ಕನ್ನಡಪ್ರಭ ವಾರ್ತೆ ವಿಜಯಪುರ
ಈ ವೇಳೆ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ವಿವಿಧ ಬೇಡಿಕೆಗೆ ಈಡೇರಿಕೆಗಾಗಿ ಆಗ್ರಹಿಸಿ ಕಳೆದ 7 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸ್ಪಂದಿಸಿದ್ದಾರೆ. ನಮ್ಮ ಮುಖ್ಯ ಬೇಡಿಕೆಯಾದ 1200 ಚದರ ಅಡಿ ನಿವೇಶನ ಹಾಗೂ ವಸತಿ ಗೃಹಗಳಿಗೆ ವಿದ್ಯುತ್ ಸಂಪರ್ಕ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಜೊತೆಗೆ ನಗರದ ಹೆಸ್ಕಾಂ ಆವರಣದಿಂದ ಸಿಂದಗಿ ರಸ್ತೆಗೆ ಸ್ಥಳಾಂತರಿಸಿರುವ ಗ್ರಾಮೀಣ ಉಪವಿಭಾಗವನ್ನು ಪುನಃ ಮೊದಲಿದ್ದ ಜಾಗದಲ್ಲಿಯೇ ಸ್ಥಳಾಂತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿರುವುದರಿಂದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದರು.ಕಳೆದ ಒಂದು ವರ್ಷದಿಂದ ಅಧಿಕಾರಿಗಳು ಸಾರ್ವಜನಿಕರಿಗೆ ವಿದ್ಯುತ್ ಸಮಸ್ಯೆವುಂಟಾಗಿ ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದರೂ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದೇ ಜನವಿರೋಧಿ ನೀತಿಯನ್ನು ಅನುಸರಿಸಿದ್ದಾರೆ. ಸಾರ್ವಜನಿಕರು ಇವರ ಕುತಂತ್ರ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಮುಂದಿನ ದಿನದಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.ಹೆಸ್ಕಾಂನ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ನಾಗರಾಜ ಬೆಳಿಕೇರಿ, ಹುಬ್ಬಳ್ಳಿ ಐಟಿ ವಿಭಾಗದ ಅಧೀಕ್ಷಕ ಅಭಿಯಂತರ ರುದ್ರಪ್ಪ.ಎಚ್ ಮಾತನಾಡಿ, ರೈತ ಭಾರತ ಪಕ್ಷದಿಂದ ಹಮ್ಮಿಕೊಂಡಿರುವ ಧರಣಿಯು ನ್ಯಾಯಯುತವಾಗಿದೆ. ನಮ್ಮ ಅಧಿಕಾರಿಗಳ ಹಂತದಲ್ಲಿ ಬಗೆಹರಿಯುವ ಎಲ್ಲ ಸಮಸ್ಯೆಗಳನ್ನು ಇತ್ಯರ್ಥ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಜೊತೆಗೆ ಸರ್ಕಾರದ ಹಂತದಲ್ಲಿ ಚರ್ಚೆಯಾಗಬೇಕಾದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿ ಸ್ಥಳದಲ್ಲಿದ್ದ ವಿಜಯಪುರ ಹೆಸ್ಕಾಂ ಮುಖ್ಯ ಅಧೀಕ್ಷಕ ಅಭಿಯಂತರ ಸಿದ್ಧಪ್ಪ ಬಿಂಜಿಗೇರಿ, ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಪಾಟೀಲ, ಇತರೆ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಇತರೆ ಶಾಖಾಧಿಕಾರಿಗಳಿಗೆ ಸಾರ್ವಜನಿಕರಿಗೆ ಬೇಡಿಕೆಗೆ ಸ್ಪಂದಿಸಿ ಎಲ್ಲ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಇತ್ಯರ್ಥ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.ರೈತ ಭಾರತ ಪಕ್ಷದ ಜಿಲ್ಲಾಧ್ಯಕ್ಷ ವಿನೋದ ಖೇಡ, ಕೆ.ಎಂ.ಹುಂಡೇಕಾರ, ಚಾಂದಸಾಬ್ ಗೊಳಸಂಗಿ, ಸುಂದರ ಚವ್ಹಾಣ, ಲಾಯಪ್ಪ ಇಂಗಳೆ, ಅನಿಲ ಇಕ್ಕಡೆ, ವಿಠ್ಠಲ ಕರಿಗಾರ, ಎಂ.ಎಚ್.ಬಿದರಕುಂದಿ, ಹರೂಮಶೇಖ, ಅಂಬಣ್ಣ ಗುನ್ನಾಪೂರ, ಅಶೋಕ ವಾಲಿಕಾರ, ಗಣೇಶ ಡೋಣೂರ, ಶರಣು ಕಿರಾಣಗಿ, ಅಶೋಕ ಚೋಳಕೆ, ಪರಶುರಾಮ ಗಾಯಕವಾಡ, ಮಲ್ಲಿಕಾರ್ಜುನ ಲಂಗೋಟಿ, ಮಲ್ಲಿಕಾರ್ಜುನ ಉಮರಾಣಿ, ರಾಜು ಕುಮಟಗಿ, ಅಶೋಕ ಚೋಳಕೆ, ಅನಿಲ ಪವಾರ, ರವೀಂದ್ರ ಜಾಧವ, ಎಸ್.ಎಸ್.ಉಪ್ಪಲದಿನ್ನಿ, ಎಸ್.ಎಸ್.ಮುಜಾವರ, ಎಸ್.ಎಸ್.ಮೆಂಡೆಗಾರ, ದೀಪಕ ರಾಠೋಡ, ಎಸ್.ಎಸ್.ಸಾಲೋಟಗಿ, ಎ.ಎಚ್.ಪಟೇಲ, ಐ.ಎಂ.ಸುತಾರ, ರಫೀಕ್ ಬಾಗವಾನ, ಇಸಾಕಅಹ್ಮದ್ ಮೇಟಿ, ಎಂ.ಐ.ಪಟೇಲ, ಎನ್.ಎಸ್.ಅಪಬರ, ಬಿ.ಜಿ.ಶಿಂಧೆ, ಎಸ್.ಬಿ.ಶಿಂಧೆ, ಎಂ.ಹುಸೇನ್, ಸಿದ್ದಪ್ಪ ಬಿಸನಾಳ, ಜಗದೇವ ಸೂರ್ಯವಂಶಿ, ಸುರೇಶ ನಿನ್ನೆ ಸೇರಿದಂತೆ ಹಲವರು ಇದ್ದರು.ನಮ್ಮ ರೈತ ಭಾರತ ಪಕ್ಷದಿಂದ ಸಾರ್ವಜನಿಕರ ಬೇಡಿಕೆಯನ್ನಿಟ್ಟುಕೊಂಡು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದ್ದರಿಂದ ಅಧಿಕಾರಿಗಳು ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಇದು ಸಾರ್ವಜನಿಕರು ಹಾಗೂ ನಮ್ಮ ರೈತ ಭಾರತ ಪಕ್ಷದ ಹೋರಾಟಕ್ಕೆ ಸಂದ ಗೆಲುವಾಗಿದೆ.
-ಮಲ್ಲಿಕಾರ್ಜುನ ಕೆಂಗನಾಳ, ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.