ಕಾರಟಗಿ: ಹಿಂದುಗಳಿಗೆ ಪವಿತ್ರ ಶ್ರಾವಣ ಮಾಸದಂತೆ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಪವಿತ್ರ ಹಬ್ಬ. ರಂಜಾನ್ ಎಲ್ಲ ಜೀವನದಲ್ಲಿ ಹೊಸ ಉತ್ಸಾಹ ನೆಮ್ಮದಿ ತರಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪ್ರೀತಿ,ವಿಶ್ವಾಸ, ಸಹೋದರತೆ ಸಮಾಜಭಿವೃದ್ಧಿಯೇ ಈ ಹಬ್ಬದ ಸಂದೇಶ. ಅಭಿವೃದ್ಧಿಯ ಕರ್ನಾಟಕ, ಬಲಿಷ್ಠ ಭಾರತ ನಮ್ಮ ಉದ್ದೇಶ. ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ರಂಜಾನ್ ಶಾಂತಿ ಸಹನೆ, ಸಹಬಾಳ್ವೆ ಸಾರುವ ಹಬ್ಬವಾಗಿದೆ. ಇಸ್ಲಾಂ ಸಹೋದರರಿಗೆ ಉಪವಾಸ ವೃತ ಆಚರಿಸುವ ರಂಜಾನ್ ಮಹತ್ವದ ಹಬ್ಬವಾಗಿದೆ. ಇದು ಪರಸ್ಪರ ಸೌಹಾರ್ದತೆ ಮತ್ತು ಭಾವೈಕ್ಯತೆಯ ಪ್ರತೀಕವಾಗಿದೆ ಎಂದರು.
ಇದೇ ಆವರಣದಲ್ಲಿ ಮುಸ್ಲಿಂ ಸಮುದಾಯ ಭವನಕ್ಕೆ ಈಗಾಗಲೇ ಕೋಟಿ ಅನುದಾನ ನೀಡಲಾಗಿದೆ.ಕಾಮಗಾರಿ ಕೂಡ ನಡೆದಿದೆ.ಮುಂದಿನ ದಿನಗಳಲ್ಲಿ ಹೆಚ್ಚುವರಿ ಇನ್ನು ಒಂದು ಕೋಟಿ ಭವನಕ್ಕೆ ನೀಡುವುದಾಗಿ ಸಚಿವ ತಂಗಡಗಿ ಪ್ರಕಟಿಸಿದರು.ಸರ್ಕಾರದ ಗಮನ:
ಕ್ರಸ್ಟ್ ಗೇಟ್ ಕಾಮಗಾರಿ ಭರದಿಂದ ಸಾಗಿದ್ದು, ೧೮ ಗೇಟ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಎಲ್ಲ ಗೇಟ್‌ಗಳ ದುರಸ್ತಿ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದರು.