ನಾಳೆ ಬ್ಯಾಡರಹಳ್ಳಿಯಲ್ಲಿ ರಾಮ ಮಂದಿರ ಲೋಕಾರ್ಪಣೆ

KannadaprabhaNewsNetwork |  
Published : Jun 04, 2025, 12:31 AM IST
3ಕೆಎಂಎನ್ ಡಿ19  | Kannada Prabha

ಸಾರಾಂಶ

ಬ್ಯಾಡರಹಳ್ಳಿಯಲ್ಲಿ ಜೂ.5ರಂದು ನೂತನವಾಗಿ ನಿರ್ಮಿಸಿರುವ ರಾಮಮಂದಿರ ದೇವಸ್ಥಾನದ ರಾಮದೇವರ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ಮಂಗಳವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ಮಹಾಸಂಕಲ್ಪ ಇತರೆ ಪೂಜಾ ಕಾರ್ಯ ನಡೆದ ನಂತರ ನೆರದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ಬ್ಯಾಡರಹಳ್ಳಿಯಲ್ಲಿ ಜೂ.5ರಂದು ನೂತನವಾಗಿ ನಿರ್ಮಿಸಿರುವ ರಾಮಮಂದಿರ ದೇವಸ್ಥಾನದ ರಾಮದೇವರ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.

ಮಂಗಳವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ಮಹಾಸಂಕಲ್ಪ, ರಕ್ಷಾಬಂಧನ, ಪಂಚಗವ್ಯ, ಅಂಕುರಾರ್ಪಣ ವಾಸ್ತು ಪೂಜಾ, ಹವನ, ಬಲಿ, ರಕ್ಷಣಾ ಹೋಮ, ದಿಕ್ ಬಲಿ, ಋತ್ವಿಕ್ ವರಣ ಯಾಗ ಶಾಲಾ ಪ್ರವೇಶ, ಪ್ರಸಾದ ಶುದ್ದಿ, ಪರ್ಯಗ್ನಿ ಕರಣ ಕಾರ್ಯಕ್ರಮ ನಡೆದ ನಂತರ ನೆರದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಜೂ.4ರ ಬೆಳಗ್ಗೆ ಗಂಗಾ ಪೂಜೆ, ನೂತನ ಬಿಂಬಗಳಿಗೆ ನೇತ್ರೋನ್ಮಿಲನ, ಬಿಂಬ ಶುದ್ಧಿ, ಜಲಾಧಿವಾಸ ಧಾನ್ಯದಿವಾಸ, ಚತುರ್ ದ್ವಾರಾರ್ಚನೆ, ವೇದ ಪಾರಾಯಣ, ಪೂರ್ವಕ ವೇದಿಕಾರ್ಚನೆ ಕಳಶಾರಾಧನೆ ಅಗ್ನಿ ಪ್ರತಿಷ್ಠೆ, ಪ್ರತಿಷ್ಠ ಹೋಮ, ಆರಂಭ, ಗಣಪತಿ, ನವಗ್ರಹ ಹವನ ನಡೆಸಿ ಸಂಜೆ ದುರ್ಗಾ ದೀಪ ನಮಸ್ಕಾರ ಆಧಿವಾಸ ಹೋಮ, ಅಸ್ತ್ರ ಹೋಮ, ಪ್ರತಿಷ್ಠಾಂಗ ಶೋಡಷ ರತ್ನ ನ್ಯಾಸ, ಮಂತ್ರನ್ಯಾಸ, ಗರ್ಭನ್ಯಾಸ, ಹೋಮ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಜೂ.5ರ ಬೆಳಗ್ಗೆ ಯಾಗಶಾಲಾರ್ಚನೆ, ಪ್ರತಿಷ್ಠ ದೇವತ ಹೋಮ, ಭೂತ ಶುದ್ಧಿ ಪೂರ್ವಕವಾಗಿ ಗರ್ಭಗೃಹದಲ್ಲಿ ಬಿಂಬಗಳಿಗೆ ಪ್ರಾಣ ಪ್ರತಿಷ್ಠೆ, ನಾಡಿ ಸಂಧಾನ, ಕಲಾಹೋಮ ತತ್ವ ಹೋಮ, ತತ್ ನ್ಯಾಸಗಳು ಪ್ರಾಯಶ್ಚಿತ ಹೋಮ, ನಂತರ ಪೂರ್ಣಾಹುತಿ ಯಾಗ ಶಾಲಾಸ್ಥಿತ ಕಳಸಗಳ ಉತ್ತರ ಪೂಜೆ, ಕುಂಭಾಭಿಷೇಕ ಅಭಿಷೇಕಗಳು ಮತ್ತು ದೇವರಿಗೆ ಅಲಂಕಾರ, ನೈವೇದ್ಯ, ಮಹಾ ಮಂಗಳಾರತಿ, ಗೋಪೂಜೆ, ಸಭಾ ವಂದನೆ, ಮುಗಿದ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಲಿದೆ.

ನಂತರ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕುಂಭಾಭಿಷೇಕವನ್ನು ತುಮಕೂರು ಸಿದ್ದಗಂಗಾ ಕ್ಷೇತ್ರದ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗ ಮಹಾ ಸ್ವಾಮೀಜಿ ಮತ್ತು ಕನಕಪುರ ಮಠದ ಪರಮಪೂಜ್ಯ ಚನ್ನಬಸವ ಮಹಾಸ್ವಾಮಿಗಳು ಸಮ್ಮುಖದಲ್ಲಿ ನೆರವೇರಿಸಲಾಗುತ್ತದೆ. ಅತಿಥಿಗಳಾಗಿ ಗವಿಮಠದ ಷಡಕ್ಷರ ಮಹಾ ಸ್ವಾಮೀಜಿ, ಹಂಗ್ರಾಪುರದ ಬಸವಲಿಂಗ ದೇಶಿಕೇಂದ್ರಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಕೆ.ಶ್ರೀಹರಿಯವರ ಮಾರ್ಗದರ್ಶನದಲ್ಲಿ ಆಗಮ ಪ್ರವೀಣ ತೇಜೋನಿಧಿ ಎಸ್.ದೀಕ್ಷಿತ್ ಮತ್ತು ಶ್ರೀ ಪ್ರಹ್ಲಾದ್ ರಾವ್ ರವರ ಆಚಾರ್ಯತ್ವವದಲ್ಲಿ ಎಲ್ಲಾ ಪೂಜಾ ಕಾರ್ಯಗಳು ನೆರವೇರಲಿದೆ ಎಂದು ಶ್ರೀರಾಮ ಸೇವಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೋಲಿಯೋ ಹಾಕಿಸಿ