ಪೈಪೋಟಿಗಿಳಿದು ರಾಮನಗರ ರೈತರಿಂದ ರಾಗಿ ಮಾರಾಟ

KannadaprabhaNewsNetwork |  
Published : Jun 04, 2025, 12:30 AM IST

ಸಾರಾಂಶ

ಈ ಮೊದಲು ಮಾರ್ಚ್ 31ರವರೆಗೆ ನೀಡಿದ್ದ ಗಡು‍‍ವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈಗ ನೋಂದಣಿ ಮಾಡಿಕೊಂಡವರ ಪೈಕಿ ಶೇಕಡ 72ರಷ್ಟು ರೈತರು ರಾಗಿ ಪೂರೈಕೆ ಮಾಡಿದ್ದಾರೆ.

ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರಕಳೆದ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ತೀರಾ ನಿರಾಸಕ್ತಿ ತೋರಿದ್ದ ರೈತರು ಈ ಬಾರಿ ಉತ್ತಮ ಇಳುವರಿ ಬಂದಿದ್ದರಿಂದ ಪೈಪೋಟಿಗಿಳಿದು ಮಾರಾಟ ಮಾಡಿದ್ದಾರೆ.ಈ ಮೊದಲು ಮಾರ್ಚ್ 31ರವರೆಗೆ ನೀಡಿದ್ದ ಗಡು‍‍ವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈಗ ನೋಂದಣಿ ಮಾಡಿಕೊಂಡವರ ಪೈಕಿ ಶೇಕಡ 72ರಷ್ಟು ರೈತರು ರಾಗಿ ಪೂರೈಕೆ ಮಾಡಿದ್ದಾರೆ. ಆಹಾರ ಇಲಾಖೆ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತಕ್ಕೆ ಸರ್ಕಾರ ಇಂತಿಷ್ಟು ಕ್ವಿಂಟಲ್‌ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡಲು ಗುರಿ ನೀಡಿತ್ತು. ಅದರಂತೆ 18,082 ರೈತರು 2,74,804 ಕ್ವಿಂಟಾಲ್ ರಾಗಿ ಮಾರಾಟ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು.

ಈವರೆಗೆ 12,773 ರೈತರು 1,94,804 ಕ್ವಿಂಟಾಲ್ ರಾಗಿಯನ್ನು ಸರಬರಾಜು ಮಾಡಿದ್ದಾರೆ. ಇದರ ಮೊತ್ತ 83 ಕೋಟಿ 57 ಲಕ್ಷ ರುಪಾಯಿ ಆಗಿದ್ದು, ಇದರಲ್ಲಿ ಶೇಕಡ 90ರಷ್ಟು ರಾಗಿ ಹಣವನ್ನು ರೈತರ ಖಾತೆಗೆ ಪಾವತಿ ಮಾಡಲಾಗಿದೆ. ಉಳಿದಂತೆ ನೋಂದಣಿ ಮಾಡಿಸಿಕೊಂಡಿರುವ ರೈತರಿಗೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ದಿನಾಂಕ ವಿಸ್ತರಣೆ ಮಾಡಲಾಗಿದೆ.ಕಳೆದ ವರ್ಷ ರೈತರ ಹಿಂದೇಟು:ಕಳೆದ (2023-24ನೇ) ಸಾಲಿನಲ್ಲಿ 12,106 ರೈತರು 2,95,398 ಕ್ವಿಂಟಾಲ್ ರಾಗಿ ಮಾರಾಟ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು. ಆದರೆ, ಈವರೆಗೆ 6,857 ರೈತರು ಮಾತ್ರ 1,42,942 ಕ್ವಿಂಟಾಲ್ ರಾಗಿಯನ್ನು ಸರಬರಾಜು ಮಾಡಿದ್ದಾರೆ. ಉಳಿದಂತೆ ನೋಂದಣಿ ಮಾಡಿಸಿಕೊಂಡಿರುವ ರೈತರು ಖರೀದಿ ಕೇಂದ್ರದತ್ತ ಮುಖ ಮಾಡಿರಲಿಲ್ಲ.ಪ್ರಸಕ್ತ ಸಾಲಿನಲ್ಲಿ ಸುಮಾರು 72,000 ಹೆಕ್ಟೇರ್ ಗುರಿಯಲ್ಲಿ 65,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಇದೆ. ಈ ಬಾರಿ ಉತ್ತಮ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಷ್ಟು ರಾಗಿ ಉತ್ಪಾದನೆ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಲ್ಕನೇ ಮೂರು ಭಾಗದಷ್ಟು ರಾಗಿಯೂ ಖರೀದಿಯಾಗುವ ಸಾಧ್ಯತೆಗಳಿವೆ. ಕ್ವಿಂಟಾಲ್ ರಾಗಿಗೆ 4,290 ರು. ದರ ನಿಗದಿ :ಸರ್ಕಾರ ರಾಗಿಯ ದರವನ್ನು ಪ್ರತಿ ಕ್ವಿಂಟಾಲ್‌ ಗೆ 4290 ರು. ನಿಗದಿ ಮಾಡಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಎಲ್ಲ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ರಾಗಿ ಖರೀದಿಸಲಾಗುತ್ತದೆ. ಈ ದರ ಕಳೆದ ವರ್ಷಕ್ಕಿಂತಲೂ ಹೆಚ್ಚಿದೆ. ಆದರೆ, ಬೆಳೆ ಇಳುವರಿಯೂ ಚೆನ್ನಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಿದ್ದೇವೆ. ಬ್ಯಾನರ್ ಹಾಕಿದ್ದೇವೆ, ಕರಪತ್ರ ಹಂಚಿದ್ದೇವೆ. ಈ ಸಲ ಬೆಂಬಲ ಬೆಲೆಯನ್ನೂ ಹೆಚ್ಚಿಸಲಾಗಿದೆ. ಆದರೂ ನೋಂದಣಿಯೂ ಹೆಚ್ಚಾಗಿದ್ದು, ಜನವರಿಯಿಂದಲೇ ಖರೀದಿ ಪ್ರಕ್ರಿಯೆಯನ್ನೂ ಆರಂಭಿಸಿದ್ದೇವೆ. ಈವರೆಗೆ 12,773 ರೈತರು 1.94 ಲಕ್ಷ ಕ್ವಿಂಟಾಲ್ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಿದ್ದಾರೆ ಎಂದು ಕೆಎಫ್ ಸಿಎಸ್ ಸಿ ಜಿಲ್ಲಾ ವ್ಯವಸ್ಥಾಪಕ ರಮೇಶ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

....ಬಾಕ್ಸ್ ...

ಜೂನ್ 6ರವರೆಗೆ ರಾಗಿ ಮಾರಾಟದ ನೋಂದಣಿ ವಿವರತಾಲೂಕು ನೋಂದಣಿ ರೈತರು ರಾಗಿ ಪ್ರಮಾಣ (ಕ್ವಿ)ರಾಮನಗರ 1,169 16,841.50ಮಾಗಡಿ 10,494 1,57,064.50ಕನಕಪುರ 4,212 67,075,50ಚನ್ನಪಟ್ಟಣ 886 14,217.50

ಹಾರೋಹಳ್ಳಿ 1,321 19,605.50

ಒಟ್ಟು 18,082 2,74,804.00...ಬಾಕ್ಸ್ ....ಜೂನ್ 3ರವರೆಗೆ ರಾಗಿ ಸರಬರಾಜಿನ ವಿವರತಾಲೂಕು ರಾಗಿ ಪೂರೈಸಿದ ರೈತರು ರಾಗಿ ಪ್ರಮಾಣ (ಕ್ವಿ) ರಾಗಿ ಒಟ್ಟು ಮೌಲ್ಯ (ರು.)ರಾಮನಗರ 891 12,187.00 5,22,82,230ಮಾಗಡಿ 7,739 1,15,608.50 49,59,60,465ಕನಕಪುರ 2,379 40,458.00 17,35,64,820ಚನ್ನಪಟ್ಟಣ 648 10,134.00 4,34,77,005ಹಾರೋಹಳ್ಳಿ 1,116 16,437.00 7,05,14,730ಒಟ್ಟು 12,773 1,94,804.50 83,57,99,250

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ