಗಾರಿನ ಸಿದ್ಧತೆ ಸಂಬಂಧ ಕೈಗೊಂಡ ಕ್ರಮದ ಬಗ್ಗೆ ಸಭೆಯಲ್ಲಿ ಮಾತನಾಡಿದರು.ಬೋರ್‌ವೆಲ್ ದುರಸ್ತಿಗೆ ಹಣ
ಜಿಲ್ಲೆಯ ಒಟ್ಟು ೫೦,೩೫ ಅರ್ಹ ರೈತರುಗಳಿಗೆ ಹತ್ತು ಕಂತುಗಳಲ್ಲಿ ರೂ ೨೩.೯೩ ಕೋಟಿ ಬೆಳೆ ಪರಿಹಾರ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ವಿತರಿಸಲಾಗಿದೆ. ಮುಂಗಾರು ಋತುವಿನಲ್ಲಿ ಜಿಲ್ಲೆಯಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದ ಮೇರೆಗೆ ಪಹಣಿ ಜೋಡಣೆಯಾಗಿರುವ ರೈತರುಗಳಿಗೆ ನೇರ ಹಣ ಸಂದಾಯದ ಮೂಲಕ ಮಾರ್ಗಸೂಚಿ ಪ್ರಕಾರ ಬೆಳೆ ಹಾನಿ ಪರಿಹಾರವನ್ನು ವಿತರಿಸಲಾಗಿದೆ ಎಂದರು.
ಮೇವಿನ ಕೊರತೆ ಇಲ್ಲಆಧಾರ್ ಕಾರ್ಡ್ ಮಿಸ್‌ಮ್ಯಾಚ್, ಆಧಾರ್ ಕಾರ್ಡ್ ಗೆ ಮ್ಯಾಪ್ ಆಗದೇ ಇರುವ, ನಿಷ್ಕ್ರಿಯವಾಗಿರುವ, ಅಮಾನ್ಯ ರುಜುವಾತು ಖಾತೆ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದ ೧೪೩೮ ಜನರಿಗೆ ಬರ ಪರಿಹಾರವನ್ನು ವಿತರಿಸಿಲ್ಲ. ಜಿಲ್ಲೆಯಲ್ಲಿ ಈವರೆಗೆ ೧೧೩೫೪೫ ಟನ್ ಮೇವು ಲಭ್ಯವಿದೆ. ಜಿಲ್ಲೆಗೆ ೧೩೨೮೦ ಮಿನಿ ಮೇವಿನ ಕಿಟ್ ಗಳನ್ನು ಖರೀದಿಸಿ, ೬೫೦೦ ಅರ್ಹ ರೈತರಿಗೆ ವಿತರಿಸಲಾಗಿದೆ. ಇನ್ನೂ ೨೦,೦೦೦ ಮಿನಿ ಮೇವಿನ ಕಿಟ್ ಗಳ ಖರೀದಿಗೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು.
ಕೋಟ್......
--ಅಕ್ರಂ ಪಾಷ, ಜಿಲ್ಲಾಧಿಕಾರಿ