ರಾಮಾಯಣದಿಂದ ಜಗತ್ತಿಗೆ ಆದರ್ಶ ಪುರುಷ ರಾಮನ ಪರಿಚಯ

KannadaprabhaNewsNetwork |  
Published : Oct 08, 2025, 01:00 AM IST
ಪುರಸಭಾ ಕಾರ್ಯಾಲಯ ವತಿಯಿಂದ  ಮಹರ್ಷಿ ವಾಲ್ಮೀಜಿ ಜಯಂತಿ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ವಾಲ್ಮೀಕಿ ರಾಮಾಯಣವನ್ನು ಬರೆದ ಕಾರಣಕ್ಕೆ ಜಗತ್ತಿಗೆ ರಾಮ ಎಂಬ ಆದರ್ಶ ಪುರುಷನ ಪರಿಚಯವಾಗಿದೆ ಎಂದು ಪುರಸಭೆ ಅಧ್ಯಕ್ಷ ವಸಂತ ಕುಮಾರ್ ಹೇಳಿದರು.

ಪುರಸಭೆ ಕಾರ್ಯಾಲಯದಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ವಾಲ್ಮೀಕಿ ರಾಮಾಯಣವನ್ನು ಬರೆದ ಕಾರಣಕ್ಕೆ ಜಗತ್ತಿಗೆ ರಾಮ ಎಂಬ ಆದರ್ಶ ಪುರುಷನ ಪರಿಚಯವಾಗಿದೆ ಎಂದು ಪುರಸಭೆ ಅಧ್ಯಕ್ಷ ವಸಂತ ಕುಮಾರ್ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ರಾಮಾಯಣ ಕಾವ್ಯ ರಚಿಸುವ ಮೂಲಕ ವಾಲ್ಮೀಕಿ ಆದಿ ಕವಿ ಎನಿಸಿಕೊಂಡರು. ರಾಮ, ಸೀತೆ, ಲಕ್ಷ್ಮಣ, ಭರತ ನಂತಹ ಪಾತ್ರ ಗಳು ಇಂದಿಗೂ ನಮ್ಮ ಬದುಕಿಗೆ ಪ್ರೇರಣೆ ಎಂದರು. ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ವಾಲ್ಮೀಕಿ ಮಹರ್ಷಿ ದ್ವಾಪರ ಯುಗದಲ್ಲಿ ಇದ್ದಂತಹ ಜಾತಿ ಅಸಮಾನತೆಯನ್ನು ಶೂದ್ರ ಶಂಭೂಕನ ಪಾತ್ರದ ಮೂಲಕ ತೆರೆದಿಟ್ಟಿದ್ದಾರೆ. ಸೀತೆಯನ್ನು ಆದರ್ಶ ಮಹಿಳೆಯಾಗಿ ಚಿತ್ರಿಸಿದ್ದಾರೆ. ರಾಮನನ್ನು ಯುವರಾಜನನ್ನಾಗಿ ಆಯ್ಕೆ ಮಾಡುವ ದಶರಥ ಮಹಾರಾಜನ ಪ್ರಜಾತಂತ್ರ ವ್ಯವಸ್ಥೆ ಇಂದಿನ ರಾಜಕೀಯ ಪಕ್ಷಗಳಿಗೆ ಆದರ್ಶವಾಗಬೇಕು ಎಂದು ತಿಳಿಸಿದರು. ಜಾತಿ ಅಸಮಾನತೆಯನ್ನು ಧರ್ಮಗ್ರಂಥಗಳು ವಿರೋಧಿಸಿವೆ. ರಾಮಾಯಣ ಕಾವ್ಯ ಇದಕ್ಕೆ ಸಾಕ್ಷಿ. ಮಹರ್ಷಿ ವಾಲ್ಮೀಕಿ ಪ್ರತಿನಿಧಿಸಿದ ಬೇಡ ಸಮುದಾಯದ ಎಲ್. ಜಿ. ಹಾವನೂರು ಕೊಟ್ಟ ಹಿಂದುಳಿದ ವರ್ಗಗಳ ಮೀಸಲಾತಿ ನಿಗದಿ ವರದಿ ಜನರಿಗೆ ನ್ಯಾಯ ಕಲ್ಪಿಸುವ ಮೂಲಕ ಕೇಂದ್ರದಲ್ಲಿ ಮಂಡಲ್ ಕಮೀಷನ್ ವರದಿ ಜಾರಿಗೆ ಕಾರಣವಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಹಲಗಲಿ ಬೇಡರು ನಡೆಸಿದ ಬ್ರಿಟಿಷರ ವಿರುದ್ಧದ ಹೋರಾಟ ಇತಿಹಾಸದಲ್ಲಿ ಶೌರ್ಯದ ಸಂಕೇತವಾಗಿ ದಾಖಲಾಗಿದೆ. ತರೀಕೆರೆ ಪಾಳೇಗಾರರು ಪಟ್ಟಣ ಅಭಿವೃದ್ಧಿಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿದರು.

ಮಾಜಿ ಉಪಾಧ್ಯಕ್ಷ ರಿಹಾನ ಪರ್ವಿನ್, ಪಾರ್ವ ತಮ್ಮ , ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್ ಸೇರಿದಂತೆ ಕಚೇರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

7ಕೆಟಿಆರ್.ಕೆ.3ಃ

ತರೀಕೆರೆಯಲ್ಲಿ ಪುರಸಭೆ ಕಾರ್ಯಾಲಯದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪುರಸಭೆ ಅಧ್ಯಕ್ಷ ವಸಂತಕುಮಾರ್ ಮತ್ತಿತರರು ಭಾಗವಹಿಸಿದ್ದರು. ಮಾಜಿ ಉಪಾಧ್ಯಕ್ಷರಾದ ರಿಹಾನ ಪರ್ವಿನ್, ಪಾರ್ವತಮ್ಮ , ಪುರಸಭೆ ಸದಸ್ಯ ಟಿ.ದಾದಾಪೀರ್, ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ