ಮಳೆ ನೀರು ಸಂಗ್ರಹದಿಂದ ಅಂತರ್ಜಲಮಟ್ಟ ಹೆಚ್ಚಲು ಸಾಧ್ಯ: ಹನುಮಂತಪ್ಪ ಹಣಗಿ

KannadaprabhaNewsNetwork |  
Published : Oct 28, 2024, 01:13 AM IST
೨೬ವೈಎಲ್‌ಬಿ೧:ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ಶನಿವಾರ ತಾಲೂಕಾ ಮೀನುಗಾರರ ಸಹಕಾರಿ ಸಂಘದ ಪದಾಧಿಕಾರಿಗಳು ಆಯೋಜಿಸಿದ್ದ ಕೆರೆಗೆ ಸಂಘದ ಅಧ್ಯಕ್ಷ ಹನುಮಂತಪ್ಪ ಹಣಗಿ ಬಾಗೀನ  ಅರ್ಪಿಸಿದರು. | Kannada Prabha

ಸಾರಾಂಶ

ಮಳೆಯ ನೀರನ್ನು ವ್ಯರ್ಥವಾಗಿ ಹರಿದುಬಿಡದೆ ಪ್ರತಿಯೊಬ್ಬ ರೈತರು ತಮ್ಮ ಜಮೀನಿಗಳಲ್ಲಿ ಸಂಗ್ರಹ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಅಂತರ್ಜಲಮಟ್ಟ ಹೆಚ್ಚಲು ಸಾಧ್ಯ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಳೆಯ ನೀರನ್ನು ವ್ಯರ್ಥವಾಗಿ ಹರಿದುಬಿಡದೆ ಪ್ರತಿಯೊಬ್ಬ ರೈತರು ತಮ್ಮ ಜಮೀನಿಗಳಲ್ಲಿ ಸಂಗ್ರಹ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಅಂತರ್ಜಲಮಟ್ಟ ಹೆಚ್ಚಲು ಸಾಧ್ಯ ಎಂದು ತಾಲೂಕಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಹನುಮಂತಪ್ಪ ಹಣಗಿ ಹೇಳಿದರು.

ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ಶನಿವಾರ ತಾಲೂಕಾ ಮೀನುಗಾರರ ಸಹಕಾರಿ ಸಂಘದ ಪದಾಧಿಕಾರಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆರೆಗೆ ಬಾಗಿನ ಸಮರ್ಪಣೆ ಮಾಡಿ ಮಾತನಾಡಿದ ಅವರು, ಹಿಂಗಾರಿನ ಮಳೆ ಉತ್ತಮವಾಗಿ ಆಗಿರುವುದರಿಂದ ಈ ಸಾರಿ ಮಲಕಸಮುದ್ರ ಕೆರೆ ತುಂಬಿಕೊಂಡು ರೈತರಲ್ಲಿ ಹರ್ಷ ಮೂಡಿಸಿದೆ ಎಂದರು.

ಎಲ್ಲ ಸಂಪತ್ತಿಗಿಂತಲೂ ಜಲ ಸಂಪತ್ತು ಅಮೂಲ್ಯವಾದದ್ದು, ಕೆರೆಗೆ ಕಲುಷಿತ ನೀರು ಸೇರದಂತೆ ಗ್ರಾಮಸ್ಥರು ಹೆಚ್ಚಿನ ಜಾಗೃತಿ ವಹಿಸುವತ್ತ ಗಮನಹರಿಸಬೇಕು. ಈ ಸಾರಿ ಕೃಷ್ಣ ನದಿಯಿಂದ ಕೆರೆಗಳಿಗೆ ನೀರು ಬಿಟ್ಟಿರುವುದರಿಂದ ಎರಡು ನೀರು ಸೇರಿಕೊಂಡು ಕೆರೆ ಸಂಪೂರ್ಣವಾಗಿ ತುಂಬಿಕೊಂಡಿದೆ. ಇದರಿಂದ ಮೀನು ಸಾಕಾಣಿಕೆ ಮಾಡಲು ಹೆಚ್ಚು ಅನುಕೂಲಕರವಾಗಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮೀನಿನ ಮರಿಗಳನ್ನು ಸಹ ಕೆರೆಯಲ್ಲಿ ಬಿಡಲಾಗಿದೆ ಎಂದು ಹೇಳಿದರು.

ಮೀನುಗಾರರ ಸಂಘದ ಸದಸ್ಯರಾದ ಅಮರಪ್ಪ ಕುರುಬರ, ಫಕೀರಗೌಡ ಶಿರಗುಂಪಿ, ಮಳೆಯಪ್ಪ ಲಿಂಗನಬಂಡಿ, ಗುಂಡಪ್ಪ ಬಳೂಟಗಿ, ಷಣ್ಮಖಪ್ಪ ಲಿಂಗನಬಂಡಿ, ಹನುಮಂತ ಬಳೂಟಗಿ, ಶರಣಪ್ಪ ಮಾಟರಂಗಿ, ಈರಪ್ಪ ದಸ್ತನವರ್, ಫಕೀರಪ್ಪ ಮೇಟಿ, ದೇವಪ್ಪ ಇಳಗೇರಿ, ಶಿವಪ್ಪ ಗಡಾದ, ರುದ್ರೇಶ ಇಳಗೇರ್, ಕಾರ್ಯದರ್ಶಿ ರಾಜಪ್ಪ ಹಿರೇಮನಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ