ಕೆಳದಿಯ ರಾಮೇಶ್ವರ ದೇಗುಲ ಪಕ್ಕದಲ್ಲಿ ಗುಡ್ಡ ಕುಸಿತ: ಆತಂಕ

KannadaprabhaNewsNetwork |  
Published : Jul 25, 2026, 01:30 AM IST
ಬೃಹತ್ ಧರೆ ಕುಸಿದಿರುವುದು | Kannada Prabha

ಸಾರಾಂಶ

ಸಾಗರ: ವಿಪರೀತ ಮಳೆಯಿಂದ ತಾಲೂಕಿನ ಇತಿಹಾಸ ಪ್ರಸಿದ್ಧ ಕೆಳದಿಯ ಶ್ರೀ ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಗುಡ್ಡ ಕುಸಿತವಾಗಿದೆ. ಗುಡ್ಡದ ಪಕ್ಕದಲ್ಲಿಯೇ ಮಹೇಶ್ ದೇವಾಡಿಗ ಎಂಬುವವರ ಮನೆ ಇದ್ದು ಕುಟುಂಬ ಆತಂಕದಲ್ಲಿದೆ.

ಸಾಗರ: ವಿಪರೀತ ಮಳೆಯಿಂದ ತಾಲೂಕಿನ ಇತಿಹಾಸ ಪ್ರಸಿದ್ಧ ಕೆಳದಿಯ ಶ್ರೀ ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಗುಡ್ಡ ಕುಸಿತವಾಗಿದೆ. ಗುಡ್ಡದ ಪಕ್ಕದಲ್ಲಿಯೇ ಮಹೇಶ್ ದೇವಾಡಿಗ ಎಂಬುವವರ ಮನೆ ಇದ್ದು ಕುಟುಂಬ ಆತಂಕದಲ್ಲಿದೆ.ಕಳೆದ ಮುರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆ ಹಾಗೂ ಗಾಳಿಯಿಂದಾಗಿ ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಇರುವ ಬೃಹತ್ ಧರೆ ಕುಸಿದು ಬಿದ್ದಿದೆ. ಈ ಧರೆಯ ಪಕ್ಕದಲ್ಲಿಯೆ ಮಹೇಶ್ ಮಡಿವಾಳ ಅವರ ಕುಟುಂಬ ವಾಸ ಮಾಡುತ್ತಿದ್ದು ಗುಡ್ಡ ಕುಸಿತ ಉಂಟಾಗಿದ್ದರಿಂದ ಗಾಬರಿಯಾಗಿದ್ದಾರೆ.ಈ ಗುಡ್ಡದ ಮೇಲ್ಭಾಗದಲ್ಲಿ ಕೆಳದಿ ಮಾಸೂರು ಎಫ್-೬ ವಿದ್ಯುತ್ ಮಾರ್ಗ ಹಾದು ಹೋಗಿದೆ. ವಿಪರೀತ ಮಳೆ ಜೊತೆಗೆ ಗಾಳಿ ಇರುವುದರಿಂದ ಗುಡ್ಡದ ಮೇಲಿನ ವಿದ್ಯುತ್ ಕಂಬಗಳು ಮುರಿದು ಬಿದ್ದು ಮಹೇಶ್ ದೇವಾಡಿಗ ಅವರ ಮನೆಯ ಮೇಲೆ ವಿದ್ಯುತ್ ತಂತಿ ಹರಿದು ಬೀಳುವ ಅಪಾಯವಿದೆ.ಮೆಸ್ಕಾಂ ಗಮನಿಸಲಿ:

ವಿಪರೀತ ಮಳೆಗಾಳಿಯಿಂದ ಕೆಳದಿ ರಾಮೇಶ್ವರ ದೇವಸ್ಥಾನದ ಪಕ್ಕದ ಧರೆ ಕುಸಿದಿದ್ದು ಪಕ್ಕದಲ್ಲಿರುವ ಮಹೇಶ್ ಮಡಿವಾಳ ಅವರ ಕುಟುಂಬ ಸಂಕಷ್ಟದಲ್ಲಿದೆ. ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಹರಿದು ಹೋಗಿದ್ದು ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿದೆ. ತಕ್ಷಣ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್ ಕಂಬ ಬೀಳದಂತೆ ಸೂಕ್ತ ವ್ಯವಸ್ಥೆ ಮಾಡಲು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ್ ಈ. ಕೆಳದಿ ಮನವಿ ಮಾಡಿದ್ದಾರೆ.೨೪ಕೆ.ಎಸ್.ಎ.ಜಿ.೧ಮನೆಯ ಪಕ್ಕದಲ್ಲಿರುವ ಬೃಹತ್ ಧರೆ ಕುಸಿದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಎಐ ಪರಿಹಾರ ರೂಪಿಸಿ
ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ