ರಾಜಸ್ಥಾನ ಮತ್ತು ಗುಜರಾತ್ ಸಮಾಜದವರು ನವಲಿ ರಸ್ತೆಯಲ್ಲಿನ ಎಲ್‌ವಿಟಿ ತಪೋವನದಲ್ಲಿ ಸೇರಿ ಅಲ್ಲಿ ತಮ್ಮ ತಾಯಿ ನೆಲದ ಸಂಸ್ಕೃತಿ ತಬ್ಬಿ ಹಿಡಿಯುವ ಕಾರ್ಯಕ್ರಮ ಆಯೋಜಿಸಿ ರಂಜಿಸಿದ್ದರು
ಕಾರಟಗಿ: ಹೋಳಿ ನಿಮಿತ್ತ ಪಟ್ಟಣದಲ್ಲಿ ರಾಜಸ್ಥಾನ ಮತ್ತು ಗುಜರಾತ್ ಮೂಲಕ ವ್ಯಾಪಾರಿಗಳು ಸಡಗರದಿಂದ ರಂಗಿನಾಟ ಆಡಿದರು.
ಪಟ್ಟಣದಲ್ಲಿ ರಾಜಸ್ಥಾನ ಮತ್ತ ಗುಜರಾಜ ಮೂಲದ ವ್ಯಾಪಾರಿಗಳೆಲ್ಲ ತಮ್ಮ ಅಂಗಡಿ ಮುಂಗಟ್ಟು ಮುಚ್ಚಿ ಬಣ್ಣ ಎರಚಿಕೊಂಡು ಹೋಳಿ ಆಚರಿಸಿದರು. ಪ್ರತಿ ವರ್ಷ ಹೋಳಿ ದಿನದಂದು ಕೇವಲ ಈ ವ್ಯಾಪಾರಿಗಳು ಮಾತ್ರ ಬಣ್ಣ ಎರಚು ಸಂಭ್ರಮಿಸುತ್ತಾರೆ.
ಬೆಳಗ್ಗೆ ರಾಜಸ್ಥಾನ ಮತ್ತು ಗುಜರಾತ್ ಮೂಲಕ ಕೆಲ ಪ್ರಮುಖರು ಒಂದಡೇ ಸೇರಿ ಪರಸ್ಪರ ಬಣ್ಣ ಎರಚಿಕೊಂಡರು.ನಂತರ ಎಲ್ಲರೂ ತಮ್ಮ ಆಪ್ತರ ಮನೆ,ಗುಜರಾತ್ ಮತ್ತು ರಾಜಸ್ಥಾನ ವ್ಯಾಪಾರಿಗಳ ಮನೆಗೆ ಹೋಗಿ ಅಲ್ಲಿ ಎಲ್ಲರಿಗೂ ಬಣ್ಣ ಹಚ್ಚಿ ಸಂಭ್ರಮಿಸಿದರು.
ನಂತರ ರಾಜಸ್ಥಾನ ಮತ್ತು ಗುಜರಾತ್ ಸಮಾಜದವರು ನವಲಿ ರಸ್ತೆಯಲ್ಲಿನ ಎಲ್‌ವಿಟಿ ತಪೋವನದಲ್ಲಿ ಸೇರಿ ಅಲ್ಲಿ ತಮ್ಮ ತಾಯಿ ನೆಲದ ಸಂಸ್ಕೃತಿ ತಬ್ಬಿ ಹಿಡಿಯುವ ಕಾರ್ಯಕ್ರಮ ಆಯೋಜಿಸಿ ರಂಜಿಸಿದ್ದರು. ಮಹಿಳೆಯರು ಮತ್ತು ಪುರುಷರು ಸೇರಿ ಪರಸ್ಪರ ಬಣ್ಣ ಎರಚುವ ಕಾರ್ಯಕ್ರಮ ನಡೆಸಿದರು.
ಪಟ್ಟಣದಲ್ಲಿ ಯುಗಾದಿ ಹಬ್ಬದ ಮರುದಿನ ಬಣ್ಣ ಎರಚುವ ಹಬ್ಬ ಕನ್ನಡಿಗರು ಆಚರಿಸಿಕೊಂಡ ಬಂದ ಹಿನ್ನೆಲೆಗೆ ಹೋಳಿ ಹಬ್ಬದಂದು ಕೇವಲ ರಾಜಸ್ಥಾನ ಮತ್ತು ಗುಜರಾತ್ ಮೂಲದವರು ಅಚರಿಸುತ್ತಾರೆ.
ಈ ಸಂದರ್ಭದಲ್ಲಿ ಪ್ರವೀಣ ರಾಜಪುರೋಹಿತ್, ಸೆಲ್ವರಾಂ ಪಟೇಲ್, ಶ್ರವಣಕುಮಾರ ನಗರ್, ಕಿಶೋರ್ ಭಂಡಾರಿ, ಚೇಲ್‌ಸಿಂಗ್ ರಾಜಪುರೋಹಿತ್, ಲಕ್ಷ್ಮಣ ಪಟೇಲ್, ವಿಠ್ಠಲ್ ಪಟೇಲ್, ಪ್ರವೀಣ ದೇವಸಿ, ಲಕ್ಕೀರಾಮ್ ಪಟೇಲ್, ಮೇಹುಲ್, ರಾಜೇಶ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.