ಧರ್ಮಗುರುಗಳಾದ ಯಾಸೀನ ಮೌಲಾನ, ರಫೀಕ ಮೌಲಾನ ಮಾತನಾಡಿ, ರಂಜಾನ್ ದೇಹ ಹಾಗೂ ಮನಸ್ಸಿನ ಶುದ್ಧಿಕರಣಗೊಳಿಸಲು ಅತ್ಯಂತ ಮಹತ್ವದ್ದಾಗಿದೆ ಎಂದರು.

ಗಜೇಂದ್ರಗಡ: ಪವಿತ್ರ ರಂಜಾನ್(ಈದ್ ಉಲ್ ಫಿತರ್) ಆಚರಣೆ ನಿಮಿತ್ತ ಸ್ಥಳೀಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಇದಕ್ಕೂ ಮುನ್ನ ಧರ್ಮಗುರುಗುಳಾದ ಯಾಸೀನ ಮೌಲಾನ, ರಫೀಕ ಮೌಲಾನ ಮಾತನಾಡಿ, ರಂಜಾನ್ ದೇಹ ಹಾಗೂ ಮನಸ್ಸಿನ ಶುದ್ಧಿಕರಣಗೊಳಿಸಲು ಅತ್ಯಂತ ಮಹತ್ವದ್ದಾಗಿದೆ. ರಂಜಾನ್ ಹಿನ್ನೆಲೆ ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಮುಸ್ಲಿಮರು ಈದ್ ಉಲ್ ಫಿತರ್ ಹಿಂದಿನ ದಿನ ಚಂದ್ರದರ್ಶನದೊಂದಿಗೆ ಉಪವಾಸ ಅಂತ್ಯಗೊಳಿಸಿದರು. ಹಬ್ಬದ ದಿನ ಪ್ರಾರ್ಥನೆ ಸಲ್ಲಿಸಿ ಝಕಾತ್ ನೀಡಿದರು.

ಅಂಜುಮನ್ ಇಸ್ಲಾಂ ಕಮಿಟಿ ನಿರ್ದೇಶಕ ದಾವಲಸಾಬ ತಾಳಿಕೋಟಿ ಮಾತನಾಡಿ, ಹಬ್ಬಗಳು ಶಾಂತಿ ಸೌಹಾರ್ದದ ಸಂಕೇತವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮಾತುಕತೆ ಮೂಲಕ ಅಂತ್ಯಗೊಳ್ಳಬೇಕು. ಯುದ್ಧಗಳಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಎಲ್ಲರೂ ಪ್ರಾರ್ಥನೆ ಸಲ್ಲಿಸಬೇಕು. ಎಲ್ಲ ಧರ್ಮಗಳ ಜನರೂ ಶಾಂತಿ, ಸಹಬಾಳ್ವೆಗಾಗಿ ಕೈಜೋಡಿಸಬೇಕು ಎಂದರು.

ಪ್ರಾರ್ಥನೆಗೂ ಮುನ್ನು ನಗರದ ಜಾಮೀಯಾ ಮಸೀದಿಯಿಂದ ಕಾಲ್ನಡಿಗೆ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿದ್ದ ಮುಸ್ಲಿಮರು ಪ್ರಾರ್ಥನೆ ಬಳಿಕ ಪರಸ್ಪರರು ಶುಭಾಶಯ ವಿನಿಮಯ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು. ಪೊಲೀಸರು ಭದ್ರತೆ ಒದಗಿಸಿದ್ದರು. ಈ ವೇಳೆ ಧರ್ಮಗುರುಗಳಾದ ನಬಿವುಲ್ಲಾ ಮೌಲಾನ, ಖಲೀಲಾಹ್ಮದ ಖಾಜಿ, ಟೆಕ್ಕದ ದರ್ಗಾದ ನಿಜಾಮುದ್ದಿನಷಾ ಮಕಾನದಾರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಸಾಬ ತಟಗಾರ, ನಹಿಂ ಅಲಾಂ, ಎಂ.ಎಚ್. ಕೋಲಕಾರ, ಎ.ಡಿ. ಕೋಲಕಾರ, ಸುಭಾನಸಾಬ ಆರಗಿದ್ದಿ, ಮುರ್ತುಜಾ ಡಾಲಾಯತ್, ರಾಜು ಸಾಂಗ್ಲೀಕರ, ಮಾಸುಮಲಿ ಮದಗಾರ, ಫಯಾಜ್ ತೋಟದ, ಹಾಸಿಂ ಹಿರೇಹಾಳ, ಇಮ್ರಾನ ಅತ್ತಾರ, ಭಾಷಾ ಮುದಗಲ್, ಮೀರ್ ಅತ್ತಾರ, ಸಮದ್ ಒಂಟಿ, ಮಹ್ಮದ ನಾಲಬಂದ, ಮುನೀರ್ ಮುದಗಲ್ ಸೇರಿ ಇತರರು ಇದ್ದರು.

ಅಂಧಕಾರ ಕಳೆಯುವುದೇ ಈದ್ ಉಲ್ ಫಿತರ್‌ ಆಚರಣೆಯ ಉದ್ದೇಶ

ಮುಳಗುಂದ: ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನದ ಕತ್ತಲೆ ಕಳೆದು ಬದುಕನ್ನು ಹಸನುಗೊಳಿಸಿ ಬೆಳಕಿನೆಡೆ ನಡೆಸುವುದೇ ಈದ್ ಉಲ್ ಫಿತರ್‌ ಆಚರಣೆಯ ಉದ್ದೇಶವಾಗಿದೆ ಎಂದು ಮೌಲಾನ ಉಮ್ಮರ ಸಅದೀ ಬಾಳೆಕುಂದಿ ತಿಳಿಸಿದರು.ಸಮೀಪದ ಚಿಂಚಲಿ ಗ್ರಾಮದ ಈದ್ಗಾ ಮೈದಾನದಲ್ಲಿ ಶನಿವಾರ ನಡೆದ ಪವಿತ್ರ ಈದ್ ಉಲ್ ಫಿತರ್‌ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸೌಹಾರ್ದಯುತ ಬದುಕು ಇಸ್ಲಾಂ ಧರ್ಮದ ಸಂದೇಶವಾಗಿದೆ. ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ಮಾನವೀಯತೆ ಎಲ್ಲಕ್ಕಿಂತ ಮಿಗಿಲಾಗಿದೆ. ಹಸಿದವರು ಯಾರೇ ಆದರೂ ಅವರಿಗೆ ಅನ್ನ ನೀಡಬೇಕು ಎನ್ನುವುದು ಪ್ರವಾದಿಯವರ ವಚನವಾಗಿದೆ. ಪ್ರತಿಯೊಬ್ಬರು ಧಾನ, ಧರ್ಮ, ಪರೋಪಕಾರ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ನಂತರ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ಕೋರಿದರು.ಈ ವೇಳೆ ಗ್ರಾಮದ ಅಂಜುಮನ್ ಕಮಿಟಿ ಅಧ್ಯಕ್ಷ ಟಿಪ್ಪುಸುಲ್ತಾನ ನದಾಫ, ಮಾಬೂಸಾಬ ಹಳೆಮನಿ, ಹುಸೇನಸಾಬ ಹಳೆಮನಿ, ದಸ್ತಗಿರಸಾಬ ಕುದರಿಮೋತಿ, ರಜಾಕಸಾಬ ನಧಾಪ್, ನೂರಾಹ್ಮದ ನದಾಫ, ದಾವಲಸಾಬ ನಡಕಟ್ಟನವರ, ರಂಜಾನಸಾಬ ಕುದರಿಮೋತಿ, ಬಾಷಾಸಾಬ ಹುಯಿಲಗೋಳ, ದಾವಲಸಾಬ ಕಾಲಣ್ಣವರ, ಹುಸೇನಸಾಬ ನಧಾಪ್, ಖಾದರಸಾಬ ಗುಡದೂರ, ಮಹ್ಮದಹನೀಪ ಗುಡದೂರ, ಕಾಶೀಮಸಾಬ ಸಂದಿಮನಿ, ಹುಸೇನಸಾಬ ಕಾಲಣ್ಣವರ, ರಾಜೇಸಾಬ ಸೌದಾಗರ, ಮಕ್ತಮ ಕುದರಿಮೋತಿ, ರಾಜೇಸಾಬ ಕೊಕ್ಕರಗುಂದಿ ಮೊದಲಾದವರು ಇದ್ದರು.