ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರು ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ. ಜುಲೈ 3ರಂದು ಶಿವಮೊಗ್ಗದಲ್ಲಿ ಶ್ರೀ ರಂಭಾಪುರಿ ನಿವಾಸ ನೂತನ ಕಟ್ಟಡ ಉದ್ಘಾಟನೆ, ೫ರಂದು ಹಾಸನ ಜಿಲ್ಲೆ ಆಲೂರು ತಾಲೂಕಿ ಕಾರ್ಜುವಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜಾ, ಧರ್ಮ ಸಮಾರಂಭ, 6ರಂದು ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಪುರ ಪ್ರವೇಶ, 7ರಂದು ಶಿವಮೊಗ್ಗದಲ್ಲಿ ಇಷ್ಟಲಿಂಗ ಮಹಾಪೂಜೆ, ಶಿವದೀಕ್ಷಾ ಸಮಾರಂಭ, 8ರಂದು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಲಿಂ.ಸದಾನಂದ ಶ್ರೀಗಳ 4ನೇ ವರ್ಷದ ಪುಣ್ಯಾರಾಧನಾ ಸಮಾರಂಭದ ಸಾನ್ನಿಧ್ಯ ವಹಿಸುವರು. ಜು.9 ರಿಂದ 11ರವರೆಗೆ ಹರಿಹರದಲ್ಲಿ ಇಷ್ಟಲಿಂಗ ಮಹಾಪೂಜಾ, ಧರ್ಮ ಜಾಗೃತಿ ಸಮಾರಂಭ, 12ರಂದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಇಷ್ಟಲಿಂಗಪೂಜೆ ನಡೆಸುವರು. 14ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಸಭಾ ಭವನ ಉದ್ಘಾಟನೆ, 17 ರಂದು ಬೀದರ ಜಿಲ್ಲೆ ಮುಧೋಳ(ಬಿ) ಗ್ರಾಮದಲ್ಲಿ ಲಿಂ.ಶಿವಲಿಂಗ ಶಿವಾಚಾರ್ಯರ ಲಿಂಗಾಂಗ ಸಾಮರಸ್ಯದ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು. 21ರಂದು ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಗುರು ಪೌರ್ಣಿಮಾ ಸಮಾರಂಭದಲ್ಲಿ ಪಾಲ್ಗೊಂಡು ಭಕ್ತರಿಗೆ ದರ್ಶನಾಶೀರ್ವಾದ ನೀಡುವರು. 24ರಿಂದ 28ರವರೆಗೆ ಬೆಂಗಳೂರು ಮಹಾನಗರದಲ್ಲಿ ಇಷ್ಟಲಿಂಗ ಮಹಾಪೂಜಾ, 29ರಿಂದ ಆಗಸ್ಟ್ 3ರವರಗೆ ದಾವಣಗೆರೆಯಲ್ಲಿ ಇಷ್ಟಲಿಂಗ ಮಹಾಪೂಜೆ, ಧರ್ಮ ಜಾಗೃತಿ ಸಮಾರಂಭ ನಡೆಸುವರು. ಆಗಸ್ಟ್ 4ರಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಾವೆರೆಕೆರೆ ಶಿಲಾಮಠದಲ್ಲಿ ಲಿಂ.ಸಿದ್ಧಲಿಂಗ ಶ್ರೀಗಳವರ ಪುಣ್ಯ ಸ್ಮರಣೋತ್ಸವದಲ್ಲಿ ಪಾಲ್ಗೊಳ್ಳುವರು. ಆಗಸ್ಟ್ 5ರಿಂದ ಸೆಪ್ಟಂಬರ್ 2ರವರೆಗೆ ಬಾಳೆಹೊನ್ನೂರು ಧರ್ಮ ಪೀಠದಲ್ಲಿ ವಾಸ್ತವ್ಯ ವಿದ್ದು ತಮ್ಮ 33ನೇ ವರ್ಷದ ಶ್ರಾವಣ ಪೂಜಾನುಷ್ಠಾನ ನಡೆಸುವರು ಎಂದು ವಿವರಿಸಿದ್ದಾರೆ.೨೮ಬಿಹೆಚ್‌ಆರ್ ೪: ರಂಭಾಪುರಿ ಶ್ರೀ